ಜೋಯಿಡಾ: ತಾಲೂಕಿನ ಅವೇಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸ ಕೊಣಪಾ ಗ್ರಾಮಕ್ಕೆ ಸೇತುವೆ ಮತ್ತು ರಸ್ತೆ ನಿರ್ಮಾಣ ಮಾಡುವಂತೆ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಸೇನೆಯ ನೇತೃತ್ವದಲ್ಲಿ ಕೊಣಪಾ ಗ್ರಾಮಸ್ಥರು ಜೋಯಿಡಾ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಹಶೀಲ್ದಾರ್ ಮಂಜುನಾಥ ಮುನ್ನೋಳ್ಳಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.
ಹೊಸ ಕೊಣಪಾ ಗ್ರಾಮಕ್ಕೆ ಸೇತುವೆ ಹಾಗೂ 200 ಮೀ. ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿಕೊಡಬೇಕು ಮತ್ತು ಇಲ್ಲಿ ಸರಕಾರದಿಂದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಮಹಾನಾಯಕ ಡಾ.ಬಿ.ಆರ್ ಅಂಬೇಡ್ಕರ್ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಚಂದ್ರಕಾಂತ ನಡಿಗೇರಾ, ಗ್ರಾಮ ಪಂಚಾಯತ ಸದಸ್ಯ ಸುನಿಲ್ ಕಾಂಬ್ಳೆ, ಸಂಘಟನೆಯ ಪ್ರಮುಖರುಗಳಾದ ಸುರೇಶ ಕೇದಾರಿ, ಬಸವರಾಜ್ ಹರಿಜನ್, ನಿತ್ಯಾ ಕಾಂಬ್ಳೆ , ಸತೀಶ್ ಚೌವ್ಹಾಣ್, ಸರಸ್ವತಿ ಚವ್ಹಾಣ್, ದತ್ತು ಮಾಳಗೆ, ಸದಾಶಿವ ಕಾಂಬ್ಳೆ, ರೇಣುಕಾ ಮೆಲಗೇರಿ, ಬಸವರಾಜ್ ಹುಂಚಳ್ಳಿ, ಗಣೇಶ್ ಟೈಲರ್, ಜ್ಯೋತಿಬಾ ಕೇದಾರಿ, ಮಾರುತಿ ಕಾಂಬಳೆ, ಲಕ್ಷ್ಮಿ ಕಾಂಬಳೆ, ವಿಮಲಾ ಕಾಂಬ್ಳೆ, ಲಕ್ಷವ ಕಾಂಬಳೆ ಮೊದಲಾದವರು ಉಪಸ್ಥಿತರಿದ್ದರು.