ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಉಭಯ ಶ್ರೀಗಳು ಜು.೨೧ ರಿಂದ ಸೆ.19ರ ತನಕ ಚಾತುರ್ಮಾಸ್ಯ ವೃತಾಚರಣೆ ಸಂಕಲ್ಪಿಸಿದರು.
ಮಠದ ಹಿರಿಯ ಯತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು ಹಾಗೂ ಕಿರಿಯ ಸ್ವಾಮೀಜಿ ಶ್ರೀ ಆನಂದಭೋದೇಂದ್ರ ಸರಸ್ವತೀ ಸ್ವಾಮೀಜಿಗಳು ವ್ಯಾಸ ಪೂಜೆ ನಡೆಸಿ ವೃತ ಸಂಕಲ್ಪಿಸಿದರು. ಹಿರಿಯ ಶ್ರೀಗಳ 34ನೇ ಚಾತುರ್ಮಾಸ್ಯ ವ್ರತ ಮತ್ತು ಕಿರಿಯ ಶ್ರೀಗಳ ಮೊದಲನೆಯ ಚಾತುರ್ಮಾಸ್ಯ ವ್ರತ ಇದಾಗಿದೆ.
ಚಾತುರ್ಮಾಸ್ಯದ ಸಂಕಲ್ಪ ದಿನದಂದು ನಾಲ್ಕು ವೇದ, ಉಪನಿಷತ್ತುಗಳು, ಹದಿನೆಂಟು ಪುರಾಣಗಳ ಪಾರಾಯಣಗಳು ನಡೆಯಲಿವೆ. ಪ್ರತಿ ದಿನ ಮಹಾಭಾರತದ ಪ್ರವಚನಗಳು ನಡೆಯಲಿವೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿವಿಧ ಸೀಮೆಗಳ ಶಿಷ್ಯರ ಸೇವೆಗಳು ನಡೆಯಲಿದೆ.