Slide
Slide
Slide
previous arrow
next arrow

ಅರಿವನ್ನು ಮೂಡಿಸುವವನು ನಿಜವಾದ ಗುರು: ಸ್ವರ್ಣವಲ್ಲೀ‌ ಶ್ರೀ

300x250 AD

ವ್ಯಾಸ ಪೂರ್ಣಿಮೆಯಂದು ಪೂಜೆಗೈದ ಯತಿದ್ವಯರು | ಸಾಧಕರಿಗೆ ಸನ್ಮಾನ, ಗೌರವ

ಸ್ವರ್ಣವಲ್ಲೀ: ಪ್ರೇರಣೆಯ ಬುಗ್ಗೆ ಈ ಗುರು ಪೂರ್ಣಿಮೆ ಎಂದು ಸೋಂದಾ‌ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ‌ಮಹಾ ಸ್ವಾಮೀಜಿ ನುಡಿದರು.

ಅವರು ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ರವಿವಾರ ಚಾತುರ್ಮಾಸ್ಯ ಹಿನ್ನಲೆಯಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು‌.
ಗುರು ಪೂರ್ಣಿಮೆಯಂದು ಭಾರತದ ಪ್ರಾಗೈತಿಹಾಸಿಕದ ಗುರುಗಳ ದರ್ಶನ ಅನುಭವ ಆಗುತ್ತದೆ. ವ್ಯಾಸ ಪೂರ್ಣಿಮೆಯು ಪುನಶ್ಚೇತನ ಕೊಡುತ್ತದೆ. ಪ್ರೇರಣೆಯ ಬುಗ್ಗೆ ಈ ಗುರು ಪೂರ್ಣಿಮೆ. ನಮಗೆ‌ ಮಾರ್ಗದರ್ಶನ ಮಾಡಿದವರನ್ನು ಭಕ್ತಿ ಭಾವದಲ್ಲಿ, ದಿವ್ಯ ಶಕ್ತಿ ಎಂದು ನೋಡಬೇಕು ಎಂದರು.
ಗುರುವಿನ‌ ಆಶ್ರಯ ಯಾಕೆ ಬೇಕು. ಅರಿವೇ ಗುರು ಎಂಬುದು ಇದೆ. ಅರಿವು ಗುರು ಹೌದು. ಅರಿವು ಬಂದವನೇ ಗುರು. ಅರಿವನ್ನು ಮೂಡಿಸುವವನೇ ಗುರು. ಸರಿಯಾಗಿ ಕರೆದುಕೊಂಡು ಹೋಗುವ ಅರಿವು ಅನುಭವಗಳಿಂದ ಬರುತ್ತದೆ. ತನ್ನ ಅರಿವೇ ತನ್ನ ಗುರು ಅಂದುಕೊಂಡವನಿಗೆ ಸಾಧನೆಗೆ ಬಹಳ ತಡ ಆಗುತ್ತದೆ. ಅದಕ್ಕಾಗಿ ಅರಿವಿನ ಸಾಕಾರಮೂರ್ತಿಯಾದವನ ಆಶ್ರಯ ಪಡೆಯಬೇಕು ಎಂದರು.

ಸಾನ್ನಿಧ್ಯ ನೀಡಿದ್ದ ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ, ಗುರುವನ್ನು ಆತ್ಮತತ್ವದ ಲಾಭಕ್ಕೆ ಮಾಡಬೇಕು. ಮೋಕ್ಷಕ್ಕಾಗಿ, ಶ್ರೇಯಸ್ಸಿಗಾಗಿ ಗುರುವನ್ನು ಆರಾಧಿಸಬೇಕು. ನಿವೃತ್ತಿ ಮಾರ್ಗದಲ್ಲಿ ಇದ್ದವನಿಗೆ‌ ಮೋಕ್ಷ ಆಗುತ್ತದೆ‌. ಸಾಂಸಾರಿಕನಿಗೆ ಲೌಕಿಕ ಕಾಮನೆಗಳೂ, ಮೋಕ್ಷ ಸಾಧನೆ ಕೂಡ ಆಗುತ್ತದೆ. ಗುರುವಿಗಿಂತ ದೊಡ್ಡವರು ಯಾರೂ ಇಲ್ಲ ಎಂದರು. ಗುರುವಿನಿಂದಲೇ ಜ್ಞಾನ ಸಿದ್ಧಿ. ಪಡೆದ ಜ್ಞಾನಕ್ಕೆ ಗುರುವಿನ‌ ಮುದ್ರೆ ಬೀಳಬೇಕು. ಗುರು ಇಲ್ಲದವನಿಗೆ ಜೀವನದ ಗುರಿ ಸಿಗದು. ಗುರಿ ಕೂಡ ಮಹತ್ವದ್ದು. ಮರಣದ ಆಚೆಗಿರುವ ಸತ್ಯದ ಅರಿವುದೇ ಗುರಿ ಆಗಬೇಕು. ಪ್ರಪಂಚದ ಪ್ರಲೋಭನೆ ಮಧ್ಯದಲ್ಲಿ ಕಣ್ಣಿಗೆ ಕಾಣದ ಆ ಭಗವಂತನ್ನು ಗಟ್ಟಿಯಾಗಿ ಹಿಡಿದು ಆ ಸತ್ಯದ ಕಡೆಗೆ ತೆರಳಬೇಕು. ಈ ದಾರಿಯಲ್ಲಿ ಸಾಗುವಾಗ ಮುಂದೆ ಸಾಗಿದವರ ಹೆಜ್ಜೆ ಗುರುತು, ಮಾರ್ಗದರ್ಶನ ಅಗತ್ಯವಾಗಿದೆ. ಮಳೆ ಎಲ್ಲೋ ಸೇರಿದರೆ ಪ್ರಯೋಜನವಿಲ್ಲ. ಗಂಗೆ ಸೇರಿದರೆ ಅದಕ್ಕೊಂದು ಅರ್ಥ ಎಂದರು.

300x250 AD

ಗಾಯನ ರತ್ನಾಕರ ಎಂಬ ಬಿರುದು ಸನ್ಮಾನ ಸ್ವೀಕರಿಸಿ ಮಾತನಾಡಿದ ಪಂಡಿತ್ ಗಣಪತಿ ಭಟ್ ಹಾಸಣಗಿ, ನಾನು‌ ಕೇಳಿಕೊಂಡು ಈ ಕ್ಷೇತ್ರಕ್ಕೆ ಬಂದವನಲ್ಲ. ತಾನಾಗಿ‌ ಕೂಡಿ ಬಂತು. ಗುರು, ದೇವರ ಆಶೀರ್ವಾದದಿಂದ ಹೀಗಾಗಿದ್ಧೇನೆ. ತಾನ್ಸೇನ್ ಪ್ರಶಸ್ತಿ ಕೂಡ ಬಂದಾಗ ನನಗೆ ಅಚ್ಚರಿ. ಈವರೆಗೆ ಪಡೆದ ಸನ್ಮಾನಗಳಗಿಂತ ಇದು ಧನ್ಯತೆ ಮೂಡಿಸಿದೆ ಎಂದರು.

ಇನ್ನೋರ್ವ ಸನ್ಮಾನಿತ ಶಿಲ್ಪಿ ರಾಮಚಂದ್ರ ಹೆಗಡೆ‌ ಕೆಶಿನ್ಮನೆ, ಗುರುಗಳ ಆರಾಧನ ಬಲ ದೊಡ್ಡದು. ಅವರ ಸಂಕಲ್ಪ ಎಲ್ಲ ಮಾಡಿಸುತ್ತದೆ ಎಂದರು.
ಸಿಬಿಎಸ್ಸಿಯಲ್ಲಿ ಅಧಿಕ ಅಂಕ ಪಡೆದ ಕು. ಸುಘೋಷ ಜೋಶಿ ಅವರನ್ನು ಪುರಸ್ಕರಿಸಲಾಯಿತು. ಮಠದ ಅಧ್ಯಕ್ಷ ವಿ.ಎ‌ನ್.ಹೆಗಡೆ ಬೊಮ್ನಳ್ಳಿ, ಕಾರ್ಯದರ್ಶಿ ಜಿ.ವಿ.ಹೆಗಡೆ ಗೊಡವೆಮನೆ ಇದ್ದರು. ಶಂಕರ ಭಟ್ಟ ಉಂಚಳ್ಳಿ, ಆರ್.ಎಂ.ಹೆಗಡೆ ಮತ್ತಿಹಳ್ಳಿ, ಶಂಕರ ಭಟ್ಟ ಯಲ್ಲಾಪುರ ಸನ್ಮಾನ ಪತ್ರ ವಾಚಿಸಿದರು. ಕೆ.ವಿ.ಭಟ್ಟ ಪರಿಚಯಿಸಿದರು. ಎನ್.ಜಿ.ಹೆಗಡೆ ಭಟ್ರಕೇರಿ ನಿರ್ವಹಿಸಿದರು. ಇದೇ ವೇಳೆ ವಿ.ಮಹಾಬಲೇಶ್ವರ ಭಟ್ಟ ಬಾಸಲ ಅವರು ಬರೆದ ಮಂಗಳಗೌರಿ ವ್ರತ ಕೃತಿ ಬಿಡುಗಡೆಗೊಳಿಸಲಾಯಿತು.

ಹಳೆ‌ ಕಾಲದಲ್ಲಿ ಗಿಡಮರ, ಮಳೆಯೂ ಹೆಚ್ಚಿತ್ತು. ಈ ಗುಡ್ಡ‌ ಕುಸಿತ ಆಗ ಇರಲಿಲ್ಲ. ಈಚೆಗಿನ ಗುಡ್ಡಗಳ ಕುಸಿತಕ್ಕೆ ಗಿಡ‌ ಮರಗಳು ಕಡಿಮೆ ಆಗಿದ್ದೇ ಪ್ರಮುಖ ಕಾರಣ ಆಗಿದೆ. ಹೆದ್ದಾರಿ ಪಕ್ಕದಲ್ಲಿ ಕಡಿದಷ್ಟೇ‌ ಅರಣ್ಯ ಇಲಾಖೆ, ಜನರೂ ಹೆಚ್ಚು ನೆಡಬೇಕು.–
ಸ್ವರ್ಣವಲ್ಲೀ ಶ್ರೀ

Share This
300x250 AD
300x250 AD
300x250 AD
Back to top