ದಾಂಡೇಲಿ: ನಗರದ ವ್ಯಾಪ್ತಿಯಲ್ಲಿನ ನಗರದ ನೀರಿನ ಮೂಲಗಳಾದ ನದಿ, ತೊರೆ,ಹಳ್ಳ, ಕೆರೆ, ಬಾವಿ ಇವುಗಳ ನೀರು ಮಾಲಿನ್ಯಗೊಳದಂತೆ ಸಂರಕ್ಷಿಸುವ ಉದ್ದೇಶದಿಂದ ಭಾರ ಲೋಹ ಮಿಶ್ರಿತ ರಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡಿರುವ ಯಾವುದೇ ರೀತಿಯ ಗಣೇಶ ವಿಗ್ರಹಗಳು ಹಾಗೂ ಭಾರ ಲೋಹದ ಮಿಶ್ರಿತ ರಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡಂತಹ ಯಾವೂದೇ ರೀತಿಯ ಇತರೆ ವಿಗ್ರಹಗಳ ಉತ್ಪಾದನೆ ಮಾರಾಟ ನೀರಿನ ಮೂಲಗಳಲ್ಲಿ ವಿಸರ್ಜಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪ್ಲಾಸ್ಟರ್ ಆಪ್ ಪ್ಯಾರಿಸ್ ಮತ್ತು ರಾಸಾಯನಿಕ ವಸ್ತುಗಳಿಂದ ಮೂರ್ತಿಗಳನ್ನು ತಯಾರಿಸಲು ಅನುಮತಿ ಇರುವುದಿಲ್ಲ ಆದ್ದರಿಂದ ದಾಂಡೇಲಿ ನಗರದ ವ್ಯಾಪ್ತಿಯಲ್ಲಿ ಸದರಿ ಮೂರ್ತಿಗಳು ನಿಷೇಧವಾಗಿರಿವುದರಿಂದ ಮೂರ್ತಿ ತಯಾರಿಕೆಯಲ್ಲಿ ಕೇವಲ ಮಣ್ಣಿನ ಮೂರ್ತಿಗಳನ್ನು ಮಾರಾಟ ಮಾಡಲು ತಿಳಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಕಾನೂನು ರಿತ್ಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದಾಂಡೇಲಿ ನಗರಸಭೆಯ ಪೌರಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.