ಸಿದ್ದಾಪುರ: ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಗಾಳಿ ಮಳೆಗೆ ಕಲ್ಲೂರ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಸರಕಾರಿ ಬಾವಿ ಕುಸಿದು ಬಿದ್ದಿದೆ, ಸುಮಾರು 10 ಅಡಿ ವೃತ್ತಾಕಾರದಲ್ಲಿ ಭೂ ಕುಸಿತ ಉಂಟಾಗಿದ್ದು 15 ಅಡಿ ಆಳದವರೆಗೆ ಭೂಮಿ ಒಳಗೆ ಇಳಿದಿದೆ. ವಿಷಯ ತಿಳಿದ ಗ್ರಾಮಸ್ಥರು ಅಚ್ಚರಿಗೊಳಗಾಗಿ ಕುತೂಹಲದಿಂದ ವೀಕ್ಷಿಸಿದರು. ಸ್ಥಳಕ್ಕೆ ಉಪತಹಸೀಲ್ದಾರ್ ಡಿ.ಎಂ.ನಾಯ್ಕ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸುರಕ್ಷತಾ ಕ್ರಮದ ಬಗ್ಗೆ ಕಾವಚೂರು ಗ್ರಾಮ ಪಂಚಾಯತಿಗೆ ಮಾಹಿತಿ ನೀಡಿದ್ದಾರೆ.
ಭಾರೀ ಮಳೆಗೆ ಕುಸಿದ ಸರ್ಕಾರಿ ಬಾವಿ
