Slide
Slide
Slide
previous arrow
next arrow

ಕಾರುಗಳ ನಡುವೆ ಡಿಕ್ಕಿ: ಮಹಿಳೆಗೆ ಗಾಯ

300x250 AD

ಯಲ್ಲಾಪುರ: ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಓರ್ವ ಮಹಿಳೆ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ತಾಲೂಕಿನ ಆರತಿಬೈಲ ಬಳಿ ನಡೆದಿದೆ.
ಅಂಕೋಲಾ ತಾಲೂಕಿನ ಹಿಲ್ಲೂರಿನ ಕಮಲಾಕ್ಷಿ ಮಹಾಬಲೇಶ್ವರ ಭಟ್ಟ ಗಾಯಗೊಂಡ ಮಹಿಳೆ. ಅಂಕೋಲಾ ಕಡೆಗೆ ಹೋಗುತ್ತಿದ್ದ ಕಾರಿಗೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಗಾಯಗೊಂಡಿದ್ದು, ಕಾರು ಜಖಂಗೊಂಡಿದೆ.
ಜಖಂಗೊಂಡ ಕಾರಿನ ಚಾಲಕ ಹಿಲ್ಲೂರಿನ ನಾರಾಯಣ ಸುಬ್ರಾಯ ಭಟ್ಟ ಅವರು ಡಿಕ್ಕಿ ಹೊಡೆದ ಕಾರಿನ ಚಾಲಕ ವಿನಾಯಕ ಮೊಗೇರ ವಿರುದ್ಧ ದೂರು ನೀಡಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top