ಜೋಯಿಡಾ: ತಾಲೂಕಾದ್ಯಂತ ಕಳೆದ ಮೂರು ದಿನಗಳಿಂದ ಅಬ್ಬರದ ಭಾರಿ ಮಳೆ ಯಾಗುತ್ತಿದ್ದು,ಹಳ್ಳ – ಕೊಳ್ಳಗಳು, ಕೆರೆ,ನದಿಗಳು ತುಂಬಿ ಹರಿಯುತ್ತಿದೆ.
ತಾಲೂಕಿನ ಪ್ರಮುಖ ನದಿಗಳಾದ ಕಾಳಿ,ಪಾಂಡ್ರಿ, ನಾಗಿ, ನಾಶಿ, ಕಾನೇರಿ, ವಾಕಿ ನದಿಗಳು ತುಂಬಿ ಹರಿಯುತ್ತಿದೆ.ಅಪ್ಪರ್ ಕಾನೇರಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ.ಇದರಿಂದ ಕುಂಡಲ ಸೇತುವೆ ಮುಳುಗಿದ್ದು,ಕುಂಡಲ, ಕುರಾವಲಿ,ನವರ್,ಕೇಲೋಲಿ,ಘಟ್ಟಾವ್ ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ಅಪ್ಪರ್ ಕಾನೇರಿ ಜಲಾನಯನ ಪ್ರದೇಶದಲ್ಲಿ 200 ಮಿ.ಮೀ ಮಳೆ ದಾಖಲಾಗಿದೆ. ಸೂಪಾ ಜಲಾನಯನ ಪ್ರದೇಶವಾದ ಡಿಗ್ಗಿ, ಕ್ಯಾಸಲರಾಕ್,ರಾಮನಗರ ಈ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಕ್ಯಾಸಲರಾಕ್ ಪ್ರದೇಶದಲ್ಲಿ ಈ ವರ್ಷದ ಗರಿಷ್ಠ221 ಮಿ.ಮೀ ಮಳೆ ದಾಖಲಾಗಿದೆ.