ಜೋಯಿಡಾ: ತಾಲೂಕಿನ ಅನಮೋಡ – ರಾಮನಗರ – ಗೋವಾ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು ಅತಿಯಾದ ಮಳೆಯಿಂದಾಗಿ ರಸ್ತೆಯಲ್ಲಿಯೇ ನೀರು ನಿಂತಿದೆ, ಅಲ್ಲದೇ ಹೊಂಡಮಯ ರಸ್ತೆಯಿಂದಾಗಿ ವಾಹನ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.
ಶಾಲಾ ಕಾಲೇಜು ಮಕ್ಕಳಿಗೆ ಹಾಳಾದ ರಸ್ತೆಯಿಂದಾಗಿ ಶೈಕ್ಷಣಿಕ ಸಂಸ್ಥೆಗಳಿಗೆ,ಮನೆಗೆ ತಲುಪಲು ವಿಳಂಬವಾಗುತ್ತಿದೆ. ಇದರಿಂದ ದೈನಂದಿನ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ ಸಂಬಂಧಪಟ್ಟ ಇಲಾಖೆಯವರು ಕೂಡಲೇ ರಸ್ತೆ ಸರಿಪಡಿಸಬೇಕೆಂದು ಜೋಯಿಡಾ ತಾಲೂಕಾ ಉಪಾಧ್ಯಕ್ಷ ಗುರಪ್ಪ ಹಣಬರ ಆಗ್ರಹಿಸಿದ್ದಾರೆ. ತಿನೈಘಾಟನಿಂದ ಅನಮೋಡವರೆಗೆ ರಸ್ತೆ ತೀರಾ ಹಾಳಾಗಿದ್ದು,ರಸ್ತೆಗಿಂತ ಹೊಂಡಗಳೇ ಹೆಚ್ಚಿದೆ,ಕೆಲ ಕಡೆಗಳಲ್ಲಿ ರಸ್ತೆಯೇ ಇಲ್ಲ ಅಂದರೇ ತಪ್ಪಾಗಲಾರದು.ಬುಧವಾರ ತಿನೈಘಾಟ ಬಳಿ ರಸ್ತೆಯಲ್ಲಿ ನೀರು ನಿಂತಿದ್ದರಿಂದ ರಸ್ತೆ ದಾಟುವಾಗ ಎಲ್ಲಿ ಹೊಂಡವಿದೆಯೆಂದು ಗೊತ್ತಾಗದೇ ಟ್ರ್ಯಾಕ್ಟರ್ ಮತ್ತು ಜೀಪೊಂದು ಆಯ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಕಳೆದ 6 ವರ್ಷಗಳಿಂದ ರಸ್ತೆ ಹೀಗೆ ಇದ್ದು ಪ್ರತಿವರ್ಷ ಮಳೆಗಾಲದಲ್ಲಿ ಇಲ್ಲಿನ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.ರಸ್ತೆ ಹೆದ್ದಾರಿ ಪ್ರಾಧಿಕಾರದವರನ್ನು ಎಚ್ಚರಿಸಿ ಕೆಲಸ ಮಾಡಬೇಕಾದ ರಾಜಕಾರಣಿಗಳು, ಅಧಿಕಾರಿಗಳು ಬೆಚ್ಚಗೆ ಮಲಗಿದ್ದಾರೆ ಎಂದರೆ ತಪ್ಪಾಗಲಾರದು.ಈಗಾಗಲೇ 6 ವರ್ಷ ಕಳೆದ ಈ ರಸ್ತೆ ಕಾಮಗಾರಿಗೆ ಇನ್ನೂ ಎಷ್ಟು ವರ್ಷಗಳನ್ನು ಕಾಯಬೇಕು ಎಂದು ಕಾದು ನೋಡಬೇಕಿದೆ.