ಕುಮಟಾ: ಇಲ್ಲಿನ ರಜತ ಜೈನ್ ಪ್ರಸ್ತುತ ಸಾಲಿನ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಮೊದಲನೇ ಪ್ರಯತ್ನದಲ್ಲೇ ಎಲ್ಲಾ ಮೂರು ಹಂತದಲ್ಲಿಯೂ ಉತ್ತೀರ್ಣರಾಗಿ ಸಿಎ ತೇರ್ಗಡೆಗೊಳ್ಳುವುದರ ಮೂಲಕ ಅಧಿಕೃತ ಲೆಕ್ಕ ಪರಿಶೋಧಕರಾಗಿ ಹೊರಹೊಮ್ಮಿದ್ದಾರೆ.
ಇವರು ಕುಮಟಾದ ಯಾಣದ ಸಂಡಳ್ಳಿಯ ಉದಯಕುಮಾರ ಜೈನ ಹಾಗೂ ಕೇಸರಿ ಜೈನ ಇವರ ಪುತ್ರನಾಗಿದ್ದು, ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ ಪ್ರೌಢಶಾಲೆ ಪೂರೈಸಿ, ಮಂಗಳೂರಿನ ಆಳ್ವಾಸಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿ ಹಾಗೂ ಬೆಂಗಳೂರಿನ ಸಿಂಗಿ & ಕೋ ಆಡಿಟ್ ಡಿಪಾರ್ಟ್ಮೆಂಟ್ ಅವರ ನೇತೃತ್ವದಲ್ಲಿ ಆರ್ಟಿಕಲ್‌ಶಿಪ್ ಪೂರೈಸಿ ಈ ಅತ್ಯುನ್ನತ ಸಾಧನೆಗೈದಿದ್ದಾನೆ.
ಬಾಲ್ಯದಿಂದಲೇ ಇಂತಹ ಪ್ರತಿಷ್ಠಿತ ಕನಸು ಕಂಡ ಈತ , ಸತತ ಪರಿಶ್ರಮದಿಂದ ತಾನಿಟ್ಟ ಗುರಿಯನ್ನು ತಲುಪಬಲ್ಲೇ ಎಂಬ ಆತ್ಮವಿಶ್ವಾಸ , ಬಂಧು-ಬಾಂಧವರು ,ಗುರುಗಳು ಹಾಗೂ ತನ್ನ ಮಿತ್ರಬಾಂಧವರ ಮಾರ್ಗದರ್ಶನ ಈ ಸಾಧನೆಗೆ ಕಾರಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾನೆ.