ಕಾರವಾರ: ICAR -ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ (CMFRI), ಪ್ರಾದೇಶಿಕ ಕೇಂದ್ರ ಕಾರವಾರ ಹಾಗೂ
ವಿಜ್ಞಾನ ಕೇಂದ್ರ ಕಾರವಾರ ಇವರ ಸಹಯೋಗದಲ್ಲಿ ರಾಷ್ಟ್ರೀಯ ಮೀನು ಕೃಷಿಕರ ದಿನ 2024 ರ ಅಂಗವಾಗಿ ಗುರುವಾರ ಕರಾವಳಿ ಪ್ರದೇಶದ ಮೀನು ಕೃಷಿಕರಿಗಾಗಿ ಪಂಜರು ಮೀನು ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಉಪನ್ಯಾಸ ಕಾರ್ಯಕ್ರಮವನ್ನು ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರದಲ್ಲಿ ಹಮ್ಮಿಕೊಳ್ಳಲಾಯಿತು.
ಮಾಜಿ ಎ.ಡಿ.ಜಿ. ICAR ಡಾ. ಪ್ರವೀಣ ಪುತ್ರಾ ಮಾತನಾಡಿ ರಾಷ್ಟ್ರೀಯ ಮೀನು ಕೃಷಿಕರ ದಿನ ಆಚರಿಸುವ ಉದ್ದೇಶ, ಸಿ.ಎಮ್.ಎಫ್.ಆರ್.ಐ ಸಂಸ್ಥೆಯು ಹಲವಾರು ಜಾತಿಯ ಮೀನುಗಳ ಕೃಷಿ ಮಾಡಿ ಪ್ರಶಂಸೆಗೆ ಪಾತ್ರವಾದ ಸಂಸ್ಥೆಯಾಗಿದೆ ಎಂದು ತಿಳಿಸಿದರು.
ಮಾಜಿ SIC ICAR-CMFRI ಡಾ. ಪ್ರತಿಭಾ ರೋಹಿತ ಕಾರವಾರದಲ್ಲಿ ಪಂಜರು ಮೀನು ಕೃಷಿ ಹೇಗೆ ಪ್ರಾರಂಭಿಸಲಾಯಿತು ಇದರಲ್ಲಿ ವಿಜ್ಞಾನಿಗಳು, ಕೈಗಾರಿಕೆಗಳು ಹಾಗೂ ಮೀನು ಕೃಷಿಕರು ಇವರ ಪಾತ್ರದ ಬಗ್ಗೆ ತಿಳಿಸಿದರು.
ಕಾರವಾರ ಡಿ.ಡಿ.ಎಮ್. ನಬಾರ್ಡ್ ಸಹಾಯಕ ಮುಖ್ಯ ಸಂಸ್ಥಾಪಕ ಸುಶೀಲ ನಾಯ್ಕ, ಇವರು ಪಂಜರು ಮೀನು ಕೃಷಿ ಯೋಜನೆಗೆ ತಗಲುವ ವೆಚ್ಚಕ್ಕೆ ಬ್ಯಾಂಕ್ ಮೂಲಕ ಹೇಗೆ ಹಣಕಾಸಿನ ನೆರವು ನೀಡಲಾಗುವುದು ಎಂದು ತಿಳಿಸಿದರು.
ಅಬೀಸ್ ಫೀಡ್ಸ್ ಪೈ. ಲಿಮಿಟೆಡ್ ಉಪಾಧ್ಯಕ್ಷ ಮೊಹಮ್ಮದ್ ಆಸೀಫ್ ಮಾತನಾಡಿ ಸಂಸ್ಥೆಯು ಪ್ರೋಟಿನ್ ಪೋಷಣೆಯುಕ್ತ ಸಸ್ಯಹಾರಿ ಹಾಗೂ ಮಾಂಸಹಾರಿ ಆಹಾರವನ್ನು ತಯಾರಿಸಲಾಗುತ್ತದೆ ಈ ಆಹಾರವು ಯಾವುದೇ ನೀರಿನಲ್ಲಿ ಬೆಳೆಯುವ ಮೀನುಗಳಿಗೆ ಉಪಯುಕ್ತವಾಗಿರುತ್ತದೆ ಎಂದು ತಿಳಿಸಿದರು.
ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರದ ಸದಸ್ಯ ಕಾರ್ಯದರ್ಶಿ ಡಾ. ಸಂಜೀವ ದೇಶಪಾಂಡೆ, ದೇಶದಲ್ಲಿ ಪಂಜರು ಮೀನು ಕೃಷಿ ಬಹಳಷ್ಟು ಪ್ರಮುಖ್ಯತೆಯನ್ನು ಹೊಂದಿದ್ದು ಇದಕ್ಕೆ ಸಿ.ಎಮ್.ಎಪ್.ಆರ್.ಐ ಸಂಸ್ಥೆಯ ಕಾರ್ಯ ಶ್ಲಾಘನೀಯವಾದುದ್ದು ಎಂದರು.
ಇದೇ ಸಂದರ್ಭದಲ್ಲಿ ಪಂಜರು ಮೀನು ಕೃಷಿಯಲ್ಲಿ ಸಾಧನೆ ಮಾಡಿದ ಕುಮಟಾ ತಾಲೂಕಿನ ಪ್ರಗತಿಪರ ಮೀನು ಕೃಷಿಕರಾದ ಪ್ರವೀಣ ಮಹಾಬಳೇಶ್ವರ ಹರಿಕಂತ್ರ ಹಾಗೂ ಜಟ್ಟಿ ಮಕ್ರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಜ್ಞಾನಿ ಡಾ. ಸುರೇಶ ಬಾಬು ಪಿ.ಪಿ. ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಲಿಂಗಪ್ರಭು ವಂದಿಸಿದರು. ಹಿರಿಯ ತಾಂತ್ರಿಕ ಸಹಾಯಕಿ ಸೋನಾಲಿ ಎಸ್.ಎಮ್. ನಿರೂಪಿಸಿದರು. ಮೀನು ಕೃಷಿಕರು, CMFRI ಕಾರವಾರ, ಮಂಗಳೂರು, ಕೊಚ್ಚಿಯ ವಿಜ್ಞಾನಿಗಳು & ತಾಂತ್ರಿಕ ಸಹಾಯಕರು ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರದ ಸಿಬ್ಬಂದಿಗಳು ಭಾಗವಹಿಸಿದ್ದರು.