ಜೋಯಿಡಾ:ತಾಲೂಕಿನ ಜೋಯಿಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಮೇಸ್ತಬಿರೋಡಾದ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಮೇಲೆ ಒಣಗಿದ ಮರವೊಂದು ಬೀಳುವ ಸ್ಥಿತಿಯಲ್ಲಿದ್ದು ಇದನ್ನು ಕೂಡಲೇ ಅರಣ್ಯ ಇಲಾಖೆಯವರು ತೆರವು ಮಾಡಬೇಕೆಂದು ಜೋಯಿಡಾ ಗ್ರಾಮ ಪಂಚಾಯತ ಉಪಾಧ್ಯಕ್ಷ ಸಂತೋಷ ಮಂಥೆರೋ ಆಗ್ರಹಿಸಿದ್ದಾರೆ.
ಶಾಲೆಯ ಹತ್ತಿರದಲ್ಲಿ ಒಣಗಿದ ಮರವೊಂದು ಇದ್ದು ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದರು ಒಣಗಿದ ಮರವನ್ನು ತೆಗೆಯುವ ಕೆಲಸ ಮಾಡುತ್ತಿಲ್ಲ,ಮರ ಬಿದ್ದರೆ ಶಾಲಾ ಕಟ್ಟಡಕ್ಕೆ ಹಾನಿ ಆಗುವದಲ್ಲದೇ ಶಾಲೆಯಲ್ಲಿ ಓದುವ ಮಕ್ಕಳಿಗೂ ತೊಂದರೆ.ಈ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆಯವರು ಮುತುವರ್ಜಿ ವಹಿಸಿ ಕೂಡಲೇ ಮರವನ್ನು ತೆರವುಗೊಳಿಸಬೇಕೆಂದು ಎಂದು ಹೇಳಿದ್ದಾರೆ. ಅದೇ ರೀತಿ ಜೋಯಿಡಾ ಪ್ರವಾಸಿ ಮಂದಿರದ ಬಳಿ ಎರಡು ಒಣಗಿದ ಮರವಿದ್ದು ಅದು ಕೂಡ ಶಾಲೆಯ ಹತ್ತಿರವಿದ್ದು ,ಮಕ್ಕಳು ಶಾಲೆಗೆ ಹೋಗುವ ದಾರಿಯಲ್ಲಿ ಸಾಗುವ ಸಂದರ್ಭದಲ್ಲಿ ಬೀಳುವ ಸಾಧ್ಯತೆ ಇದ್ದು ಇದನ್ನು ಸಹ ತೆರವು ಮಾಡಬೇಕೆಂದು ಹೇಳಿದರು.
ಈಗಾಗಲೇ ಜೋಯಿಡಾದ ಶಾಸಕರಾದ ಆರ್. ವಿ. ದೇಶಪಾಂಡೆ ಸಭೆಯಲ್ಲಿ ಶಾಲಾ ಕಾಲೇಜು, ಅಂಗನವಾಡಿ ಅಕ್ಕ – ಪಕ್ಕ ಅಪಾಯಕಾರಿ ಮರಗಳಿದ್ದರೆ ತೆರವು ಮಾಡಬೇಕೆಂದು ತಿಳಿಸಿದ್ದರೂ ಅಧಿಕಾರಿಗಳು ತಮಗೆ ಸಂಬಂಧ ಇಲ್ಲದಂತೆ ವರ್ತಿಸುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.