ಕಾರವಾರ: 70ನೇ ವಯಸ್ಸಿನಲ್ಲಿಯೂ ಹಣ್ಣು-ತರಕಾರಿ ಮಾರಿ ಬದುಕು ಕಟ್ಟಿಕೊಂಡಿದ್ದ ತರ‍್ಲೆಭಾಗದ ಗುಲಾಬಿ ಮಾಂಜ್ರೇಕರ್ ಎಂಬಾತರು ಮಣ್ಣಿನ ಅಡಿ ಸಿಲುಕಿ ಉಸಿರುಕಟ್ಟಿ ಸಾವನಪ್ಪಿದ್ದಾರೆ.
ಸದಾಶಿವಗಡ ಬಳಿಯ ತರ‍್ಲೆಭಾಗದ ಆರವ್‌ದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯ ಮೇಲೆ ಅವರು ವಾಸವಾಗಿದ್ದ ಮಣ್ಣಿನ ಮನೆಯ ಗೋಡೆ ಬಿದ್ದಿದೆ. ಧಾರಾಕಾರವಾಗಿ ಸುರಿದ ಮಳೆಗೆ ಮನೆ ಕುಸಿದಿದ್ದು, ಅವರು ಅಲ್ಲಿಯೇ ಕೊನೆಉಸಿರೆಳೆದಿದ್ದಾರೆ. ಈಕೆಯ ಮಗ ಗಣಪತಿ ಮಾಂಜ್ರೇಕರ್ ತನ್ನ ಮಕ್ಕಳ ವಿದ್ಯಾಬ್ಯಾಸದ ಸಲುವಾಗಿ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ನಿತ್ಯ ತಾಯಿಯನ್ನು ನೋಡಲು ಮಣ್ಣಿನ ಮನೆಗೆ ಬರುತ್ತಿದ್ದ. ಜೂ.28ರಂದು ಮಧ್ಯಾಹ್ನ ಮನೆಗೆ ಬಂದಾಗ ಇಡೀ ಮನೆ ಕುಸಿದಿರುವುದು ಕಾಣಿಸಿದೆ. ತಾಯಿಯ ಹುಡುಕಾಟ ನಡೆಸಿದಾಗ ಆಕೆ ಮಣ್ಣಿನ ಅಡಿಗೆ ಬಿದ್ದಿದ್ದು, ಮಣ್ಣನ್ನು ಸರಿಸಿದಾಗ ಆಕೆ ಸಾವನಪ್ಪಿರುವುದು ಅರಿವಿಗೆ ಬಂದಿದೆ.