Slide
Slide
Slide
previous arrow
next arrow

ಕುರುಡು ಕಾಂಚಾಣಕ್ಕೆ ಹೈನುಗಾರರು ಒಲಿಯಲ್ಲ;ಅಭಿವೃದ್ಧಿಯಲ್ಲಿ ಗೆಲುವಿದೆ; ಸುರೇಶ್ಚಂದ್ರ ಕೆಶಿನ್ಮನೆ

300x250 AD

ಸ್ವಾರ್ಥಕ್ಕಾಗಿ ಕಾಣದ ಕೈ ರಾಜಕಾರಣಕ್ಕೆ ಆಕ್ಷೇಪ | ಮತದಾರರ ಮೇಲೆ ವಿಶ್ವಾಸವಿದೆ ಎಂದ ಕೆಶಿನ್ಮನೆ

ಶಿರಸಿ: ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳು ಅಮಿಷ, ಆಸೆಗಳಿಗೆ ಬಲಿಯಾಗದೇ, ಹಾಲು ಸಂಘಗಳ ಸರ್ವಾಂಗೀಣ ಅಭಿವೃದ್ಧಿ ಸಮಸ್ತ ಹೈನುಗಾರರ ಹಿತಕಾಪಾಡುವ ಆಶಯವನ್ನು ಹೊಂದಿರುವ ನನ್ನನ್ನು ಈ ಬಾರಿಯೂ ಬೆಂಬಲಿಸಿ ಇನ್ನೂ ಉತ್ತಮ ರೀತಿಯಲ್ಲಿ ಗೋ ಮಾತೆಯ’ ಸೇವೆಯನ್ನು ಮತ್ತೊಮ್ಮೆ ಮಾಡಲು ನನಗೆ ಅವಕಾಶ ಮಾಡಿಕೊಡಬೇಕೆಂದು ಧಾರವಾಡ ಹಾಲು ಒಕ್ಕೂಟದ ಶಿರಸಿ ತಾಲೂಕಾ ವ್ಯಾಪ್ತಿಯ ಅಭ್ಯರ್ಥಿ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ವಿನಂತಿಸಿದ್ದಾರೆ.

ಅವರು ಶುಕ್ರವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ 2024 ನೇ ಸಾಲಿನ ಮುಂದಿನ 5 ವರ್ಷಗಳ ಅವಧಿಗೆ ನಡೆಯುವ ಆಡಳಿತ ಮಂಡಳಿಯ ಚುನಾವಣೆಯು ಜೂ. 30 ರಂದು ಒಕ್ಕೂಟದ ಧಾರವಾಡದ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ. ಶಿರಸಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಽಯಾಗಿ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕನಾಗಿ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ನಿರ್ದೇಶಕನಾಗಿ ಆಯ್ಕೆ ಆದ ದಿನದಿನಂದಲೂ ಇಲ್ಲಿಯವರೆಗೆ ಅಂದರೆ ಕಳೆದ 10 ವರ್ಷಗಳಿಂದ ನನ್ನ ವ್ಯಾಪ್ತಿಯ ಅಂದರೆ ಶಿರಸಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಅಭಿವೃದ್ಧಿ ಪಡಿಸಿ ಹಾಲಿನ ಉತ್ಪಾದನೆಯಲ್ಲಿ, ಹಾಲಿನ ಮಾರುಕಟ್ಟೆಯಲ್ಲಿ, ಗಣನೀಯವಾಗಿ ಅಭಿವೃದ್ಧಿ ಹೊಂದಿ ಪ್ರಗತಿ ಸಾಯಿಸಿದ್ದೇನೆಂಬ ಸಮಾಧಾನ ನನಗಿದೆ. ಅಭಿವೃದ್ಧಿ ಎಂಬುದು ನಿಂತ ನೀರಲ್ಲ, ಅದು ಹರಿಯುವ ನದಿಯ ರೀತಿಯಲ್ಲಿ ನಿರಂತರವಾಗಿರಬೇಕು ಎಂಬ ಸದುದ್ದೇಶದಿಂದ ಮುಂಬರುವ ದಿನಗಳಲ್ಲೂ ಶಿರಸಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಉನ್ನತಿಗಾಗಿ ಶ್ರಮಿಸಬೇಕೆಂಬ ಆಶಯದಿಂದ ಶಿರಸಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಹಾಲು ಉತ್ಪಾದಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರ ಒತ್ತಾಸೆಯ ಮೇರೆಗೆ ಶಿರಸಿ ತಾಲೂಕಿನ ಕ್ಷೇತ್ರದ ಪ್ರತಿನಿಧಿಯಾಗಿ ಚುನಾವಣೆಯನ್ನು ಎದುರಿಸಲು ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದೇನೆ ಎಂದರು.

ನಿರ್ದೇಶಕನಾಗಿ ಆಯ್ಕೆಯಾದ ನಂತರ ಹಾಲು ಸಂಘಗಳ ಕುಂದು, ಕೊರೆತಗಳನ್ನು ನಿವಾರಿಸುವಂತಹ ಕೆಲಸಗಳನ್ನು ಮಾಡುತ್ತಿದ್ದೇನೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪಿಪಿಪಿ ಯೋಜನೆ ಅಡಿಯಲ್ಲಿ ಶಿರಸಿಯ ಹನುಮಂತಿಯಲ್ಲಿ ಹಾಲು ಪ್ಯಾಕಿಂಗ್ ಘಟಕವನ್ನು ಸ್ಥಾಪಿಸಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ. ಈ ಮೊದಲು ಜಿಲ್ಲೆಯ ಹಾಲು ಶೇಖರಣೆಯಾಗಿ ಟ್ಯಾಂಕರ್ ಮೂಲಕ ಧಾರವಾಡಕ್ಕೆ ಹೋಗಿ ಪ್ಯಾಕ್ ಆಗಿ ಗ್ರಾಹಕರಿಗೆ ಎರಡು ದಿನದ ನಂತರ ಸೇರುತ್ತಿತ್ತು. ಇದನ್ನು ಮನಗಂಡು ಗ್ರಾಹಕರಿಗೆ ಉತ್ತಮ ತಾಜಾ ಹಾಲನ್ನು ಒದಗಿಸುವ ದೃಷ್ಟಿಯಿಂದ ಶಿರಸಿಯಲ್ಲಿಯೇ ಪಿಪಿಪಿ ಯೋಜನೆ ಅಡಿಯಲ್ಲಿ ಹಾಲು ಪ್ಯಾಕಿಂಗ್ ಘಟಕವನ್ನು ಸ್ಥಾಪಿಸಲಾಯಿತು. ಇದರಿಂದ ಜಿಲ್ಲೆಯ ಸಮಸ್ತ ನಂದಿನಿ ಗ್ರಾಹಕರಿಗೆ ತಾಜಾತನದಿಂದ ಕೂಡಿದ ಹಾಲು ಸಂಘಗಳಲ್ಲಿ ಶೇಖರಣೆಯಾದಹಾಲು ಅದೇ ದಿನ ನಂದಿನಿ ಗ್ರಾಹಕರಿಗೆ ಲಭ್ಯವಾಗುವಂತಾಯಿತು. ಟ್ಯಾಂಕರ್ ಮೂಲಕ ಧಾರವಾಡಕ್ಕೆ ಕಳುಹಿಸಲಾಗುತ್ತಿದ್ದ ಹಾಲಿನ ಸಾಗಾಟ ವೆಚ್ಚ ಕಡಿಮೆ ಮಾಡಲಾಯಿತು. ಜಿಲ್ಲೆಯಲ್ಲಿ ಹಾಲಿನ ಮಾರಾಟ ಪ್ಯಾಕಿಂಗ್ ಘಟಕದ ಸ್ಥಾಪನೆಯಾಗುವ ಮೊದಲು ಪತ್ನಿ ದಿನ ಅಂದಾಜು 40 ರಿಂದ 50 ಸಾವಿರ ಲೀಟ‌ರ್ನನಷ್ಟು ಇದ್ದಿದ್ದು, ಪತ್ರಿ ದಿನ ಅಂದಾಜು 70 ರಿಂದ 80 ಸಾವಿರ ಲೀಟರ್‌ಗೆ ಹೆಚ್ಚಳವಾಯಿತು. ಜಿಲ್ಲೆಯನ್ನು ನಮ್ಮ ನಂದಿನಿ ಬ್ರಾಂಡ್ ಮಾರುಕಟ್ಟೆಯನ್ನು ಇನ್ನೂ ಹೆಚ್ಚಿಸುವ ಅವಕಾಶವಿದ್ದು, ಮುಂದಿನ ದಿನಗಳಲ್ಲಿ ಪ್ರತಿ ದಿನಕ್ಕೆ ॥ ಲಕ್ಷ ಲೀಟರ್ ಹಾಲು ಹಾಗೂ ಮೊಸರನ್ನು ಮಾರಾಟ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

300x250 AD

ಕಳೆದ ವರ್ಷ ‘ಚರ್ಮಗಂಟು’ ರೋಗ ಆಕ್ರಮಿಸಿಕೊಂಡ ಪ್ರಭಾವ ತಾಲೂಕಿನಲ್ಲಿ ಜಾನುವಾರುಗಳು ಸಾವನ್ನಪ್ಪಿದ ಕಾರಣದಿಂದ ಹಾಗೂ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಬಹುತೇಕ ವಯಸ್ಸಾದವರೇ ಇರುವ ಕಾರಣಹೈನುಗಾರಿಕೆಯನ್ನು ಮುನ್ನಡೆಸಿಕೊಂಡು ಹೋಗಲು ಅವರಿಗೆ ಆಸಕ್ತಿಯಿದ್ದರೂ ಅನಿರ್ವಾಯತೆಯಿಂದ ಹೈನುಗಾರಿಕೆಯನ್ನು ತ್ಯಜಿಸುವ ಸಂದರ್ಭ ಬಂದ ಕಾರಣ ತಾಲೂಕಿನಲ್ಲಿ ಹಾಲಿನ ಪ್ರಮಾಣ ಕುಂಠಿತವಾಗಿ ಪ್ರತೀ ದಿನಕ್ಕೆ 12,000 ಲೀಟರ್. ಜಿಲ್ಲೆಯಲ್ಲಿ 29,300 ಲೀಟರ್‌ಗೆ ತಲುಪಿತ್ತು. ನಂತರದ ದಿನಗಳಲ್ಲಿ ನನ್ನ ಸತತ ಪ್ರಯತ್ನದಿಂದ ಜಿಲ್ಲೆಯ ಜನಪ್ರತಿನಿಧಿಗಳಿಂದ, ಉದ್ಯಮಿಗಳಿಂದ, ದಾನಿಗಳಿಂದ ಅನುದಾನವನ್ನು ಪಡೆದು ಇಂದು ನಾವು ಹಾಲು ಸಂಘಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಸಹಾಯ ಸೌಲಭ್ಯಗಳನ್ನು ನೇರವಾಗಿ ಹಾಲು ಉತ್ಪಾದಕರಿಗೆ ತಲುಪಿಸಿದ ಪರಿಣಾಮ ಹಾಗೂ ಜಿಲ್ಲೆಯಲ್ಲಿ ಹಸಿರು ಮೇವಿನ ಕೊರತೆಯನ್ನು ಅರಿತುಕೊಂಡು ಧಾರವಾಡದಿಂದ ನೇರವಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ರಾಜ್ಯದಲ್ಲಿಯೇ ಅತೀ ಕಡಿಮೆ ಬೆಲೆಗೆ “ರಸಮೇವನ್ನು” ಪೂರೈಸಲಾಗಿರುವ ಪರಿಣಾಮ ಅನೇಕ ರೈತರು ಹೈನುಗಾರಿಕೆಯಲ್ಲಿ ಪುನಃ ಆಸಕ್ತಿಹೊಂದಿ ತಮ್ಮನ್ನು ತಾವು ತೊಡಗಿಸಿಕೊಂಡರು. ‘ರಸಮೇವಿನ ಸರಬರಾಜಿನಿಂದ ಜಿಲ್ಲೆಯಲ್ಲಿ ಬಿಳಿಹುಲ್ಲಿನ ದರ ಕುಸಿದು, ಕಡಿಮೆ ಬೆಲೆಯಲ್ಲಿ ಬಿಳಿಹುಲ್ಲು ದೊರಕುವಂತಾಯಿತು. ಇವೆಲ್ಲದರ ಪರಿಣಾಮವಾಗಿ ಇಂದು ಶಿರಸಿ ತಾಲೂಕಿನಲ್ಲಿ ಪ್ರತೀ ದಿನಕ್ಕೆ 17,500 ಲೀಟರ್‌ಗೆ ಹಾಲಿನ ಶೇಖರಣೆ ತಲುಪಿ ಜಿಲ್ಲೆಯಲ್ಲೂ ಹಾಲಿನ ಉತ್ಪಾದನೆ ಪ್ರತೀ ದಿನಕ್ಕೆ 46,500 ಲೀಟರ್ಗೆಗೆ ತಲುಪಿದೆ ಎಂಬ ವಿಚಾರ ಬಹಳ ಸಂತೋಷದ ಸಂಗತಿಯಾಗಿದೆ. ಧಾರವಾಡ ಸಹಕಾರ ಹಾಲು ಒಕ್ಕೂಟದ ನಿರ್ದೇಶಕನಾದಾಗಿನಿಂದ ಇಲ್ಲಿಯ ವರೆಗೂ ಪ್ರತೀ ವರ್ಷವೂ ತಪ್ಪದೇ ಪ್ರತೀ ಮೂರು ತಿಂಗಳಿಗೊಮ್ಮೆ ಶಿರಸಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಾಹಕರ ಸಮನ್ವಯ ಸಭೆ ನಡೆಸಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಉತ್ಪಾದಕರಿಗೆ ಸಿಗುವ ಸೌಲಭ್ಯಗಳ ಕುರಿತು, ಕುಂದು-ಕೊರತೆಗಳ ಕುರಿತು, ಮುಂದಾಗಬೇಕಾಗುವ ಅಭಿವೃದ್ಧಿ ಕೆಲಸಗಳ ಕುರಿತು ಚರ್ಚಿಸಿ ಸಲಹೆ ಸೂಚನೆಗಳನ್ನು ಪಡೆಯುವ ಕಾರ್ಯ ನಿರಂತರವಾಗಿ ಮಾಡುತ್ತಾ ಬಂದಿದ್ದೇನೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರನ್ನು, ಆಡಳಿತ ಮಂಡಳಿಯ ಸದಸ್ಯರನ್ನು, ಕಾರ್ಯದರ್ಶಿಗಳನ್ನು, ಸಿಬ್ಬಂದಿಗಳನ್ನು, ಸಮಸ್ತ ಹಾಲು ಉತ್ಪಾದಕರನ್ನು ನಾನು ನನ್ನ ಕುಟುಂಬದವರೆಂದು ಭಾವಿಸಿ ಅವರ ಜೊತೆಯಲ್ಲಿಯೇ ಅವರ ಮಾರ್ಗದರ್ಶನದಲ್ಲಿ ಹೆಜ್ಜೆಯಿಡುತ್ತಾ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಇವೆಲ್ಲದರ ಹೊರತಾಗಿಯೂ ಕೆಲವು ಪ್ರಭಾವಿಗಳ ಒತ್ತಡದಿಂದ ನಮ್ಮ ಈ ಹೈನುಗಾರಿಕಾ ಕ್ಷೇತ್ರಕ್ಕೂ ರಾಜಕಾರಣ ಅಂಟಿರುವುದು ಬಹಳ ದುಃಖದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಣ್ಣಕೇರಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನ ಹೆಗಡೆ, ದೊಡ್ಡಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಉಮೇಶ ಹೆಗಡೆ, ಬೊಪ್ಪನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಹೆಗಡೆ, ಮತ್ತಿಗಾರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ ಹೆಗಡೆ, ಕಂಡಾಜಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಜೇಶ ನಾಯ್ಕ, ಬೊಮ್ಮನಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸತೀಶ ಗೌಡ ಮತ್ತಿತರರು ಇದ್ದರು.

ಯಾರದ್ದೋ ವಯಕ್ತಿಕ ಹಿತಾಸಕ್ತಿಗಾಗಿ ಹೈನುಗಾರಿಕಾ ಕ್ಷೇತ್ರದಲ್ಲಿ ರಾಜಕೀಯ ತರುವುದು ಯೋಗ್ಯವಲ್ಲ. ತಮ್ಮ ಸ್ವಾರ್ಥಕ್ಕಾಗಿ ಜನರನ್ನು ಬಲಿಪಶು ಮಾಡುವುದನ್ನು ಕಾಣದ ಕೈಗಳು ಬಿಡಬೇಕಿದೆ. ಕುರುಡು ಕಾಂಚಾಣಕ್ಕೆ ನಮ್ಮ ಕ್ಷೇತ್ರದಲ್ಲಿ ಬೆಲೆಯಿಲ್ಲ ಎಂಬ ನಂಬಿಕೆ ನನಗಿದೆ. – ಸುರೇಶ್ಚಂದ್ರ ಕೆಶಿನ್ಮನೆ, ಅಭ್ಯರ್ಥಿ

Share This
300x250 AD
300x250 AD
300x250 AD
Back to top