Slide
Slide
Slide
previous arrow
next arrow

‘ಬೆಂಗಳೂರಿನ ದೇವಾಲಯ,ಜಲಾಶಯ ನಿರ್ಮಾಣದಲ್ಲಿ ಕೆಂಪೇಗೌಡರ ಕೊಡುಗೆ ಅತ್ಯಮೋಘ’

300x250 AD

ಕುಮಟಾ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಮತ್ತು ಉತ್ತರ ಕನ್ನಡ ಶಾಖಾಮಠದ ಪೂಜ್ಯರಾದ  ಸದ್ಗರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ, ಮಿರ್ಜಾನ್‌ ಶಾಖಾಮಠದ ಪೂಜ್ಯರಾದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥಜೀಯವರ ಮಾರ್ಗದರ್ಶನದಲ್ಲಿ  ಜೂ.27ರಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಸೆಂಟ್ರಲ್ ಸ್ಕೂಲ್ ಮತ್ತು ಆದಿಚುಂಚನಗಿರಿ ಇಂಡಿಪೆಂಡೆಂಟ್ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿಯನ್ನು  ಆಚರಿಸಲಾಯಿತು. 

ನಾಡಪ್ರಭು ಕೆಂಪೇಗೌಡರ ದಿನಾಚರಣೆಯನ್ನು ಜ್ಯೋತಿ ಬೆಳಗಿಸಿ, ಉದ್ಗಾಟಿಸಿದ ಬಿಜಿಎಸ್ ಸಂಸ್ಥೆಯ ಆಡಳಿತ ಅಧಿಕಾರಿ ಜಿ. ಮಂಜುನಾಥ ಮಾತನಾಡಿ, ನಾಡಪ್ರಭು ಕೆಂಪೇಗೌಡ ಈಗಿನ ಬೆಂಗಳೂರಿನ ಯಲಹಂಕ ಉಪನಗರದಲ್ಲಿ  70 ವರ್ಷಗಳಿಗೂ ಹೆಚ್ಚು ಕಾಲ ಯಲಹಂಕವನ್ನು ಆಳಿದ ಕೆಂಪನನಂಜೇಗೌಡ ಮತ್ತು ಲಿಂಗಾಂಬೆ ದಂಪತಿಗಳಿಗೆ ಕ್ರಿ.ಶ. 1510ರಲ್ಲಿ ಜನಿಸಿದರು. ಕೆಂಪೇಗೌಡ ಅವರ ಸಾಮಾಜಿಕ ಸುಧಾರಣೆಗಳು ಮತ್ತು ಬೆಂಗಳೂರಿನಲ್ಲಿ ದೇವಾಲಯಗಳು ಮತ್ತು ನೀರಿನ ಜಲಾಶಯಗಳನ್ನು ನಿರ್ಮಿಸಲು ಅವರು ನೀಡಿದ ಕೊಡುಗೆ ಅತ್ಯಮೋಘವಾಗಿದೆ.  ಕೆಂಪೇಗೌಡರು ಎಂಟು ದ್ವಾರಗಳಿರುವ ಕೆಂಪು ಕೋಟೆಯನ್ನು ಮತ್ತು ಸುತ್ತಲೂ ಕಂದಕವನ್ನು ನಿರ್ಮಿಸಿದರು. ಕೋಟೆಯ ಒಳಗೆ ಎರಡು ಅಗಲವಾದ ರಸ್ತೆಗಳು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಸಾಗುವಂತೆ ನಿರ್ಮಾಣ ಮಾಡಿದ್ದರು. ಇತರ ರಸ್ತೆಗಳನ್ನು ಅವುಗಳಿಗೆ ಸಮಾನಾಂತರವಾಗಿ ಅಥವಾ ಲಂಬವಾಗಿ ಯೋಜನಾಬದ್ಧವಾಗಿ ನಿರ್ಮಿಸಿದ್ದರು.  ಸರಕುಗಳ ಮಾರಾಟಕ್ಕಾಗಿ  ದೊಡ್ಡಪೇಟೆ, ಚಿಕ್ಕಪೇಟೆ ಅರಳೆಪೇಟೆ ಅಕ್ಕಿ ಪೇಟೆ, ರಾಗಿಪೇಟೆ, ಬಳೆಪೇಟೆಗಳನ್ನು, ಕರಕುಶಲ ವ್ಯಾಪಾರಕ್ಕಾಗಿ ಕುರುಬರಪೇಟೆ, ಕುಂಬಾರ-ಪೇಟೆ, ಗಾಣಿಗರಪೇಟೆ, ಉಪ್ಪಾರಪೇಟೆ ಮೊದಲಾದ ಪೇಟೆಗಳನ್ನು ಪ್ರಾರಂಭಿಸಿದರು.ಕೇಂಪೇಗೌಡರು ಪಟ್ಟಣಕ್ಕೆ ನೀರು ಸರಬರಾಜು ಮಾಡಲು, ಕೋಟೆಯ ಸುತ್ತಲಿನ ಕಂದಕಕ್ಕೆ ಮತ್ತು ಬೆಳೆಗಳಿಗೆ ನೀರಾವರಿಗಾಗಿ ತೊಟ್ಟಿಗಳನ್ನು ನಿರ್ಮಿಸಿದರು. ಒಟ್ಟಿನಲ್ಲಿ ಕೆಂಪೇಗೌಡರು ಬೆಂಗಳೂರು ಮಹಾನಗರ ನಿರ್ಮಾಣದಲ್ಲಿ ಅಗ್ರಗಣ್ಯರು ಎಂದರು. 

ಆದಿಚುಂಚನಗಿರಿ ಇಂಡಿಪೆಂಡೆಂಟ್ ಪದವಿಪೂರ್ವ ಕಾಲೇಜಿನಲ್ಲಿ  ಪ್ರಥಮ ಪಿಯುಸಿ ತರಗತಿ ಓದುತ್ತಿರುವ  ವಿದ್ಯಾರ್ಥಿನಿಯರಾದ ಕುಮಾರಿ ನಂದಿನಿ ಮತ್ತು ಜೀವಿತಾ ಕೆಂಪೇಗೌಡರ ಬಾಲ್ಯ, ಜೀವನ ಮತ್ತು ಸಾಧನೆಗಳ ಬಗ್ಗೆ ಅಮೋಘ ಭಾಷಣ ಮಾಡಿದರು.  ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲೆ ಶ್ರೀಮತಿ ಅರ್ಚನಾ ಭಟ್,  ಆದಿಚುಂಚನಗಿರಿ ಇಂಡಿಪೆಂಡೆಂಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ರೇಷ್ಮಾ ಬಾಡ್ಕರ್, ಹಿರಿಯ ಶಿಕ್ಷಕರಾದ ಎಂ.ಜಿ. ಹಿರೇಕುಡಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದು, ನಾಡಪ್ರಭು ಕೆಂಪೇಗೌಡರ ಜಯಂತಿಗೆ ಹೆಚ್ಚಿನ ಮೆರುಗು ನೀಡಿದರು. 

300x250 AD

ಕುಮಾರ ಅಮಿತ್  ಮತ್ತು ಸಂಗಡಿಗರು ವೇದಘೋಷ ಮೊಳಗಿಸಿದರು. ಶಿಕ್ಷಕಿ ದಿವ್ಯಜ್ಯೋತಿ ಪ್ರಾರ್ಥಿಸಿದರು. ಕನ್ನಡ ಉಪನ್ಯಾಸಕರಾದ ಶ್ರೀಧರ ಹೆಚ್. ಆರ್.  ಸರ್ವರನ್ನು ಸ್ವಾಗತಿಸಿದರು. ಶಿಕ್ಷಕಿ ವಿಜಯನಂದಿನಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು ಗಣಕಯಂತ್ರ ವಿಭಾಗದ ಉಪನ್ಯಾಸಕಿ ತೇಜಸ್ವಿನಿ ಪಟಗಾರ ವಂದಿಸಿದರು.

Share This
300x250 AD
300x250 AD
300x250 AD
Back to top