Slide
Slide
Slide
previous arrow
next arrow

ಬಿಸಗೋಡು ಕಟ್ಟಡಗಳ ಧ್ವಂಸಕ್ಕೆ ಆದೇಶ: ಶೈಕ್ಷಣಿಕ-ಧಾರ್ಮಿಕ ಕೇಂದ್ರದ ಮೇಲೆ ಕರಿನೆರಳು

300x250 AD

110 ಮಕ್ಕಳ ಜೊತೆ ವಸತಿ ನಿಲಯದ ಶಿಕ್ಷಕರು ಅತಂತ್ರ | ಅರಣ್ಯ ಸಿಬ್ಬಂದಿ ಜೊತೆ ಅರ್ಚಕರಿಗೂ ಇಲ್ಲ ಮನೆ | ದೇವರ ಗುಡಿಗೂ ಕಾಡಿದ ಕಂಟಕ | ಪಡಿತರ-ಅಂಚೆ ಸೇವೆಗೂ ಸೂರಿಲ್ಲ

ಅಚ್ಯುತಕುಮಾರ ಯಲ್ಲಾಪುರ:- ಯಲ್ಲಾಪುರ: ಬಿಸಗೋಡಿನ ಮ್ಯಾಂಗನಿಸ್ ಗಣಿ ಕೇಂದ್ರದ ಎಲ್ಲಾ ಕಟ್ಟಡಗಳನ್ನು ತೆರವುಗೊಳಿಸಲು ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್ ಸಿದ್ಧತೆ ನಡೆಸಿದ್ದು, ಇದರಿಂದ ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಕಪ್ಪುಛಾಯೆ ಆವರಿಸಿದೆ.

ಇಲ್ಲಿನ ಕಟ್ಟಡಗಳನ್ನು ತೆರವು ಮಾಡುವಂತೆ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್’ನವರು ಸೂಪಾ ಗಣಿ ಯೊಜನೆಯವರಿಗೆ ಪತ್ರ ಬರೆದಿದ್ದಾರೆ. ಶೈಕ್ಷಣಿಕ ಉದ್ದೇಶದ ಕಟ್ಟಡಗಳನ್ನು ಬಿಟ್ಟುಕೊಡುವಂತೆ ಶಿಕ್ಷಣ ಇಲಾಖೆಯವರಿಗೆ ಸೂಚಿಸಿದ್ದಾರೆ. ಜೊತೆಗೆ ಧಾರ್ಮಿಕ ಕೇಂದ್ರ ಸೇರಿ ಎಲ್ಲಾ ಕಟ್ಟಡವನ್ನು ಜುಲೈ 15ರ ಒಳಗೆ ಖಾಲಿ ಮಾಡುವಂತೆ ಜೂ 26ರಂದು ಊರಿನವರಿಗೆ ನೋಟಿಸ್ ನೀಡಿದ್ದಾರೆ.

300x250 AD

  ಈ ಹಿಂದೆ ಬಿಸಗೋಡಿನಲ್ಲಿ ಮ್ಯಾಂಗನೀಸ್ ಗಣಿಗಾರಿಕೆ ನಡೆಯುತ್ತಿತ್ತು. ಪಶ್ಚಿಮಘಟ್ಟ ಉಳಿಸಬೇಕು ಎಂಬ ನಿಟ್ಟಿನಲ್ಲಿ ಪರಿಸರ ಹೋರಾಟಗಳ ಪರಿಣಾಮವಾಗಿ 1996ರಲ್ಲಿ ಗಣಿಕಾರಿಕೆ ಸ್ಥಗಿತಗೊಂಡಿತು. ಆ ವೇಳೆ ಅಲ್ಲಿದ್ದ ಎಲ್ಲಾ ಕಟ್ಟಡಗಳನ್ನು ಶೈಕ್ಷಣಿಕ ಉದ್ದೇಶಗಳಿಗೆ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್’ನವರು ಶಿಕ್ಷಣ ಇಲಾಖೆಗೆವಹಿಸಿದ್ದರು. ಅಲ್ಲಿದ್ದ ಕಟ್ಟಡಗಳನ್ನು ನವೀಕರಿಸಿ ಶಿಕ್ಷಕರ ವಸತಿ ನಿಲಯ, ಪ್ರೌಢಶಾಲೆ, ಸಂಸ್ಕೃತ ಪಾಠಶಾಲೆಗಳನ್ನಾಗಿ ಪರಿವರ್ತಿಸಲಾಗಿತ್ತು. ಅಂಚೆ ಕಚೇರಿ ಹಾಗೂ ಕೆಎಂಎಫ್ ಹಾಲಿನ ಡೈರಿ, ಪಡಿತರ ವಿತರಣಾ ಕೇಂದ್ರ ಹಾಗೂ ಅಂಚೆ ಕಚೇರಿ ಸಹ ಇದೇ ಕಟ್ಟಡದಲ್ಲಿತ್ತು. 90ರ ದಶಕದಲ್ಲಿ ಊರಿನವರ ಬೇಡಿಕೆಯಂತೆ ಅದೇ ಪ್ರದೇಶದಲ್ಲಿ ವೀರಾಂಜಿನೇಯ ದೇವಸ್ಥಾನವನ್ನು ಸಹ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್’ನವರು ನಿರ್ಮಿಸಿದ್ದರು. ಆದರೆ, ಇಷ್ಟುದಿನಗಳ ಕಾಲ ಮೌನವಾಗಿದ್ದ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್ ಇದೀಗ ಏಕಾಏಕಿ ಎಲ್ಲಾ ಕಟ್ಟಡಗಳನ್ನು ಖಾಲಿ ಮಾಡುವಂತೆ ಜೂ 26ರಂದು ಗ್ರಾಮಸ್ಥರಿಗೆ ನೋಟಿಸ್ ನೀಡಿದೆ.

ಬಿಸಗೋಡು ಹೈಸ್ಕೂಲಿನಲ್ಲಿ ಪ್ರಸ್ತುತ 110 ವಿದ್ಯಾರ್ಥಿಗಳಿದ್ದಾರೆ. ಇತರೆ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಊರಿನವರು ಹಾಸ್ಟೇಲ್ ನಿರ್ಮಿಸುವ ತಯಾರಿಯನ್ನು ನಡೆಸಿದ್ದಾರೆ. ಅಧ್ಯಾಪಕರ ಕೊರತೆಯಿಂದ ಸಂಸ್ಕೃತ ಪಾಠಶಾಲೆ ಈಗ ಇಲ್ಲದಿದ್ದರೂ ಪ್ರತಿ ವರ್ಷ ಅಲ್ಲಿ ವೇದ ಶಿಬಿರಗಳನ್ನು ನಡೆಸಲಾಗುತ್ತದೆ. 65-70ರಷ್ಟು ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸುತ್ತಾರೆ. ಜೊತೆಗೆ ಊರಿನ ಎಲ್ಲಾ ಸಭೆ-ಸಮಾರಂಭಗಳು ಸಂಸ್ಕೃತ ಪಾಠಶಾಲೆ ಭವನದಲ್ಲಿಯೇ ನಡೆಯುತ್ತದೆ. ವಸತಿ ನಿಲಯದಲ್ಲಿ ಇಬ್ಬರು ಶಿಕ್ಷಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದಾರೆ. ದೇವಾಲಯ ಅರ್ಚಕರು ವಸತಿ ನಿಲಯದಲ್ಲಿ ವಾಸವಾಗಿದ್ದು ಹಾಲಿನ ಡೈರಿ, ಪಡಿತರ ಕೇಂದ್ರ ಹಾಗೂ ಅಂಚೆ ಕಚೇರಿ ಸಹ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ಎಲ್ಲಾ ಕಟ್ಟಡ ತೆರವು ನಂತರ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಶನ್’ ಉತ್ಸಾಹ ತೋರಿದ್ದು, ಕಟ್ಟಡ ತೆರವು ಮಾಡಿದಲ್ಲಿ 110 ವಿದ್ಯಾರ್ಥಿಗಳ ಭವಿಷ್ಯದ ಜೊತೆ ಉಳಿದ ಎಲ್ಲಾ ಚಟುವಟಿಕೆಗಳ ಮೇಲೆಯೂ ದುಷ್ಪರಿಣಾಮ ಬೀಳಲಿದೆ.

Share This
300x250 AD
300x250 AD
300x250 AD
Back to top