ಅಂಕೋಲಾ: ಕುಮಟಾದ ಪ್ರಶಾಂತ ನಾಯಕ ಎಂಬಾತ ಮಾದನಗೇರಿ ಬಳಿ ಅಂಕೋಲಾ ವಾಸರಕುದ್ರುಗೆಯ ಉದಯ ಗಾಂವ್ಕರ್’ರ ಸ್ಕೂಟಿಗೆ ತನ್ನ ಕಾರು ಗುದ್ದಿದ್ದು, ಇದನ್ನು ನೋಡಿದ ಪ್ರತ್ಯಕ್ಷದರ್ಶಿ ರಾಮಚಂದ್ರ ಗಾಂವ್ಕರ್ ಎಂಬಾತರು ಪೊಲೀಸ್ ದೂರು ನೀಡಿದ್ದಾರೆ.
ಜೂ.16ರಂದು ಖಂಡಗಾರದ ಪ್ರಶಾಂತ ನಾಯಕ ತಮ್ಮ ಕಾರನ್ನು ಏಕಾಏಕಿ ಹಿಲ್ಲೂರಿನ ಕಡೆ ತಿರುಗಿಸಿದ್ದು, ಈ ವೇಳೆ ರಸ್ತೆ ದಾಟಲು ನಿಂತಿದ್ದ ಉದಯ ಗಾಂವ್ಕರ್ ಸ್ಕೂಟಿಗೆ ಗುದ್ದಿದ್ದಾರೆ. ಇದರಿಂದ ಉದಯ ಗಾಂವ್ಕರ್ ಗಾಯಗೊಂಡು ಆಸ್ಪತ್ರೆ ಸೇರಿದ್ದರು.
ಆದರೆ, ಈವರೆಗೂ ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಾಗಿರಲಿಲ್ಲ. ಇದರಿಂದ ಅನುಮಾನಗೊಂಡ ಪ್ರತ್ಯಕ್ಷದರ್ಶಿ ರಾಮಚಂದ್ರ ಗಾಂವ್ಕರ್ ಪೊಲೀಸರ ಬಳಿ ವಿಚಾರಿಸಿದ್ದು, ಪ್ರಕರಣ ದಾಖಲಾಗದ ವಿಷಯ ತಿಳಿದು ಅವರೇ ದೂರು ದಾಖಲಿಸಿದ್ದಾರೆ.
ಸ್ಕೂಟರ್ಗೆ ಕಾರು ಡಿಕ್ಕಿ: ಪ್ರತ್ಯಕ್ಷದರ್ಶಿಯಿಂದ ದೂರು ದಾಖಲು
