ಕಾರವಾರ: ಜಿಲ್ಲೆಯ ಕರಾವಳಿ ಭಾಗದ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ತೊಡಗಿರುವ ಜಿಪಿಎಲ್‌ಎಫ್ ಮಹಿಳಾ ಸದಸ್ಯರುಗಳಿಗೆ ಆಯೋಜಿಸಿದ್ದ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ ಕಾಂದೂ ಸಸಿಗೆ ನೀರು ಹಾಕುವ ಮೂಲಕ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿದರು.
ತರಬೇತಿ ಕಾರ್ಯಾಗಾರದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣೆ ಮತ್ತು ಕಾರ್ಯಾಚರಣೆ ಕುರಿತಾದ ತರಬೇತಿ ಮಾಹಿತಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಜಿಪಿಎಲ್‌ಎಫ್ ಮಹಿಳಾ ಸದಸ್ಯರುಗಳಿಗೆ ಪುನಶ್ಚೇತನ ತರಬೇತಿ ಕಾರ್ಯಾಗಾರದಲ್ಲಿ ಘನ ತ್ಯಾಜ್ಯ ನಿರ್ವಹಣೆ, ಸ್ವಚ್ಛ ವಾಹನ ನಿರ್ವಹಣೆ ಮತ್ತು ಚಾಲನೆ, ಕಸ ಸಂಗ್ರಹಣೆ ಮತ್ತು ವಿಂಗಡನೆ ಕುರಿತು ಎಸ್‌ಬಿಎಂ-ಹೆಚ್‌ಆರ್‌ಡಿ ಸೂರ್ಯನಾರಾಯಣ ಭಟ್, ಎಸ್‌ಐಆರ್‌ಡಿ ಸಂಪನ್ಮೂಲ ವ್ಯಕ್ತಿಗಳಾದ ಬಾಲಚಂದ್ರ ಶೆಟ್ಟಿ, ಸ್ವಾತಿ, ಐಇಸಿ ಶ್ವೇತಾ, ಎಸ್‌ಹೆಚ್ ಗೋಪಾಲ, ಎಸ್‌ಎಲ್‌ಡಬ್ಲ್ಯೂಎಂ ನ ಅಶ್ವಿನ, ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಶಾಖೆಯ ಉಪಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ, ಸಹಾಯಕ ಕಾರ್ಯದರ್ಶಿ ಸುನೀಲ್ ನಾಯ್ಕ, ಎನ್‌ಆರ್‌ಎಲ್‌ಆರ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ನಾಗರಾಜ್, ಉಪಸ್ಥಿತರಿದ್ದರು.