Slide
Slide
Slide
previous arrow
next arrow

ಬಿಜಿವಿಎಸ್ ಪಿಯು ಕಾಲೇಜಿನಲ್ಲಿ ಮಾದಕದ್ರವ್ಯ ವಿರೋಧಿ ದಿನಾಚರಣೆ

300x250 AD

ಜೋಯಿಡಾ:ತಾಲೂಕಿನ ರಾಮನಗರ ಬಿ.ಜಿ.ವಿ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ರಾಮನಗರ ಪೊಲೀಸ್ ಇಲಾಖೆಯಿಂದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಆಚರಿಸಲಾಯಿತು.                 
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಮನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಬಸವರಾಜ ಮಬನೂರು ಮಾತನಾಡಿ ಮಾದಕ ದ್ರವ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ, ಉತ್ತಮ ಸಮಾಜದ ನಿರ್ಮಾಣಕ್ಕೆ ಮಾದಕ ದ್ರವ್ಯವನ್ನು ವಿರೋಧಿಸಬೇಕು. ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮಾದಕ ದ್ರವ್ಯಗಳನ್ನು ಸೇವಿಸುವುದು ಹೆಚ್ಚಾಗಿದೆ,ಡ್ರಗ್ಸ್ ಸಾರಾಯಿ ಸೇರಿದಂತೆ ಇನ್ನಿತರ ಮಾದಕ ವಸ್ತುಗಳನ್ನು ಸೇವಿಸಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಳ್ಳಿಗಾಡಿನ ಮಕ್ಕಳು ಕಾಲೇಜು ಸೇರುತ್ತಿದ್ದಂತೆ ತಮ್ಮ ತಂದೆ – ತಾಯಿಗೆ ತಿಳಿಯದೆ ಇರುವ ಹಾಗೆ ಮಾದಕ ವಸ್ತುಗಳ ಚಟಕ್ಕೆ ಬೀಳುತ್ತಾರೆ.ಯುವ ಜನತೆ ಮಾದಕ ವಸ್ತುಗಳಿಂದ ದೂರವಿದ್ದು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಮತ್ತು ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದಲ್ಲಿ ಸಿಕ್ಕಿಕೊಂಡಾಗ ಆಗುವ ಶಿಕ್ಷೆಗಳ ಬಗ್ಗೆ ವಿಧ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು.                 

ಈ ಸಂದರ್ಭದಲ್ಲಿ ಬಿ.ಜಿ. ವಿ. ಎಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿವರ್ಗ ವಿಧ್ಯಾರ್ಥಿಗಳು, ಸ್ಥಳೀಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top