ಶಿರಸಿ: ಸ್ಥಳೀಯ ರಾಗಮಿತ್ರ ಪ್ರತಿಷ್ಠಾನವು ಸ್ವರ್ಣವಲ್ಲೀ ಸಂಸ್ಥಾನದ ಶ್ರೀಗಳವರ ಮೂವತ್ಮೂರನೇ ಪೀಠಾರೋಹಣ ವರ್ಷದಂಗವಾಗಿ ಪ್ರತಿ ತಿಂಗಳ ಮೊದಲ ಸೋಮವಾರದಂದು ನಗರದ ಯೋಗಮಂದಿರ ಸಭಾ ಭವನದಲ್ಲಿ ಏರ್ಪಡಿಸುತ್ತಿರುವ ಗುರು ಅರ್ಪಣೆ ಕಲಾ ಅನುಬಂಧ ಸಂಗೀತ ಕಾರ್ಯಕ್ರಮ ಹಾಗೂ ಸನ್ಮಾನ ಜು.1ರಂದು ಸಂಜೆ 5.30ರಿಂದ ನಡೆಯಲಿದೆ.
ಕಾರ್ಯಕ್ರಮವನ್ನು ನಿವೃತ್ತ ಸಾರಿಗೆ ಅಧಿಕಾರಿ ಜಿ.ಎಸ್. ಹೆಗಡೆ ಹಲಸರಿಗೆ ಉದ್ಘಾಟಿಸಲಿದ್ದು, ಸನ್ಮಾನವನ್ನು ಕೆಡಿಸಿಸಿ ಬ್ಯಾಂಕ್ ಹಾಗೂ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನಮನೆ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಆರ್.ಎನ್.ಭಟ್ಟ ಸುಗಾವಿ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಡಗುತಿಟ್ಟಿನ ಯಕ್ಷಗಾನ ಕ್ಷೇತ್ರದ ಖ್ಯಾತ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ಹಾಗೂ ಖ್ಯಾತ ಬಾನ್ಸುರಿ ವಾದಕ ವಿ.ನಾಗರಾಜ ಹೆಗಡೆ ಶಿರನಾಲಾ ಅವರನ್ನು ಸನ್ಮಾನಿಸಲಾಗುವುದು.
ನಂತರ ನಡೆಯುವ ಸಂಗೀತ ಕಾರ್ಯಕ್ರಮದ ಭಕ್ತಿ ಸಂಗೀತದಲ್ಲಿ ವಾನಳ್ಳಿಯ ನಾರಿಶಕ್ತಿ ಕೇಂದ್ರ ಮಹಿಳಾ ತಂಡದವರು ಪಾಲ್ಗೊಳ್ಳಲಿದ್ದಾರೆ. ಗಾಯನದಲ್ಲಿ ಯುವ ಗಾಯಕಿ ಸ್ನೇಹಾ ಅಮ್ಮಿನಳ್ಳಿ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ. ನಂತರ ವಿ.ನಾಗರಾಜ ಹೆಗಡೆ ಶಿರನಾಲಾ ಬಾನ್ಸುರಿ ವಾದನ ಪ್ರಸ್ತುತ ಪಡಿಸಲಿದ್ದು ಇವರೆಲ್ಲರಿಗೆ ತಬಲಾದಲ್ಲಿ ವಿ. ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ, ವಿಜಯೇಂದ್ರ ಹೆಗಡೆ ಅಜ್ಜೀಬಳ, ಸಮರ್ಥ ಹೆಗಡೆ ವಾನಳ್ಳಿ, ಹಾಗೂ ಹಾರ್ಮೋನಿಯಂನಲ್ಲಿ ಸುಮಾ ಹೆಗಡೆ ವಾನಳ್ಳಿ ಹಾಗೂ ವಿ. ಪ್ರಕಾಶ ಹೆಗಡೆ ಯಡಳ್ಳಿ ಸಾಥ್ ನೀಡಲಿದ್ದಾರೆ.