Slide
Slide
Slide
previous arrow
next arrow

ಕ್ರಿಶ್ಚಿಯನ್ ಹೋಪ್ ಚಾರಿಟೇಬಲ್ ಟ್ರಸ್ಟ್‌ನಿಂದ  ನೋಟ್‌ಬುಕ್,ಸ್ಕೂಲ್ ಬ್ಯಾಗ್ ವಿತರಣೆ

300x250 AD

ದಾಂಡೇಲಿ : ನಗರದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ತನ್ನದೇ ಆದ ರೀತಿಯ ಸೇವೆಯನ್ನು ಸಲ್ಲಿಸುತ್ತಿರುವ ಕ್ರಿಶ್ಚಿಯನ್ ಹೋಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಆಯ್ದ ಬಡ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಮತ್ತು ಸ್ಕೂಲ್ ಬ್ಯಾಗ್ ವಿತರಣೆ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನದೊಂದಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮವು ವನಶ್ರೀ ನಗರದಲ್ಲಿರುವ ಸುಶೀಲಮ್ಮ ಸೌಂಡ್ಸ್ ಮತ್ತು ಸಿಸ್ಟಮ್ ಇದರ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆಯನ್ನು ನೀಡಿದ ಧರ್ಮಗುರುಗಳಾದ ಫಾಸ್ಟರ್ ಸುಭಾಷ್ಕರ್ ಅವರು ಶಿಕ್ಷಣಕ್ಕೆ ನೀಡುವ ನೆರವು ಸುಭದ್ರ ರಾಷ್ಟ್ರಕಟ್ಟಲು ಸಹಕಾರಿ. ಇಂದು ಶಿಕ್ಷಣ ಕ್ಷೇತ್ರ ಬಲವರ್ಧನಗೊಳ್ಳುತ್ತಿದೆ. ಕ್ರಿಶ್ಚಿಯನ್ ಹೋಪ್ ಚಾರಿಟೇಬಲ್ ಟ್ರಸ್ಟ್ ಶೈಕ್ಷಣಿಕ ನೆರವನ್ನು ನೀಡುವ ನಿಟ್ಟಿನಲ್ಲಿ ಮುಂದಾಗಿರುವುದು ಉತ್ತಮವಾದ ಬೆಳವಣಿಗೆ. ತಾನು ಬದುಕುವುದು ಸಾಧನೆಯಲ್ಲ, ಸಮಾಜದಲ್ಲಿ ಸಂಕಷ್ಟದಲ್ಲಿರುವವರ ಕಣ್ಣೀರನ್ನು ಒರೆಸಿ, ಅವರ ಸಂಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಜೀವನ. ಕ್ರಿಶ್ಚಿಯನ್ ಹೋಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಂತಹ ಜನಪರ ಜನಮುಖಿ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಇದು ನಿರಂತರವಾಗಿ ಮುಂದುವರೆಯಲಿ ಎಂದರು.

ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಸೆಲ್ವಿ ಅವರು ಮಾತನಾಡಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದಾಗ ಮತ್ತಷ್ಟು ಪ್ರತಿಭೆಗಳು ಈ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗಲಿದೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುವಂತಹ ಕಾರ್ಯ ಒಂದು ಮಾನವೀಯ ಕಾರ್ಯವಾಗಿದ್ದು, ಈ ಕಾರ್ಯ ನಿರಂತರವಾಗಿ ನಡೆಯಲಿ ಎಂದರು.

ನಗರ ಸಭೆಯ ಸದಸ್ಯೆ ವೆಂಕಟರಮಣಮ್ಮ ಮೈಥುಕುರಿ ಅವರು ಕ್ರಿಶ್ಚಿಯನ್ ಹೋಪ್ ಚಾರಿಟೇಬಲ್ ಟ್ರಸ್ಟ್ ಅತ್ಯಲ್ಪ ಅವಧಿಯಲ್ಲಿಯೇ ಸೇವೆಯ ಮೂಲಕ ಮನೆಮಾತಾಗಿದೆ ಎಂದರು.

ಕ್ರಿಯಾಶೀಲ ಶಿಕ್ಷಕರಾದ ಡೇವಿಡ್ ದಾನಂ ಮಾತನಾಡಿ ಸದೃಢ ಸಮಾಜ ನಿರ್ಮಾಣವಾಗುವಲ್ಲಿ ಇಂತಹ ಸಂಘ-ಸಂಸ್ಥೆಗಳ ಕೊಡುಗೆ ಮಹತ್ವಪೂರ್ಣವಾಗಿದೆ. ಸೇವೆಯನ್ನೇ ಗುರಿಯಾಗಿಸಿಕೊಂಡು ಕ್ರಿಶ್ಚಿಯನ್ ಹೋಪ್ ಚಾರಿಟೇಬಲ್ ಟ್ರಸ್ಟ್ ಮುನ್ನಡೆಯುತ್ತಿರುವುದು ನಿಜಕ್ಕೂ ಅಭಿಮಾನದ ಸಂಗತಿ.  ಕ್ರಿಶ್ಚಿಯನ್ ಹೋಪ್ ಚಾರಿಟೇಬಲ್ ಟ್ರಸ್ಟ್ ನ ಸಾಮಾಜಿಕವಾದ ಕಾಳಜಿ ಮತ್ತು ಬದ್ಧತೆ ಅನುಕರಣೆಯ ಹಾಗೂ ಅಭಿನಂದನೆಯ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಿ.ಆರ್.ಪಿ ಶ್ರೀದೇವಿ, ಸಮಾಜ ಸೇವಕರಾದ ಪ್ರಭಾಕರ್ ಗೋನಾ, ಪ್ರದೀಪ್ ಸೈಮನ್ ಮೊದಲಾದವರು ಕ್ರಿಶ್ಚಿಯನ್ ಹೋಪ್ ಚಾರ್ ಟೇಬಲ್ ಟ್ರಸ್ಟಿನ ಸೇವಾ ಕೈಂಕರ್ಯಗಳನ್ನು ಶ್ಲಾಘಿಸಿದರಲ್ಲದೇ, ಈ ಸಂಸ್ಥೆಯ ಸೇವೆ ಸಮೃದ್ಧ ಹಾಗೂ ಸದೃಢ ನಾಡು ಕಟ್ಟುವಲ್ಲಿ ಪರಿಣಾಮಕಾರಿಯಾಗಿದೆ ಎಂದರು. ಸಾಧನೆಗೈದ ವಿದ್ಯಾರ್ಥಿಗಳಿಗೆ ಈ ಸಂಸ್ಥೆ ಅಭಿನಂದಿಸಿದೆ. ಇಂತಹ ಅಭಿನಂದನೆಯ ಕಾರ್ಯವನ್ನು ಮಾಡಿದ ಕ್ರಿಶ್ಚಿಯನ್ ಹೋಪ್ ಚಾರಿಟೇಬಲ್ ಟ್ರಸ್ಟಿನ ಕಾರ್ಯಕ್ಕೆ ಸದಾ ಬೆಂಬಲವಾಗಿ ನಾವಿದ್ದೇವೆ ಎಂದರು.

300x250 AD

ಸಂಸ್ಥೆಯ ಅಧ್ಯಕ್ಷರಾದ ವಿನ್ಸೆಂಟ್ ಮಾದರಿ ಅವರು ಕ್ರಿಶ್ಚಿಯನ್ ಹೋಪ್ ಚಾರಿಟೇಬಲ್ ಟ್ರಸ್ಟ್ ಬೆಳೆದು ಬಂದ ಹಾದಿಯನ್ನು ವಿವರಿಸಿ, ಜನ್ಮ ಕೊಟ್ಟ ಈ ಭೂಮಿಯ ಋಣವನ್ನು ತೀರಿಸುವ ಮಹತ್ವದ ಆಶಯ ಹಾಗೂ ಸಂಕಷ್ಟದಲ್ಲಿರುವವರ ಸಮಸ್ಯೆಗೆ ಸ್ಪಂದಿಸುವ ಹಂಬಲದಿಂದಾಗಿ ಉದಯಿಸಿದ ಸಂಸ್ಥೆ ಕ್ರಿಶ್ಚಿಯನ್ ಹೋಪ್ ಚಾರಿಟೇಬಲ್ ಟ್ರಸ್ಟ್ . ನಮ್ಮ ಸಂಸ್ಥೆ ಒಂದು ಸಮುದಾಯಕ್ಕೆ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಸರ್ವ ಧರ್ಮ ಸಮನ್ವಯತೆಯನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಮತ್ತು ನಾವೆಲ್ಲರೂ ಒಂದೇ ಎನ್ನುವ ಭಾತೃತ್ವದ ಸಂದೇಶವನ್ನು ಪಸರಿಸುವ ನಿಟ್ಟಿನಲ್ಲಿ ಬದ್ಧತೆಯಿಂದ ಸೇವೆಯನ್ನು ಮಾಡುತ್ತಿದ್ದೇವೆ. ಅಪಘಾತಕ್ಕೊಳಪಟ್ಟು ಗಂಭೀರ ಗಾಯಗೊಂಡಿದ್ದವರೊಬ್ಬರ ಕುಟುಂಬಕ್ಕೆ 25,000 ಧನಸಹಾಯ, ಅದೇ ರೀತಿ ಸಂಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು, ಆರೋಗ್ಯ ನೆರವು, ಶೈಕ್ಷಣಿಕ ನೆರವನ್ನು ನೀಡುತ್ತಾ ಬಂದಿದ್ದೇವೆ. ಸಂಸ್ಥೆಯ ಈ ಸೇವೆಗೆ ದಾನಿಗಳು ವಿಶೇಷವಾಗಿ ಕೈಜೋಡಿಸುತ್ತಿದ್ದಾರೆ. ಸಂಸ್ಥೆಯ ಪದಾಧಿಕಾರಿಗಳ ಮತ್ತು ಸದಸ್ಯರ ವಿಶೇಷ ಮತ್ತು ಮುತುವರ್ಜಿಯಿಂದ ಕ್ರಿಶ್ಚಿಯನ್ ಹೋಪ್ ಚಾರಿಟೇಬಲ್ ಟ್ರಸ್ಟ್ ಮತ್ತಷ್ಟು ಜನಪರ ಹಾಗೂ ಸಮಾಜಮುಖಿಯಾಗಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ ಎಂದರು.

ವೇದಿಕೆಯಲ್ಲಿ ಕ್ರಿಶ್ಚಿಯನ್ ಹೋಪ್ ಚಾರ್ ಟೇಬಲ್ ಟ್ರಸ್ಟಿನ ಪದಾಧಿಕಾರಿಗಳಾದ ಬರ್ನಾಡ್ ಬೈಲಾ, ನೆಲ್ಸನ್ ಬಾಬು, ಡಿ.ಪಿ.ಜೇಮ್ಸ್, ಶಾಂತಕುಮಾರ್ ಬಂಗಾರಿ, ಪ್ರಭಾಕರ ನಾಯ್ಡು, ಯೇಸ್ ಬಳ್ಳಿಯವರ್, ಜೀವನ್ ಜಂಟ್ಲಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಅಧಿಕ ಆಯುಧ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಸ್ಕೂಲ್ ಬ್ಯಾಗ್ ವಿತರಿಸಲಾಯಿತು. ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಸಂಕಷ್ಟದಲ್ಲಿರುವ ಪಟೇಲ್ ನಗರದ ಎಲಿಜಬೆತ್ ಅವರಿಗೆ ಆರ್ಥಿಕ ಧನ ಸಹಾಯವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಕ್ರಿಶ್ಚಿಯನ್ ಹೋಪ್ ಚಾರಿಟೇಬಲ್ ಟ್ರಸ್ಟ್ ಸದಸ್ಯರು, ನಾಗರೀಕರು ಮತ್ತು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪಾಲಕರು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top