Slide
Slide
Slide
previous arrow
next arrow

ದೇಶ ಸಮೃದ್ಧಿಯಾಗಲು ರಾಮತತ್ವ ಅನುಸರಣೆ ಅಗತ್ಯ: ಹರಿಪ್ರಕಾಶ ಕೋಣೆಮನೆ

300x250 AD

ಯಲ್ಲಾಪುರ: ಯುವಜನಾಂಗಕ್ಕೆ ಭಾರತದ ಮೌಲ್ಯ, ಉದಾತ್ತ ಸಂಸ್ಕೃತಿ, ಪರಂಪರೆಗಳ ಅರಿವು ನೀಡುವ ಉದ್ದೇಶದಿಂದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಯನಿರ್ವಹಿಸುತ್ತಿದೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.

ಅವರು ಪಟ್ಟಣದ ‘ಸಂಸ್ಕೃತಿ’ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಮಾಯಣದ ಬಾಲಕಾಂಡದ ಕುರಿತಾದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ರಾಮಮಂದಿರ ನಿರ್ಮಾಣ, ನಳಂದ ವಿಶ್ವವಿದ್ಯಾನಿಲಯದ ಸ್ಥಾಪನೆಯ ಕಾರ್ಯ ದೇಶದಲ್ಲಿ ಇತಿಹಾಸ ಸೃಷ್ಟಿಸಿವೆ. ಇಂತಹ ವಿಚಾರಗಳನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ರಾಮಮಂದಿರವಾಗಲೀ, ನಳಂದ ವಿಶ್ವವಿದ್ಯಾನಿಲಯವಾಗಲೀ, ಯಾವುದೇ ಜಾತಿ, ಧರ್ಮ, ಪಂಥಗಳಿಗೆ ಸೀಮಿತವಾದುದಲ್ಲ. ಭಾರತದ ಪರಮ ಶ್ರೇಷ್ಠ ಮೌಲ್ಯಗಳನ್ನು ಜಗತ್ತಿಗೆ ನೀಡುವಂತಹ ಕಾರ್ಯವಿದಾಗಿದ್ದು, ದೇಶ ಸಮೃದ್ಧಿಯಾಗಲು ರಾಮತತ್ವದ ಅನುಸರಣೆ ಅಗತ್ಯ ಎಂದರು.ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ೫೦ ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು, ದೇಶದ ಎಲ್ಲ ಭಾಷೆಗಳನ್ನೊಳಗೊಂಡ ಸಾಹಿತ್ಯ ಸಂಘಟನೆಯಾಗಿದೆ. ಸಂಘಟನೆಯ ಮೂಲಕ ಪರಂಪರೆಯವಜಾಗೃತಿ ಕಾರ್ಯ ಎಲ್ಲೆಡೆ ನಡೆಯುತ್ತಿರುವುದು ಮಾದರಿಯಾಗಿದೆ ಎಂದರು.

ಉಮ್ಮಚಗಿ ಶ್ರೀಮಾತಾ ವೇದ ಸಂಸ್ಕೃತ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಮಹೇಶ ಭಟ್ಟ ಇಡಗುಂದಿ ಉಪನ್ಯಾಸ ನೀಡಿ, ರಾಮಾಯಣ ಕಾವ್ಯವೂ ಮಹಾಭಾರತದಂತೆ ಪಂಚಮ ವೇದ. ವಾಲ್ಮಿಕಿಯವರ ಕಣ್ಣಿನಲ್ಲೇ ಯಾರು ರಾಮಾಯಣವನ್ನು ನೋಡುತ್ತಾರೋ ಆಗ ರಾಮಾಯಣದ ವಾಸ್ತವ ಅರಿವಾಗುತ್ತದೆ. ಛಂದೋಬದ್ಧ ಸಾಹಿತ್ಯವನ್ನು ವಾಲ್ಮೀಕಿಯವರು ನೀಡಿದ್ದಾರೆ ಎಂದು ಬಾಲಕಾಂಡದ ವಿಶೇಷ ಸನ್ನಿವೇಶಗಳನ್ನು ವಿವರಿಸಿದರು.

ಅ.ಭಾ.ಸಾ.ಪ. ಜಿಲ್ಲಾಧ್ಯಕ್ಷ ಗಂಗಾಧರ ಕೊಳಗಿ, ಕೆ.ಎಸ್.ಅಗ್ನಿಹೋತ್ರಿ, ದಾಕ್ಷಾಯಿಣಿ ಪಿ.ಎಸ್., ಈಶ್ವರದಾಸ, ಗಣಪತಿ ಭಟ್ಟ ಇತರರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಪ್ರಮುಖರಾದ ಪ್ರಮೋದ ಹೆಗಡೆ, ಎಂ.ಆರ್.ಹೆಗಡೆ ಕುಂಬ್ರೀಗುಡ್ಡೆ, ಜಗದೀಶ ಭಂಡಾರಿ, ಶೈಲಜಾ ಮಂಗಳೂರು, ಕೃಷ್ಣ ಪದಕಿ, ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮುಕ್ತಾಶಂಕರ, ಜಿಲ್ಲಾ ಅ.ಭಾ.ಸಾ.ಪ.ದ ಮಾಧ್ಯಮ ಸಂಘಟನೆಯ ಪ್ರಮುಖ ಶಂಕರ ಭಟ್ಟ ತಾರೀಮಕ್ಕಿ, ಸಹಕಾರ್ಯದರ್ಶಿ ಸಂಜಯ ಭಟ್ಟ ಬೆಣ್ಣೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಭಾಗ್ವತ ಇತರರಿದ್ದರು.

300x250 AD
Share This
300x250 AD
300x250 AD
300x250 AD
Back to top