Slide
Slide
Slide
previous arrow
next arrow

ಸೋರಗಾವಿ ಇಂಟರ್ ನ್ಯಾಷನಲ್ ಶಾಲೆ ಮಾನ್ಯತೆ ಹಿಂಪಡೆತ: ಪ್ರಮೋದ್ ಮಹಾಲೆ ಮಾಹಿತಿ

300x250 AD

ದಾಂಡೇಲಿ : ಮಕ್ಕಳ ಶಿಕ್ಷಣದ ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ದಾಂಡೇಲಿ ನಗರದಲ್ಲಿರುವ ಸೋರಗಾವಿ ಇಂಟರ್‌ನ್ಯಾಷನಲ್ ಸ್ಕೂಲಿನ ಮಾನ್ಯತೆಯನ್ನು ಹಿಂಪಡೆಯಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ ಶನಿವಾರ ನಗರದಲ್ಲಿ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಅವರು ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಸೋರಗಾವಿ ಇಂಟರ್‌ನ್ಯಾಷನಲ್ ಶಾಲೆಯ ಕಟ್ಟಡ ದುರಸ್ತಿಯಿದ್ದು, ಶಾಲಾ ಮಕ್ಕಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳಾದ ಸುಸಜ್ಜಿತ ಮತ್ತು ಗಾಳಿ ಬೆಳಕನ್ನು ಹೊಂದಿರುವ ನಿಗದಿತ ಅಳತೆಯ ಕೊಠಡಿಗಳಿಲ್ಲದಿರುವುದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ಮತ್ತು ಮೂತ್ರಾಲಯಗಳ ವ್ಯವಸ್ಥೆ ಇರುವುದಿಲ್ಲ ಹಾಗೂ ಶಾಲೆಯನ್ನು ನಡೆಸಲು ಸಾಕಷ್ಟು ಸಮರ್ಥನಿಯ ಅಂಶಗಳು ಮತ್ತು ಶಾಲೆ ವಿಕಾಸ ಹೊಂದಲು ಪೂರಕ ವಾತಾವರಣ ಇರುವುದಿಲ್ಲ. ಸರಕಾರದ ನಿರ್ದೇಶನದಂತೆ ಶಾಲೆಯನ್ನು ಸುವ್ಯವಸ್ಥಿತವಾಗಿ ನಡೆಸಲು ವಿಫಲರಾಗಿರುವುದರಿಂದ ಶಾಲೆಯ ಮಾನ್ಯತೆಯನ್ನು ಹಿಂಪಡೆಯಲಾಗಿದೆ. ಈ ಆದೇಶದ ವಿರುದ್ಧ ಶಾಲೆಯ ಆಡಳಿತ ಮಂಡಳಿಯವರು ಶಾಲಾ ಶಿಕ್ಷಣ ಇಲಾಖೆ ಧಾರವಾಡದ ಅಪರ ಆಯುಕ್ತರ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ದಾಖಲಿಸಿದ್ದು, ಅಪರ ಆಯುಕ್ತರು ವಿಚಾರಣೆ ನಡೆಸಿ ಈ ಮೇಲ್ಮನವಿಯನ್ನು ತಿರಸ್ಕರಿಸುತ್ತಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಹಾಗೂ ಮಕ್ಕಳ ಪಾಲಕರಿಗೆ ಈ ಶಾಲೆಯ ಮಾನ್ಯತೆ ಹಿಂಪಡೆದಿರುವುದರಿಂದ ಈ ಶಾಲೆಯಲ್ಲಿ ಪ್ರವೇಶ ಪಡೆಯದಂತೆ, ಒಂದು ವೇಳೆ ಪ್ರವೇಶ ಪಡೆದರೆ ಮುಂದಿನ ಆಗು ಹೋಗುಗಳಿಗೆ ಪಾಲಕರೆ ಹೊಣೆಗಾರರಾಗುತ್ತಾರೆ. ಈ ನಿಟ್ಟಿನಲ್ಲಿ ಈ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯಿಂದ ದಾಂಡೇಲಿ ನಗರದಲ್ಲಿರುವ ವಿವಿಧ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಈ ಮಕ್ಕಳಿಗೆ ಪ್ರವೇಶಾವಕಾಶವನ್ನು ಒದಗಿಸಿಕೊಡುವಂತೆ ಇಲಾಖೆಯ ವತಿಯಿಂದ ಸೂಚನೆಯನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಸದರಿ ಶಾಲೆಯ ವಿದ್ಯಾರ್ಥಿಗಳ ಪಾಲಕರು ದಾಂಡೇಲಿ ನಗರದ ವಿವಿಧ ಆಂಗ್ಲ ಮಾಧ್ಯಮ ಶಾಲೆಗಳನ್ನು ಭೇಟಿ ಮಾಡಿ, ಮಾಹಿತಿಯನ್ನು ಪಡೆದುಕೊಂಡು ತಮಗೆ ಇಚ್ಚೆಗೆ ಅನುಗುಣವಾಗಿ ಸಂಬಂಧಿಸಿದ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಆಯಾಯ ಶಾಲೆಗಳಿಗೆ ದಾಖಲು ಮಾಡಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ ವಿನಂತಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top