ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಬೈಲ್ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಆ್ಯಪ್ ಮೂಲಕ ಶಾಲಾ ಸಂಸತ್ತಿಗೆ ತಮ್ಮ ನಾಯಕರನ್ನು ಆಯ್ಕೆ ಮಾಡಿಕೊಂಡರು.
ಆರಂಭದಲ್ಲಿ ಮುಖ್ಯಾಧ್ಯಾಪಕರು ,ಬಿಆರ್‌ಸಿ ಸಮನ್ಯಾಧಿಕಾರಿಗಳೂ ಆದ ಚೈತನ್ಯಕುಮಾರ ಕೆ.ಎಮ್. ಮೊಬೈಲ್ ಆ್ಯಪ್‌ನಲ್ಲಿ ಅಣಕು ಮತದಾನ ಉದ್ಘಾಟಿಸಿ ಪ್ರಜಾಪ್ರಭುತ್ವದ ಮಹತ್ವವನ್ನು ಅರಿಯುವ ಮೂಲಕ ವಿದ್ಯಾರ್ಥಿಗಳು ತಮ್ಮ ನಾಯಕರನ್ನು ಆಧುನಿಕ ತಂತ್ರಜ್ಞಾನದ ಮೊಬೈಲ್ ಆ್ಯಪ್ ಮೂಲಕ ಆಯ್ಕೆಮಾಡಿಕೊಳ್ಳಬೇಕೆಂದು ಕರೆನೀಡಿ ಮಕ್ಕಳಿಗೆ ಶುಭಕೋರಿದರು.
ಚುನಾವಣಾ ಸಾಕ್ಷರತಾ ಕ್ಲಬ್ ಮೇಲ್ವಿಚಾರಕಿ ಹಾಗೂ
ಸಮಾಜ ವಿಜ್ಞಾನ ಶಿಕ್ಷಕಿ ಕೀರ್ತಿ ಹೆಗಡೆ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರಿಯೆ ಕುರಿತು ಮಾರ್ಗದರ್ಶನ ಮಾಡಿದ್ದರು. ವಿದ್ಯಾರ್ಥಿಗಳಾದ ಶ್ರೀರಕ್ಷಾ ಗೌಡ, ಚಿತ್ರಶ್ರೀ ನಾಯ್ಕ , ಜೀವನ್, ಚಿನ್ಮಯ್. ಮತಗಟ್ಟೆ ಅಧಿಕಾರಿಗಳಾಗಿದ್ದರು.
ಕು.ರಂಜಿತ್ ನಾಯ್ಕ – ಪ್ರಧಾನಂಮತ್ರಿ, ಚಿನ್ಮಯಿ ನಾಯ್ಕ – ಉಪ ಪ್ರಧಾನ ಮಂತ್ರಿ,ಶ್ರೇಯಾ ನಾಯ್ಕ- ವಿರೋದಪಕ್ಷದ ನಾಯಕಿ, ಶ್ರೇಯಸ್ ನಾಯ್ಕ – ಕ್ರೀಡಾಮಂತ್ರಿ, ಗಿರೀಶ ಹೆಗಡೆ -ಸ್ವಚ್ಚತಾ ಮಂತ್ರಿ, ಸಾಂಸ್ಕೃತಿಕ ಮಂತ್ರಿಯಾಗಿ ಶ್ರೀರಕ್ಷಾ ಗೌಡ. ಗ್ರಂಥಾಲಯ ಮಂತ್ರಿಯಾಗಿ ಮೇಘನಾ ಗೌಡ. ತಂತ್ರಜ್ಞಾನ ಮಂತ್ರಿಯಾಗಿ ಚಿನ್ಮಯ್ ನಾಯ್ಕ- ಆರೋಗ್ಯಮಂತ್ರಿಯಾಗಿ ವಿದ್ಯಾ ಹಸ್ಲರ ಮತ್ತು ಪ್ರಜ್ವಲ್ ನಾಯ್ಕ ಆಯ್ಕೆಯಾದರು. ಶಿಕ್ಷಕರಾದ ಚಂದ್ರಶೇಖರ ನಾಯ್ಕ, ಅಪರ್ಣಾ ಶಾಸ್ತ್ರಿ, ಗೋಪಾಲ ನಾಯ್ಕ, ಗಣೇಶ ಹೆಗಡೆ, ಪ್ರಶಾಂತ ಕಠಾವಕರ್, ವಿನಾಯಕ ನಾಯ್ಕ ಉಪಸ್ಥಿತರಿದ್ದು ಸಹಕರಿಸಿದರು.