ಶಿರಸಿ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನಗರದ ಮಾರಿಗುಡಿ ಕಾಲೇಜ್‌ನಲ್ಲಿ ಶ್ರೀಮತಿ ವಾಣಿ ಯೋಗೇಶ್ ಜಕ್ಕೊಳ್ಳಿ ಇವರಿಂದ ಯೋಗದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಉ.ಕ. ಜಿಲ್ಲಾ ಯೋಗ ಫೆಡರೇಷನ್ ಉಪಾಧ್ಯಕ್ಷ ಶ್ರೀಧರ ಇಸಳೂರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಆರ್.ವಿ. ಶೆಟ್ಟಿ ವಹಿಸಿಕೊಂಡಿದ್ದರು. ಶ್ರೀಮತಿ ಸಾವಿತ್ರಿ ಹೆಗಡೆ ಇವರು ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಬೆನ್ನಿಸ್ ಫೆರ್ನಾಂಡಿಸ್ ವಂದಿಸಿದರು.