Slide
Slide
Slide
previous arrow
next arrow

ವಿಶ್ವದರ್ಶನ ಶಾಲೆಯಲ್ಲಿ ವಿಶ್ವ ಯೋಗದಿನ ಆಚರಣೆ

300x250 AD

ಯಲ್ಲಾಪುರ: ಇಲ್ಲಿನ ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ “ವಿಶ್ವ ಯೋಗ ದಿನಾಚಾರಣೆಯನ್ನು ಆಚರಿಸಲಾಯಿತು. ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಬ್ರಾಯ ಭಟ್ಟ ಅವರು ಯೋಗ ಮನಸ್ಸು ಮತ್ತು ಶರೀರವನ್ನು ಸಂಪರ್ಕಿಸುವ ಸಾಧನವಾಗಿದ್ದು, ಆಸನಗಳನ್ನು ನಿತ್ಯ ಅಭ್ಯಾಸ ಮಾಡಬೇಕೆಂದು ಹೇಳಿ, ಯೋಗದಿಂದಾಗುವ ಪ್ರಯೋಜನವನ್ನು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ ಅವರು ವಿಶ್ವಮಟ್ಟದಲ್ಲಿ ಯೋಗ ಪರಿಚಿತವಾಗಿ 10 ವರ್ಷಗಳಾಗಿವೆ.ಆದರೆ ಭಾರತಕ್ಕೆ ಯೋಗ ಹೊಸತಲ್ಲ ಸಾವಿರಾರು ವರ್ಷಗಳ ಪರಂಪರೆಯಿರುವ ಯೋಗ ಪುರಾತನವಾಗಿದ್ದು ಇದರಿಂದ ಅನೇಕ ಲಾಭವಿದೆ. ಹೀಗಾಗಿ ನಿತ್ಯ ಯೋಗಾಭ್ಯಾಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ನಿತ್ಯ ಸೂರ್ಯನಮಸ್ಕಾರ ಮಾಡುವಂತೆ ವಚನ ಪಡೆದುಕೊಂಡರು.ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಮಹಾದೇವಿ ಭಟ್ಟ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರರಾದ ಶಿವಪ್ರಸಾದ ವಿ.ಭಟ್ಟ ಸ್ವಾಗತಿಸಿ ನಿರ್ವಹಿಸಿದರು. ಸಭಾಕಾರ್ಯಕ್ರಮದ ನಂತರ ಯೋಗ ಶಿಕ್ಷಕರಾದ ಸುಬ್ರಾಯ ಭಟ್ಟ ಜೊತೆಗೂಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಲಘು ವ್ಯಾಯಾಮ,ಸೂರ್ಯ ನಮಸ್ಕಾರ, ವಿವಿಧ ಆಸನಗಳನ್ನು ಹಾಗೂ ಪ್ರಾಣಾಯಾಮದ ಅಭ್ಯಾಸ ನಡೆಸಿದರು.ಮುಂಜಾನೆಯ ಪ್ರಾರ್ಥನಾ ಅವಧಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ದೈಹಿಕ ಶಿಕ್ಷಕರ ಮಾರ್ಗದರ್ಶನದಲ್ಲಿ ವಿವಿಧ ಆಸನಗಳನ್ನು ಮಾಡಿದರು.

300x250 AD
Share This
300x250 AD
300x250 AD
300x250 AD
Back to top