ಜೋಯಿಡಾ : ತಾಲೂಕಿನ ಪ್ರಧಾನಿ ಗ್ರಾಮದ ಹತ್ತಿರ ಕಾರು ಮತ್ತು ಕ್ಯಾಂಪರ್ ವಾಹನದ ನಡುವೆ ಅಪಘಾತ ಸಂಭವಿಸಿ ಕಾರಿನ ಮುಂಭಾಗ ಜಖಂಗೊಂಡ ಘಟನೆ ಶುಕ್ರವಾರ ನಡೆದಿದೆ.
ದಾಂಡೇಲಿಯಿಂದ ಜೋಯಿಡಾಕ್ಕೆ ಹೋಗುತ್ತಿದ್ದ ಕಾರು ಮತ್ತು ಪೊಟೋಲಿಯಿಂದ ದಾಂಡೇಲಿಗೆ ಬರುತ್ತಿದ್ದ ಕ್ಯಾಂಪರ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ವಾಹನದಲ್ಲಿದ್ದವರಿಗೂ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಆದರೆ ಕಾರಿನ ಮುಂಭಾಗ ಮಾತ್ರ ಜಖಂಗೊಂಡಿದೆ.