ಯಲ್ಲಾಪುರ: ತಾಲೂಕಿನ ಉಮ್ಮಚ್ಗಿಯ ಅಣ್ಣಪ್ಪ ಬೋವಿವಡ್ಡರ್ ಎಂಬಾತ ರಾಮನಗುಳಿಯ ಸಂಬಂಧಿಕರ ಮನೆಗೆ ಹೋದವ ಕಣ್ಮರೆಯಾಗಿದ್ದಾನೆ ಎಂದು ಪ್ರಕರಣ ದಾಖಲಾಗಿದೆ.
ಜೂ.14ರಂದು ರಾಮನಗುಳಿಯ ಸೋದರತ್ತೆ ಯಲ್ಲವ್ವರ ಮನೆಗೆ ಆತ ಹೋಗಿದ್ದ. ಅಲ್ಲಿನ ಭಟ್ಟರ ಮನೆಯಲ್ಲಿ 3 ದಿನ ಕೆಲಸವನ್ನು ಮಾಡಿದ್ದ. ಅದಾದ ನಂತರ ಜೂ.16ರ ರಾತ್ರಿ 11 ಗಂಟೆಗೆ ಪತ್ನಿಗೆ ಫೋನ್ ಮಾಡಿದ್ದ ಆತ ಮಕ್ಕಳನ್ನು ಚೆನ್ನಾಗಿ ನೋಡಿಕೋ. ನಾನು ಮತ್ತೆ ಸಿಗುವುದಿಲ್ಲ ಎಂದು ಹೇಳಿದ್ದ ಆತ ಜೂ. 17ರ ಬೆಳಗ್ಗೆಯಿಂದ ಕಾಣೆಯಾಗಿದ್ದಾನೆ. ಹೀಗಾಗಿ ಇದೀಗ ಆತನ ಅಣ್ಣ ಮಂಜುನಾಥ ಬೋವಿವಡ್ಡರ್ ತಮ್ಮನ ಹುಡುಕಾಟಕ್ಕಾಗಿ ಪೊಲೀಸರಿಗೆ ಮನವಿ ಮಾಡಿದ್ದು, ಪೊಲೀಸರು ಆತನ ಹುಡುಕಾಟ ನಡೆಸಿದ್ದಾರೆ.