Slide
Slide
Slide
previous arrow
next arrow

ಚುನಾವಣೆ ಮೂಲಕ ಶಾಲಾ ಸಂಸತ್ತು ರಚನೆ

300x250 AD

ಜೋಯಿಡಾ:ತಾಲೂಕಿನ ಸರ್ಕಾರಿ ಪ್ರೌಢಶಾಲೆ ಗುಂದ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಕಲಿಕೆಯ ಸಮಯದಲ್ಲೇ ಚುನಾವಣೆಯ ಮಹತ್ವ, ಚುನಾವಣೆಯ ಪ್ರಕ್ರಿಯೆ, ಮತದಾನದ ಮಹತ್ವ, ಮತದಾನ ಪ್ರಕ್ರಿಯೆ,ಶಾಲಾ ಸಂಬಂಧಿಸಿದ ಸಂಸತ್ತಿನ  ಚಟುವಟಿಕೆಗಳ ಅರಿವು ಮೂಡಿಸುವ ಉದ್ದೇಶದಿಂದ 2024-2025ನೇ ಸಾಲಿನ ಶಾಲಾ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಡೆಸಲು ಶಾಲಾ ಸಂಸತ್ತಿನ ರಚನೆಯ ನಿಮಿತ್ತ ಚುನಾವಣೆ ಪ್ರಕ್ರಿಯೆ ಮತದಾನದ ಮೂಲಕ ನಡೆದು ಆಯ್ಕೆಗೊಂಡಿತು.           

ಸಾರ್ವತ್ರಿಕ ಚುನಾವಣೆಯಲ್ಲಿ ಅನುಸರಿಸುವ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿತ್ತು. ಮತದಾನದ ಕೊಠಡಿ, ನಾಮಪತ್ರ ಸಲ್ಲಿಕೆ,  ವಿದ್ಯುನ್ಮಾನ ಮೊಬೈಲ್ ಮತಯಂತ್ರ ಆ್ಯಪ್ ,ಶಾಹಿ, ಫಲಿತಾಂಶ ಘೋಷಣೆ, ಪ್ರಮಾಣ ವಚನ ಭೋಧನೆ, ಬಂದೋ ಬಸ್ತ್ ವ್ಯವಸ್ಥೆ,ಗುರುತಿನ ಚೀಟಿಯಾಗಿ ಶಾಲಾ ಗುರುತಿನ ಚೀಟಿ,ಶಾಲಾ ಗುರುತಿನ ಚೀಟಿ ಇಲ್ಲದವರಿಗೆ ಆಧಾರ್ ಕಾರ್ಡನ್ನು ಗುರುತಿನ ಚೀಟಿಯನ್ನಾಗಿ ಅವಕಾಶ ಮಾಡಿಕೊಡಲಾಯಿತು. ಒಟ್ಟು 47 ವಿದ್ಯಾರ್ಥಿಗಳು ಸರತಿಯ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತದಾನದ ಹಕ್ಕನ್ನು ಚಲಾಯಿಸಿದರು.

300x250 AD

ಚುನಾವಣೆಯ ಪ್ರಕ್ರಿಯೆಯ ಮತಗಟ್ಟೆ ಅಧಿಕಾರಿಗಳಾಗಿ ಶಾಲೆಯ ಮುಖ್ಯ ಶಿಕ್ಷಕರಾದ ಜೋಸೆಫ್ ಜಿ, ಸಹ ಶಿಕ್ಷಕರಾದ ನವೀನ, ಪಕೀರಪ್ಪ ,ಪುರುಷೋತ್ತಮ, ರಿಯಾ,ದಿವ್ಯಾ ಬಸವರಾಜ. ನ್ಯಾಯ, ಮುಕ್ತ ಸಮ್ಮತ,ಅಚ್ಚುಕಟ್ಟಾದ ಚುನಾವಣೆಯ ಮತದಾನದ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಶಾಲಾ ಸಂಸತ್ತಿನಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಸದಸ್ಯರ ರಚನೆ ಮಾಡಲಾಯಿತು.

Share This
300x250 AD
300x250 AD
300x250 AD
Back to top