Slide
Slide
Slide
previous arrow
next arrow

ಜೂ.22ಕ್ಕೆ ಕ್ಯಾನ್ಸರ್ ರೋಗಿಗಳ ಸಹಾಯಾರ್ಥವಾಗಿ ‘ಕಾಲಚಕ್ರ’ ನಾಟಕ ಪ್ರದರ್ಶನ

300x250 AD

ಶಿರಸಿ: ಸಾಮಾಜಿಕ, ಆಧ್ಯಾತ್ಮಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದ ಇಲ್ಲಿನ ಪ್ರಜ್ವಲ ಟ್ರಸ್ಟ್ ಈ ಬಾರಿ ಹೊಸ ಪ್ರಯತ್ನಕ್ಕೆ ಮುನ್ನಡಿಯಿಟ್ಟಿದೆ. ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಕ್ಯಾನ್ಸರ್ ರೋಗಿಗಳ ಸಹಾಯಾರ್ಥವಾಗಿ ‘ಕಾಲಚಕ್ರ’ ನಾಟಕ ಪ್ರದರ್ಶನವನ್ನು ಆಯೋಜಿಸಿದೆ ಎಂದು ಪ್ರಜ್ವಲ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜೂ.22, ಶನಿವಾರ ಸಂಜೆ 6.15ರಿಂದ ನಗರದ ಎಪಿಎಂಸಿ ಯಾರ್ಡ್‌ನ ಟಿಆರ್‌ಸಿ ಸಭಾಭವನದಲ್ಲಿ ಮಂಚಿಕೇರಿ ರಂಗಸಮೂಹದವರ ಕಾಲಚಕ್ರ ನಾಟಕವು ಪ್ರದರ್ಶನಗೊಳ್ಳಲಿದೆ ಎಂದರು. ಇತ್ತೀಚೆಗೆ ಕ್ಯಾನ್ಸರ್ ಮಹಾಮಾರಿಯಾಗಿ ವ್ಯಾಪಿಸುತ್ತಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿಯ ಅಭಾವ ಕಂಡುಬರುತ್ತಿದ್ದು, ಈ ಮಹಾಖಾಯಿಲೆಗೆ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ‌. ಜಾಗೃತಿ ಹೆಚ್ಚಾದಂತೆ ಖಾಯಿಲೆಯನ್ನು ಹಿಮ್ಮೆಟ್ಟಿಸಬಹುದು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಹಾಗೂ ಕ್ಯಾನ್ಸರ್ ರೋಗಿಗಳಿಗೆ ಸಹಾಯಹಸ್ತ ನೀಡುವ ಉದ್ದೇಶದಿಂದ ನಾಟಕವನ್ನು ಆಯೋಜಿಸಿದ್ದೇವೆ ಎಂದರು. ಅಂದು ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಉದ್ಘಾಟಿಸಲಿದ್ದಾರೆ. ಈ ಮೊದಲು ಟ್ರಸ್ಟ್ ವತಿಯಿಂದ ನಡೆಸಿದ್ದ ಕ್ಯಾನ್ಸರ್ ಭಯ ನಿವಾರಣಾ ಕಾರ್ಯಾಗಾರದ ಪ್ರಯೋಜನ ಪಡೆದು ಗುಣಮುಖರಾಗುತ್ತಿರುವ ಮಮತಾ ಭಟ್ಟ ಹುಲದೇವನಸರ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

300x250 AD
Share This
300x250 AD
300x250 AD
300x250 AD
Back to top