ಶಿರಸಿ: ತೀವ್ರ ಕುತೂಹಲ ಮೂಡಿಸಿದ್ದ ಟಿಎಸ್ಎಸ್ ಆಡಳಿತಾಧಿಕಾರಿ ನೇಮಕ ಪ್ರಕರಣಕ್ಕೆ ಧಾರವಾಡದ ಉಚ್ಛ ನ್ಯಾಯಾಲಯದ ಡಿವಿಸನಲ್ ಬೆಂಚ್ (ಡಬ್ಬಲ್ ಬೆಂಚ್) ನಲ್ಲಿ ಈ ಹಿಂದಿನ ಸಿಂಗಲ್ ಬೆಂಚ್ ಮಧ್ಯಂತರ ಆದೇಶಕ್ಕೆ ಮತ್ತೆ ಮಧ್ಯಂತರ ತಡೆ ನೀಡಿ ಬುಧವಾರ ಆದೇಶಿಸಿದೆ.
ಆ ಮೂಲಕ ಹಾಲಿ ಆಡಳಿತ ಮಂಡಳಿ ಗೋಪಾಲಕೃಷ್ಣ ವೈದ್ಯ ಗುಂಪಿಗೆ ತುಸು ಮುನ್ನಡೆಯಾಗಿದ್ದು, ಮುಂದಿನ ಆದೇಶದ ವರೆಗೆ ಆಡಳಿತಾಧಿಕಾರಿ ನೇಮಕಕ್ಕೆ ಸ್ಟೇ ಸಿಕ್ಕಂತಾಗಿದ್ದು, ಹಾಲಿ ಆಡಳಿತ ಮಂಡಳಿಯೇ ಸದ್ಯಕ್ಕೆ ಮುಂದುವರೆಯುವ ಲಕ್ಷಣ ಕಾಣುತ್ತಿದೆ.