Slide
Slide
Slide
previous arrow
next arrow

ಕಾಡುಹಂದಿ ಬೇಟೆ: ಆರೋಪಿಗಳ ಬಂಧನ

300x250 AD

ಬನವಾಸಿ: ಬನವಾಸಿ ಅರಣ್ಯ ವಲಯದ ದಾಸನಕೊಪ್ಪ ಶಾಖೆಯ ಹೆಬ್ಬತ್ತಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡುಹಂದಿ ಬೇಟೆ ಮಾಡಿ ಮಾಂಸ ತಯಾರಿಸುತ್ತಿದ್ದ ಆರೋಪಿಗಳನ್ನು ಬನವಾಸಿ ವಲಯ ಅರಣ್ಯಾಧಿಕಾರಿ ಮಂಗಳವಾರ ಬಂಧಿಸಿದ್ದಾರೆ.

ಕಳೆದ ಜೂ.16ರಂದು ಕಾಡುಹಂದಿ ಬೇಟೆಯಾಡಿ ಮಾಂಸ ತಯಾರಿಸಿ ಪರಾರಿಯಾಗಿದ್ದರು. ಅರಣ್ಯ ಇಲಾಖೆ ಆರೋಪಿಗಳ ಪತ್ತೆಗೆ ಒಂದು ತಂಡವನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಾಗ ಸಂತೊಳ್ಳಿ ಗ್ರಾಮದ ಬಸವರಾಜ ಯಲ್ಲಪ್ಪ ಚನ್ನಯ್ಯ ಹಾಗೂ ಉಮೇಶ ಚನ್ನಪ್ಪ ಚನ್ನಯ್ಯ ಎಂಬಾತನನ್ನು ಬಂಧಿಸಿದ್ದಾರೆ.

300x250 AD

ವಲಯ ಅರಣ್ಯಾಧಿಕಾರಿ ವರದಾ ರಂಗನಾಥ ಜಿ. ಹೆಚ್, ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ ನಾರ್ವೆಕರ್, ಗಸ್ತು ಅರಣ್ಯ ಪಾಲಕರಾದ ದಯಾನಂದ ಬೊರ್ಕರ್, ಸಿದ್ದಪ್ಪ ನಾವಿ, ಅರಣ್ಯ ವೀಕ್ಷಕರಾದ ಚಂದ್ರು ಗೌಡ, ಗಿರೀಶ ಕುರುಬರ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Share This
300x250 AD
300x250 AD
300x250 AD
Back to top