Slide
Slide
Slide
previous arrow
next arrow

ಅಕ್ರಮ ಜಾನುವಾರು ಸಾಗಾಟ: ಚರ್ಚೆಗೆ ಗ್ರಾಸವಾದ ಪ್ರಕರಣ ದಾಖಲೀಕರಣ

300x250 AD

-ಸಂದೇಶ್.ಎಸ್.ಜೈನ್

ದಾಂಡೇಲಿ : ಹಳಿಯಾಳ ಕಡೆಯಿಂದ ದಾಂಡೇಲಿಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡಿಕೊಂಡು ಬರುತ್ತಿದ್ದ ವಾಹನವನ್ನು ಜಾನುವಾರು ಸಹಿತ ದಾಂಡೇಲಿ ನಗರ ಠಾಣೆಯ ಪೊಲೀಸರು ದಾಂಡೇಲಿ ನಗರದ ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರ ಜೂ.16 ರಂದು ಭಾನುವಾರ ವಶಪಡಿಸಿಕೊಂಡಿದ್ದರು.

ಈ ಕೃತ್ಯಕ್ಕೆ ಬಳಸಲಾದ ಕೆಎ31, ಎ3994 ಸಂಖ್ಯೆಯ ಟಾಟಾ ಎಸಿ ವಾಹನವನ್ನು ಮತ್ತು ಅದರಲ್ಲಿದ್ದ ಎರಡು ದನಗಳನ್ನು ವಶಪಡಿಸಿಕೊಂಡು, ಸ್ಥಳೀಯ ನಿವಾಸಿ ವಾಹನದ ಚಾಲಕನೆಂದು ಶಕೀಲ್ ಎಂಬಾತನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದೇ ಸಂದರ್ಭದಲ್ಲಿ ಅದೇ ವಾಹನದ ಮಾಲಕ ಹಾಗೂ ಎರಡು ದನಗಳ ಮಾಲಕನು ಆಗಿರುವ ಶೆರಿಫ್ ಸಿದ್ದಿ ಇದ್ದು, ಆದರೆ ಪೊಲೀಸರು ಮಾತ್ರ ಶೆರಿಫ್ ಸಿದ್ದಿಯ ಹೆಸರನ್ನು ಕೈ ಬಿಟ್ಟು ಕೇವಲ ಚಾಲಕನ ಮೇಲೆ ಪ್ರಕರಣ ದಾಖಲಿಸಿರುವುದು ಹತ್ತು ಹಲವು ಅನುಮಾನ ಮತ್ತು ಪೊಲೀಸರ ನಡೆಯ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

300x250 AD

ಪಿಎಸ್ಐ ಐ.ಆರ್.ಗಡ್ಡೆಕರ್ ತಮ್ಮ ಸಿಬ್ಬಂದಿಗಳ ಜೊತೆ ಸೇರಿ ವಾಹನ ಸಹಿತ ಅದರಲ್ಲಿದ್ದ ದನಗಳ ಜೊತೆ ಚಾಲಕ ಶಕೀಲ್‌ನನ್ನು ವಶಕ್ಕೆ ಪಡೆದುಕೊಳ್ಳುವ ಸಂದರ್ಭದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ದನಗಳನ್ನು ಸಾಗಾಟ ಮಾಡಿದ ವಾಹನದ ಮಾಲಕನು ಆಗಿರುವ ಹಾಗೂ ಮಾರಾಟಕ್ಕೆ ಸಂಬಂಧಪಟ್ಟಂತೆ ಸಾಗಾಟಕ್ಕೆ ಪಶುವೈದ್ಯರಿಂದ ಅನುಮತಿ ಪತ್ರ ಪಡೆಯದೆ ಹಾಗೂ ಅಗತ್ಯ ದಾಖಲೆ ಪತ್ರಗಳು ಇಲ್ಲದೆ ಮಾರಾಟಕ್ಕಾಗಿ ಸಾಗಾಟ ಮಾಡಿದ ದನಗಳ ಮಾಲಕನು ಆಗಿರುವ ಶೆರೀಫ್ ಸಿದ್ದಿಯನ್ನು ವಶಕ್ಕೆ ತೆಗೆದುಕೊಳ್ಳದೆ, ಎಫ್ಐಆರ್‌ನಲ್ಲಿ ಆತನ ಹೆಸರನ್ನು ದಾಖಲಿಸದೆ ಇರುವುದು ಪೊಲೀಸರ ನಡೆಯನ್ನೇ ಪ್ರಶ್ನಿಸುವಂತಾಗಿದೆ. ಇನ್ನೂ ವಾಹನದ ಮಾಲಕನು ಆಗಿರುವ ದನಗಳ‌ ಮಾಲಕ ಶೆರಿಫ್ ಸಿದ್ದಿ ಈತನನ್ನು ಅದೇ ದಿನ ನಗರದ ಪೊಲೀಸ್ ಠಾಣೆಯ ಹತ್ತಿರವೆ ಮಾತನಾಡಿಸಿದಾಗ ಆತ ವಾಹನವು ನನ್ನದು, ಎರಡು ದನಗಳು ನನ್ನದು, ರೂ.50 ಸಾವಿರಕ್ಕೆ ದನಗಳನ್ನು ಮಾರಾಟ ಮಾಡಲು ತಂದಿದ್ದೇನೆ ಎಂದು ಹೇಳಿರುತ್ತಾನೆ. ಆದರೂ ಎಫ್.ಐ.ಆರ್ ನಲ್ಲಿ ಆತನ ಹೆಸರನ್ನು ದಾಖಲಿಸಿಲ್ಲ ಎಂಬ ಮಾಹಿತಿ ಅನುಮಾನಕ್ಕೆ ಕಾರಣವಾಗಿದೆ. ಆದರೆ ನಗರ ಠಾಣೆಯ ಪೊಲೀಸರು ಹೀಗ್ಯಾಕೆ ಮಾಡಿದರೂ, ಹೀಗೆ ಮಾಡಲು ಕಾರಣಗಳೇನು ಎನ್ನುವ ಹಲವಾರು ಅನುಮಾನಗಳ ಹುತ್ತ ಇದೀಗ ಪೊಲೀಸ್ ಠಾಣೆಯ ಸುತ್ತ ಗಿರಾಕಿ ಹೊಡೆಯುತ್ತಿದೆ.

ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾದ ತನಿಖೆ ಮಾಡದೇ ಇರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಇದು ಪೊಲೀಸ್ ಇಲಾಖೆಯ ಬಗ್ಗೆ ಜನರಿಗಿರುವ ನಂಬಿಕೆ, ವಿಶ್ವಾಸ ಕಡಿಮೆಯಾಗಲು ಕಾರಣವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಪ್ರಕರಣಗಳಿಗೆ ಸಂಬಂಧಪಟ್ಟಂತೆ ತಮ್ಮ ಮನಸ್ಸಿಗೆ ಬಂದಂತೆ ಕ್ರಮಗಳನ್ನು ಕೈಗೊಳ್ಳುವುದು ಎಷ್ಟರಮಟ್ಟಿಗೆ ಸರಿ ಎನ್ನುವ ಪ್ರಶ್ನೆಯು ದಾಂಡೇಲಿ ನಗರ ಪೊಲೀಸ್ ಠಾಣೆಯ ಮೇಲಿದ್ದು, ನಗರ ಪೊಲೀಸ್ ಠಾಣೆಯ ಕರ್ತವ್ಯ ಲೋಪದ ವಿಚಾರ ದಾಂಡೇಲಿ ನಗರದಲ್ಲಿ ಇದೀಗ ಬಿಸಿಬಿಸಿ ಚರ್ಚೆಯಲ್ಲಿದ್ದು, ಪೊಲೀಸರನ್ನೇ ಅನುಮಾನದಿಂದ ನೋಡುವಂತಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳು ತಮ್ಮ ಸಿಬ್ಬಂದಿಗಳ ಪರವಾಗಿ ನಿಲ್ಲದೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರಗೆಡವಿ ಘಟನೆಗೆ ಕಾರಣರಾದ ಎಲ್ಲರ ಮೇಲೆ ಮತ್ತು ಅಧಿಕಾರವನ್ನು ದುರ್ಬಳಕೆ ಮಾಡಿರುವುದು ಹಾಗೂ ವಾಹನದ ಹಾಗೂ ದನಗಳ ಮಾಲಕನ ಹೆಸರನ್ನು ಕೈ ಬಿಟ್ಟಿರುವುದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾಗಿದೆ.

Share This
300x250 AD
300x250 AD
300x250 AD
Back to top