ಹೊನ್ನಾವರ: ವಿದ್ಯಾರ್ಥಿಗಳಿಗೆ ಹೊಸತನವನ್ನು ಕಲಿಸುತ್ತಾ , ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸುತ್ತಾ ,ವಿಭಿನ್ನ ಹಾಗೂ ವಿಶಿಷ್ಟವಾಗಿ ಏಳ್ಗೆ ಹೊಂದುತ್ತಿರುವ ತಾಲೂಕಿನ ಆಂಗ್ಲ ಮಾಧ್ಯಮ ಶಾಲೆಗಳಲ್ಲೊಂದಾದ ಶ್ರೀ ಸಿದ್ಧಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆ ಕೊಳಗದ್ದೆ ಖರ್ವಾದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳು ಪರಿಸರ ರಕ್ಷಣೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕೆಂಬ ಉದ್ದೇಶದಿಂದ ಬೀಜದ ಉಂಡೆಗಳನ್ನ ಮಾಡಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದ ಅತಿಥಿಗಳಾಗಿ ಮಂಕಿ ಅರಣ್ಯ ಇಲಾಖೆಯ ಗಸ್ತುಪರಿಪಾಲಕ ಅಧಿಕಾರಿ ವಿನಾಯಕ ನಾಯ್ಕ್ ಆಗಮಿಸಿದ್ದು, ದೀಪ ಬೆಳಗಿಸುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇವರು ವನಮಹೋತ್ಸವ ಆಚರಣೆಯ ಉದ್ದೇಶ,ಬೀಜದ ಉಂಡೆ ಮಾಡುವ ವಿಧಾನ,ಉಪಯೋಗ ಮತ್ತು, ಮಹತ್ವವನ್ನು ತಿಳಿಸಿದರು. ಅದಲ್ಲದೆ ಪ್ರಸ್ತುತ ಅರಣ್ಯ ಇಲಾಖೆಯಲ್ಲಿರುವ ಹೊಸ-ಹೊಸ ಯೋಜನೆಗಳ ಕುರಿತು ತಿಳಿಸಿದರು.ಪುಟಾಣಿ ವಿದ್ಯಾರ್ಥಿಗಳೊಂದಿಗೆ ಗಿಡವನ್ನೂ ನೆಟ್ಟರು. ಮಕ್ಕಳೇ ತಮ್ಮ ಮನೆಗಳಿಂದ ತಂದಿದ್ದ ಮಣ್ಣಿನಿಂದ ಸುಮಾರು 2000ರಷ್ಟು ಬೀಜದ ಉಂಡೆಗಳನ್ನು ತಯಾರಿಸಿ ಅದನ್ನು ಸಂರಕ್ಷಿಸಿಟ್ಟರು. ಬೀಜದ ಉಂಡೆ ತಯಾರಿಕೆಗೆ ಹೊನ್ನಾವರ ಅರಣ್ಯ ಇಲಾಖೆಯ ಆರ್.ಎಫ್.ಓ. ವಿಕ್ರಂ ರೆಡ್ಡಿ ಅವರು ಹೊಂಗೆ, ಹೆಬ್ಬೇವು, ಸಾಗುವಾನಿ, ಅಂಟುವಾಳ, ತಾರೆ, ನೇರಳೆ, ಮುರುಗಲು ಹೀಗೆ 10 ಬಗೆಯ ಬೀಜಗಳನ್ನು ಕಳುಹಿಸಿಕೊಟ್ಟಿದ್ದರು.ಅವರ ಸಹಕಾರವನ್ನು ಈ ಸಮಯದಲ್ಲಿ ಸ್ಮರಿಸಲಾಯಿತು.
ಶಾಲೆಯ ಮುಖೋಪಾಧ್ಯಾಯ ಮಹೇಶ್ ಹೆಗಡೆ ಸ್ವಾಗತಿಸಿದರು. ಶಿಕ್ಷಕಿ ನಯನಾ ಮಡಿವಾಳ ನಿರೂಪಿಸಿದರೆ, ಶಿಕ್ಷಕಿ ವೀಣಾ ಆಚಾರ್ಯ ಪ್ರಾರ್ಥಿಸಿದರು.ಶಿಕ್ಷಕಿ ಹಾರ್ದಿಕ ಗೌಡ ವಂದಿಸಿದರು.ವಿದ್ಯಾರ್ಥಿಗಳು, ಹಾಗೂ ಶಿಕ್ಷಕೇತರ ಸಿಬ್ಭಂದಿ ವಗ೯ದವರು ಈ ವೇಳೆ ಹಾಜರಿದ್ದರು.