ಯಲ್ಲಾಪುರ: ಉತ್ತರಪ್ರದೇಶ ವಾರಣಾಸಿಯಲ್ಲಿ ಜೂ.18ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೃಷಿ ಸಖಿಯರ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ತಾಲೂಕಿನ ಜಂಬೆಸಾಲಿನ ಶ್ರೀಲತಾ ರಾಜೀವ ಭಾಗವಹಿಸಲಿದ್ದಾರೆ.
ಡೇ-ಎನ್.ಆರ್.ಎಲ್.ಎಂ, ಎನ್.ಎಂ.ಎಂ.ಯು, ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯಗಳ ಸಹಯೋಗದಲ್ಲಿ ಈ ಸಂವಾದ ಕಾರ್ಯಕ್ರಮ ನಡೆಯಲಿದೆ. ನೈಸರ್ಗಿಕ ಕೃಷಿ ತರಬೇತಿ ಹೊಂದಿದ ಕೃಷಿ ಸಖಿಯರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಇದರಲ್ಲಿ ರಾಜ್ಯದ ಇಬ್ಬರು ಕೃಷಿ ಸಖಿಯರು ಭಾಗವಹಿಸುತ್ತಿದ್ದು, ಅದರಲ್ಲಿ ಶ್ರೀಲತಾ ಕೂಡ ಒಬ್ಬರು.
ನೈಸರ್ಗಿಕ ಕೃಷಿಯ ತರಬೇತಿ, ಪ್ರಮಾಣ ಪತ್ರ ಪಡೆದಿರುವ ಶ್ರೀಲತಾ, ಪ್ರಗತಿಪರ ಕೃಷಿಕರಾಗಿ ಸಾಧನೆಯ ಹಾದಿಯಲ್ಲಿದ್ದಾರೆ.