ಹೊನ್ನಾವರ : ಪ್ರಧಾನ ಮಂತ್ರಿ ಕನ್ಯಾ ಆಶೀರ್ವಾದ ಯೋಜನೆಗೆ ಅರ್ಜಿ ಹಾಕಲು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ (ಫೇಕ್ ) ಎಂದು ಸಂಬಂಧಪಟ್ಟ ಇಲಾಖೆ ತಮ್ಮ ಅಧಿಕೃತ ವೆಬ್ ಸೈಟ್ ಮೂಲಕ ತಿಳಿಸಿದೆ.
ಪ್ರಧಾನಮಂತ್ರಿ ಕನ್ಯಾ ಆಶೀರ್ವಾದ ಯೋಜನೆಯಡಿ ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗೆ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ದೇಶದ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಆದಾಗ್ಯೂ, ಈ ಮಾಹಿತಿಯು ಸಂಪೂರ್ಣವಾಗಿ ಸುಳ್ಳು. ಕೇಂದ್ರ ಸರ್ಕಾರ ಅಂತಹ ಯಾವುದೇ ಯೋಜನೆ ಆರಂಭಿಸಿಲ್ಲ.
ಪ್ರಧಾನ ಮಂತ್ರಿ ಕನ್ಯಾ ಆಶೀರ್ವಾದ್ ಯೋಜನೆ (ನಕಲಿ)
ಈ ಕಾರ್ಯಕ್ರಮದ ಮೂಲಕ ಕೇಂದ್ರ ಸರ್ಕಾರವು ದೇಶದ ಎಲ್ಲಾ ಹೆಣ್ಣುಮಕ್ಕಳಿಗೆ ತಿಂಗಳಿಗೆ ₹ 2000 ನಗದು ಸಹಾಯವನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಸರ್ಕಾರವು ಹಣವನ್ನು ಸ್ವೀಕರಿಸುವವರ ಬ್ಯಾಂಕ್ ಖಾತೆಗೆ ನೇರ ಬ್ಯಾಂಕ್ ಠೇವಣಿ ಮಾಡುತ್ತದೆ. ಆದಾಗ್ಯೂ, ಯಾವ ಹುಡುಗಿಯರು ಈ ಆರ್ಥಿಕ ಬೆಂಬಲವನ್ನು ಪಡೆಯುತ್ತಾರೆ ಎಂಬುದು ಇನ್ನೂ ತಿಳಿದಿಲ್ಲ ಮತ್ತು ದೇಶದ ಮಹಿಳೆಯರು ಕನ್ಯಾ ಆಶೀರ್ವಾದ್ ಯೋಜನೆ 2023 ರಿಂದ ಹೇಗೆ ಲಾಭ ಪಡೆಯುತ್ತಾರೆ. ಅಧಿಕೃತ ಅಪ್ಲಿಕೇಶನ್ ವೆಬ್‌ಸೈಟ್ ಮತ್ತು ಯಾವುದೇ ಸಂಬಂಧಿತ ಮಾಹಿತಿಯು ನಮಗೆ ಲಭ್ಯವಿಲ್ಲ ಎಂದು ಇಲಾಖೆ ತಿಳಿಸಿದೆ.
ಈ ನಕಲಿ ಪೋಸ್ಟ್ ನಂಬಿಕೊಂಡು ಜನರು ಸೈಬರ್ ಸೆಂಟರ್, ಸಿ ಎಸ್ ಸಿ, ಗ್ರಾಮ್ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಬರುತ್ತಿದ್ದಾರೆ. ಜಾಲತಾಣದಲ್ಲಿ ಹರಿದಾಡುತ್ತಿರುವ ತಪ್ಪು ಸಂದೇಶದಿಂದ ಜನ ಅಲೆದಾಟ ಮಾಡುವಂತಾಗಿದೆ.