ಭಟ್ಕಳ: ಸರಕಾರದ ಆದೇಶ ಇಲಾಖೆಯ ಸುತ್ತೋಲೆ ಹಾಗೂ ವರ್ಗಾವಣೆ ನಿಯಮ ಉಲ್ಲಂಘಿಸಿ. ರಾಜಕೀಯ ಇನ್ನಿತರ ಪ್ರಭಾವ ಬಳಸಿ, ಸುಮಾರು 10 ವರ್ಷಕ್ಕಿಂತ ಹೆಚ್ಚು ಭಟ್ಕಳ ತಾಲೂಕು ಕಚೇರಿಯ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ನೌಕರರನ್ನು ವರ್ಗಾವಣೆ ಮಾಡುವಂತೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ವೇದಿಕೆ ಭಟ್ಕಳ ವತಿಯಿಂದ ಸಚಿವ ಮಂಕಾಳ ವೈದ್ಯರಿಗೆ ಮನವಿ ಸಲ್ಲಿಸಿದರು.
ಭಟ್ಕಳ ತಾಲೂಕು ತಹಶೀಲ್ದಾರ ಕಂದಾಯ ಕಚೇರಿಯಲ್ಲಿ ಸುಮಾರು 10 ವರ್ಷಕ್ಕಿಂತ ಹೆಚ್ಚು ಪ್ರಥಮದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸಿ ಹಾಲಿ ಪದೋನ್ನತಿ ಹೊಂದಿ ಉಪ ತಹಶೀಲ್ದಾರ ಆಗಿ ಕೆಲಸ ನಿರ್ವಹಿಸುತ್ತಿರುವ ರಜನಿ ಜಿ. ದೇವಡಿಗಾ ಹಾಗೂ ಗ್ರಾಮಲೆಕ್ಕಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಈಗ ಒಂದೇ ಕಚೇರಿಯಲ್ಲಿ 2 ಬಾರಿ ಪದೋನ್ನತಿ ಹೊಂದಿ ಶಿರಸ್ತೆದಾರರಾಗಿ ಕೆಲಸ ನಿರ್ವಹಿಸುತ್ತಿರುವ ಎಂ. ವಿಜಯಲಕ್ಷ್ಮಿ ಮಣಿ ಇವರು ಮತ್ತು ರಾಧಿಕಾ ಹೆಗಡೆ, ವಿಶ್ವನಾಥ ಕರಡೆ, ಸರ್ಕಾರದ ಆದೇಶ ಮತ್ತು ಇಲಾಖೆಯ ಸುತ್ತೋಲೆ ಹಾಗೂ ವರ್ಗಾವಣೆ ನಿಯಮಾವಳಿಗಳನ್ನು ಗಾಳಿಗೆ ತೂರಿ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿರುವುದು ನೋಡಿದರೇ ಕೆ.ಸಿ.ಎಸ್.ಆರ್. ನಿಯಮ ಉಲ್ಲಂಘಿಸಿ, ತಮ್ಮ ರಾಜಕೀಯ ಪ್ರಭಾವ ಇನ್ನು ಎಷ್ಟರ ಮಟ್ಟಿಗೆ ಬೀರಿರಬಹುದು. ಮತ್ತು ಈ ಸ್ಥಳದಲ್ಲಿ ಇನ್ನೆಂತಹ ಭ್ರಷ್ಟಾಚಾರ ಇರಬಹುದು ಎಂದು ಸ್ಪಷ್ಟವಾಗಿ ಕಾಣುತ್ತಿದೆ. ಪಾರದರ್ಶಕ ಆಡಳಿತವಂತೂ ಮಣ್ಣು ಪಾಲಾದಂತೆ ಕಾಣುತ್ತಿದೆ. ಸರಕಾರದ ಇಲಾಖೆಯ ಯಾವ ನಿಯಮಾವಳಿಗಳು ಇವರಿಗೆ ಅನ್ವಯಿಸುವಂತೆ ಕಾಣುತ್ತಿಲ್ಲ, ಜೊತೆಗೆ ಇಂತಹ ಜವಾಬ್ದಾರಿ ಹುದ್ದೆಯಲ್ಲಿ ನಿರ್ವಹಿಸುವ ಸಿಬ್ಬಂದಿಗಳು ಇಡೀ ಭಟ್ಕಳ ತಾಲೂಕಿನಲ್ಲಿ ಯಾರೂ ಇಲ್ಲವೆನು ಎಂಬ ಅನುಮಾನ ಭಟ್ಕಳ ನಾಗರಿಕರು ಮತ್ತು ಸಾರ್ವಜನಿಕರನ್ನು ಕಾಡುತ್ತಿದೆ.
ಆದ್ದರಿಂದ ಭಟ್ಕಳ ತಹಶೀಲ್ದಾರ ಕಚೇರಿಯ ರಜನಿ ಜಿ. ದೇವಡಿಗ ಮತ್ತು ಶ್ರೀಮತಿ ಎಂ. ವಿಜಯಲಕ್ಷ್ಮೀ, ಮಣಿ, ರಾಧಿಕಾ ಹೆಗಡೆ, ವಿಶ್ವನಾಥ ಕರಡೆ, ಸೇರಿದಂತೆ ಭಟ್ಕಳ ತಾಲೂಕು ಕಚೇರಿಯಲ್ಲಿ ಹಾಗೂ ಕಂದಾಯ ಇಲಾಖೆಯಲ್ಲಿ ಬಹುತೇಕ ನೌಕರರು ಐದು ವರ್ಷಕ್ಕೂ ಹೆಚ್ಚು ಕಾಲ ಒಂದೇ ಕಡೆ ಕೆಲಸ ಮಾಡುತ್ತಿರುವುದು ಜಿಲ್ಲಾಡಳಿತದ ವೈಫಲ್ಯ ಎದ್ದು ಕಾಣುತ್ತಿದೆ.
ಈ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ತಾವು ಈ ನೌಕರರನ್ನು ತಕ್ಷಣವೇ ತಾಲೂಕಿನ ಒಳಗೆ ವರ್ಗಾವಣೆ ಮಾಡದೇ ತಾಲೂಕಿನ ಹೊರಗೆ ವರ್ಗಾವಣೆ ಮಾಡಬೇಕಾಗಿ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ವೇದಿಕೆ ಭಟ್ಕಳದ ಅಧ್ಯಕ್ಷ ನಾಗೇಂದ್ರ ನಾಯ್ಕ, ಕಾರ್ಯದರ್ಶಿ ನಾಗೇಶ ನಾಯ್ಕ, ಸಹಕಾರ್ಯದರ್ಶಿ ವಸಂತ ದೇವಾಡಿಗ ಉಪಸ್ಥಿತರಿದ್ದರು.