Slide
Slide
Slide
previous arrow
next arrow

ಟಿಎಸ್ಎಸ್‌ನಲ್ಲಿ ಸಸ್ಯ ಪ್ರದರ್ಶನ, ಮಾರಾಟ ಕಾರ್ಯಕ್ರಮ ಉದ್ಘಾಟನೆ

300x250 AD

ಶಿರಸಿ: ಟಿ.ಎಸ್.ಎಸ್.ಲಿ., ಶಿರಸಿ. ಪ್ರಧಾನ ಕಛೇರಿಯ ಆವರಣದಲ್ಲಿ ಜೂ.11, ಮಂಗಳವಾರ ಬೆಳಿಗ್ಗೆ 10.30ಕ್ಕೆ ಕೃಷಿ ಉತ್ತೇಜಿಸುವ ದೃಷ್ಟಿಯಿಂದ ವಿವಿಧ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ “ಹಸಿರು ಮಾಸ” ಉದ್ಘಾಟನಾ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವೈದ್ಯ ವಹಿಸಿದ್ದರು. ಸಾಂಕೇತಿಕವಾಗಿ ಕಾಳು ಮೆಣಸಿನ ಗಿಡವನ್ನು ಸದಸ್ಯರಾದ ನಾಗಪತಿ ಕೃಷ್ಣ ಹೆಗಡೆ ಚಿಪಗಿ ಇವರಿಗೆ ನೀಡುವುದರ ಮೂಲಕ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಘದ ಸದಸ್ಯರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ರಿಯಾಯತಿ ದರದಲ್ಲಿ ಕಾಳುಮೆಣಸಿನ ಸಸ್ಯಗಳನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು. ಈ ಹಸಿರು ಮಾಸ ಶೀರ್ಷಿಕೆಯಡಿಯಲ್ಲಿ ಸಂಘದಲ್ಲಿ ಮಳೆಗಾಲದ ಪರ್ಯಂತ ಅಡಿಕೆ, ವಿವಿಧ ಜಾತಿಯ ಕಾಳು ಮೆಣಸು, ಬಾಳೆ, ಮಾವು, ಗೇರು, ತೆಂಗು, ಲಿಂಬೆ, ಪೇರಳೆ, ಚಿಕ್ಕು, ಏಲಕ್ಕಿ, ಕಾಫಿ, ಹಲಸು ಹೀಗೆ ಆಹಾರ ಮತ್ತು ವಾಣಿಜ್ಯ ಬೆಳೆಗಳ ಆರೋಗ್ಯವಂತ ಸಸ್ಯಗಳು ಮತ್ತು ವಿವಿಧ ಜಾತಿಯ ಹೂವಿನ ಗಿಡಗಳ ಮಾರಾಟ ವ್ಯವಸ್ಥೆ ಮಾಡಲಾಗಿದ್ದು, ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಲು ಸೂಚಿಸಿದರು. ಯಾವ ಸಂದರ್ಭದಲ್ಲಿ ಯಾವ ಬೆಳೆ ರೈತರ ಕೈ ಹಿಡಿಯುವುದು ಎಂದು ಹೇಳುವುದು ಕಷ್ಟ. ದರ, ಹವಾಮಾನ ವೈಪರೀತ್ಯ ಇತರೇ ಕಾರಣದಿಂದ ಎಲ್ಲ ಬೆಳೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಬೆಳೆದರೆ ಒಂದಲ್ಲ ಒಂದು ಬೆಳೆ ರೈತರ ರಕ್ಷಣೆಗೆ ನೆರವಾಗುವುದು ಖಂಡಿತ ಎಂದು ಉಲ್ಲೇಖಿಸಿದರು.
ಕಾರ‍್ಯಕ್ರಮದಲ್ಲಿ ಟಿ.ಎಸ್.ಎಸ್.ನ ಉಪಾಧ್ಯಕ್ಷರಾದ ಎಂ. ಎನ್ ಭಟ್ಟ ತೋಟಿಮನೆ ಇವರು ಸದಸ್ಯರಾದ ರವೀಂದ್ರ ಹೆಗಡೆ ಇವರಿಗೆ ಸಾಂಕೇತಿಕವಾಗಿ ಕಾಳು ಮೆಣಸಿನ ಸಸ್ಯ ನೀಡಿದರು. ಅಕ್ಯುಟೆಕ್ ಕೆಮಿಕಲ್ ಫರ್ಟಿಲೈಸರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಗಿರೀಶ ಧಾತಾರ ವಿಶೇಷ ಅತಿಥಿಯಾಗಿ ಭಾಗವಹಿಸಿ ಸಂಘದ ಸದಸ್ಯರಾದ ಉಮಾಪತಿ ನಾರಾಯಣ ಭಟ್ಟ ಡೊಂಬೇಸರ ಇವರಿಗೆ ಉಚಿತ ಸಸ್ಯ ವಿತರಿಸಿ ಹಸಿರು ಮಾಸಕ್ಕೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವೈದ್ಯ ಅತಿಥಿ ಗಿರೀಶ ಧಾತಾರ ಇವರಿಗೆ ನೆನಪಿನ ಕಾಣಿಕೆಯಾಗಿ ಮಾವಿನ ಗಿಡ ನೀಡಿದರು. ಖ್ಯಾತ ಬರಹಗಾರ ಶಿವಾನಂದ ಕಳವೆ ಭಾಗಿಯಾಗಿದ್ದರು. ಕಾರ‍್ಯಕ್ರಮದಲ್ಲಿ ಟಿ.ಎಸ್.ಎಸ್.ನ ನಿರ್ದೇಶಕರಾದ ಗಣಪತಿ ಜೋಶಿ ಕೊಪ್ಲತೋಟ, ದತ್ತಗುರು .ಎಸ್. ಹೆಗಡೆ ಕಡವೆ, ರವೀಂದ್ರ ಜಯಪ್ರಕಾಶ ಹೆಗಡೆ, ದೇವೇಂದ್ರ ನಾಯ್ಕ ಕುಪ್ಪಳ್ಳಿ ಹಾಗೂ ಪ್ರಭಾರಿ ಪ್ರಧಾನ ವ್ಯವಸ್ಥಾಪಕ ಗಿರೀಶ ಚಿದಾನಂದ ಹೆಗಡೆ ಸಂಕದಮನೆ ಸಂಘದ ಹಲವಾರು ಸಿಬ್ಬಂದಿಗಳು, ಅನೇಕ ಸದಸ್ಯರು ಗ್ರಾಹಕರು ಉಪಸ್ಥಿತರಿದ್ದರು. ಸಹಾಯಕ ವ್ಯವಸ್ಥಾಪಕ ಗೋಪಾಲ ಹೆಗಡೆ ಸ್ವಾಗತ, ವಂದನಾರ್ಪಣೆ ಹಾಗೂ ಕಾರ‍್ಯಕ್ರಮ ನಿರೂಪಣೆ ನಡೆಸಿಕೊಟ್ಟರು.

300x250 AD
Share This
300x250 AD
300x250 AD
300x250 AD
Back to top