Slide
Slide
Slide
previous arrow
next arrow

ಕಲೆಗಳು ಶಿಕ್ಷಣದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ: ಬಸವರಾಜ್ ಪಾರಿ

300x250 AD

ಹಳಿಯಾಳ : ಕಲೆಗಳು ಮಕ್ಕಳ ಮನಸ್ಸನ್ನು ಆಕರ್ಷಿಸುತ್ತವೆ. ಆ ಮೂಲಕವಾಗಿ ಶಿಕ್ಷಣ ನೀಡುವುದರಿಂದ ಅದು ಮಕ್ಕಳ ಮನಸ್ಸಿನ ಮನದಾಳದಲ್ಲಿ ಉಳಿಯುತ್ತವೆ ಮತ್ತು ಓರೆಗಾಮಿ ಕಲೆಯು ಮಕ್ಕಳನ್ನು ಕ್ರಿಯಾಶೀಲರನ್ನಾಗಿ ಮಾಡುತ್ತವೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ಪಾರಿ ಹೇಳಿದರು.

ಅವರು ಸೋಮವಾರ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರಾಧಿಕಾರಿಗಳ ಕಾರ್ಯಾಲಯ ಹಳಿಯಾಳ ಹಾಗೂ ವಿಆರ್‌ಡಿಎಂ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜರ ಸಂಚಾರಿ ವಸ್ತು ಸಂಗ್ರಹಾಲಯದ ವಿಶೇಷ ವಾಹನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದ‌ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿಆರ್‌ಡಿಎಂ ಟ್ರಸ್ಟ್ ನ ಆಡಳಿತಾಧಿಕಾರಿ ಪ್ರಕಾಶ್.ಎಲ್.ಪ್ರಭು ಅವರು ವಿದ್ಯಾರ್ಥಿಗಳನ್ನು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯರನ್ನಾಗಿಸುವ ಮೂಲಕ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ ಹೀಗೆ ಇನ್ನಿತರ ಚಟುವಟಿಕೆಗಳ ಕಡೆಯೂ ಅವರಲ್ಲಿ ಆಸಕ್ತಿ ತುಂಬುವಂತಹ ಕಾರ್ಯವನ್ನು ಮಾಡಿದಾಗ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸದೃಢರಾಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿ ಪರಶುರಾಮ ಗಸ್ತೆ, ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ, ಶಾಲಾ ಶಿಕ್ಷಣ ಇಲಾಖೆಯ ಶಿರಸಿಯ ಉಪನಿರ್ದೇಶಕರ ಕಾರ್ಯಾಲಯದ ವಿಷಯ ಪರೀಕ್ಷಕರಾದ ಎಂ.ಕೆ‌. ಮೊಗೇರ್, ಗೋಪಾಲ್ ಹೆಗಡೆ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯ ನಿರ್ದೇಶಕರಾದ ಪ್ರಶಾಂತ್ ಬಡ್ಡಿ, ಹಳಿಯಾಳದ ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

300x250 AD

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜರ ಸಂಚಾರಿ ವಸ್ತು ಸಂಗ್ರಹಾಲಯದ ಒರೆಗಾಮಿ ವಿಶೇಷ ವಾಹನದಲ್ಲಿ ವಿವಿಧ ಒರೆಗಾಮಿಯ ಆಕೃತಿಗಳು, ಜೊತೆಗೆ ಮಕ್ಕಳಿಗಾಗಿ ಒರೆಗಾಮಿಯ ವಿವಿಧ ಕಲಾಕೃತಿಗಳನ್ನು ಮಕ್ಕಳಿಂದಲೇ ಮಾಡಿಸಲಾಯಿತು.

ಸಾಂಸ್ಕೃತಿಕ ಮಂತ್ರಾಲಯದ ಸಿಸಿಆರ್ಟಿಯ ಜಿಲ್ಲಾ ಸಂಚಾಲಕ ಸಿದ್ದಪ್ಪ ಬಿರಾದರ್ ಸ್ವಾಗತಿಸಿ, ವಂದಿಸಿದರು. ತಾಲೂಕಿನ ವಿವಿಧ ಶಾಲೆಯ 1,500ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾರ್ಯಾಗಾರದಲ್ಲಿ ಭಾಗವಹಿಸಿ ಸಂಚಾರಿ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿ ಸಂತಸಪಟ್ಟರು.

Share This
300x250 AD
300x250 AD
300x250 AD
Back to top