ಶಿರಸಿ: ಇಲ್ಲಿನ ಡ್ರೀಮ್ ರಿಕ್ರಿಯೇಷನ್ ಸಂಸ್ಥೆ ದಿನಾಂಕ ಜೂನ್ 07 ರಂದು ತನ್ನ ಎರಡನೇ ವಾರ್ಷಿಕೋತ್ಸವವನ್ನು ಅತೀ ವಿಜೃಭಣೆಯಿಂದ ಆಚರಿಸಿತು. ಇದರ ಅಂಗವಾಗಿ ದೇವತಾ ಸಮಾರಾಧನೆ ಹಾಗೂ ಯಕ್ಷಗಾನ ತಾಳಮದ್ದಳೆ ಅಭೂತ ಯಶಸ್ವಿಯಾಯಿತು.
ಡ್ರೀಮ್ ರಿಕ್ರಿಯೇಷನ್ ಸಂಸ್ಥೆ ಸಮಾರಾಧನೆ ಹಾಗೂ ತಾಳಮದ್ದಳೆಗಳು ಸಂಘಟನೆ ಮಾಡಿ ಎಲ್ಲರಿಗೂ ಮಾದರಿಯಾಯಿತು. ಅಂದು ಸಂಜೆ ನಡೆದ ಶರಸೇತು ಬಂಧ ಎಂಬ ಪೌರಾಣಿಕ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಸರ್ವೇಶ್ವರ ಹೆಗಡೆ ಮೂರೂರು ಹಾಗೂ ಎಂ.ಪಿ. ಹೆಗಡೆ ಉಳ್ಳಾಲಗದ್ದೆ ಸುಶ್ರಾವ್ಯವಾಗಿ ಹಾಡಿದರು. ಮದ್ದಳೆಯಲ್ಲಿ ಶಂಕರ ಭಾಗ್ವತ್ ಸಹಕರಿಸಿದರು.
ಅದೇ ರೀತಿ, ಮುಮ್ಮೇಳದಲ್ಲಿ ಹನುಮಂತನಾಗಿ ಪವನ ಕಿರಣಕೆರೆ ಅವರು ಅದ್ಬುತವಾಗಿ ಪಾತ್ರ ಚಿತ್ರಣ ಮಾಡಿದರು. ಅರ್ಜುನನಾಗಿ ಮಂಜುನಾಥ ಗೊರಮನೆ ಜನರ ಪ್ರೀತಿಗೆ ಪಾತ್ರರಾದರು. ಉದಯೋನ್ಮುಖ ಅರ್ಥಧಾರಿ ಆನಂದ ಹೆಗಡೆ ಶೀಗೆಹಳ್ಳಿ ಬ್ರಾಹ್ಮಣ ಹಾಗೂ ರಾಮರೂಪ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಎಲ್ಲಾ ಪದಾಧಿಕಾರಿಗಳ ಜೊತೆಗೆ ಸುರೇಶ್ ಭಟ್ ಕಾರ್ಯಕ್ರಮವನ್ನು ಆಯೋಜಿಸಿದರು. ಕೊನೆಯಲ್ಲಿ ಸುರೇಶ್ ಭಟ್ ಅವರು ಕೃತಜ್ಞತೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಂಘದ ಹಿರಿ ಕಿರಿಯ ಸದಸ್ಯರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಒಟ್ಟಿನಲ್ಲಿ ಸಂಪೂರ್ಣ ಕಾರ್ಯಕ್ರಮ ಯಶಸ್ವಿಯಾಯಿತು.