ಯಲ್ಲಾಪುರ: ಎಸ್ಎಸ್ಎಲ್‌ಸಿ ಮರುಮೌಲ್ಯಮಾಪನದಲ್ಲಿ ವಿಶ್ವದರ್ಶನ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳ ಅಂಕ ಹೆಚ್ಚಳವಾಗಿದ್ದು ಇಬ್ಬರು ವಿದ್ಯಾರ್ಥಿಗಳು ಸ್ಟೇಟ್ ರ‌್ಯಾಂಕ್ ಪಡೆದಿದ್ದು, ನಾಲ್ಕು ವಿದ್ಯಾರ್ಥಿಗಳು ತಾಲೂಕು ಮಟ್ಟದ ಟಾಪ್ ಟೆನ್ ರ‌್ಯಂಕಿಂಗ್ ನಲ್ಲಿ ಸ್ಥಾನ ಪಡೆದಿದ್ದಾರೆ.
ಕುಮಾರಿ ಪ್ರಣತಿ ವಿ.ಮೆಣಸುಮನೆ 620 ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ಸ್ಥಾನ,ತಾಲೂಕಿಗೆ ಎರಡನೇಸ್ಥಾನವನ್ನು ಕಾಯ್ದುಕೊಂಡಿದ್ದು,ಶಾಲೆಗೆ ಪ್ರಥಮ ಸ್ಥಾನ ಪಡೆದರೆ, ಮೊದಲು 615 ಅಂಕಗಳಿಸಿದ್ದ ಕುಮಾರಿ ಸಿಂಚನ ಎಸ್.ಭಟ್ಟ ಮಾರುಮೌಲ್ಯ ಮಾಪನದಲ್ಲಿ 618 ಅಂಕಗಳೊಂದಿಗೆ ರಾಜ್ಯಕ್ಕೆ ಎಂಟನೇ ಸ್ಥಾನ,ತಾಲೂಕಿಗೆ ಮೂರನೇ ಸ್ಥಾನ,ಶಾಲೆಗೆ ಎರಡನೇ ಸ್ಥಾನ ಪಡೆದರೆ,ಮೊದಲು 609 ಅಂಕ ಗಳಿಸಿದ್ದ ಕುಮಾರ ತೇಜಸ್ ಎಸ್. ಹೆಗಡೆ ಈಗ 613 ಅಂಕಗಳೊಂದಿಗೆ ತಾಲೂಕಿಗೆ ಆರನೇ ಸ್ಥಾನ ಶಾಲೆಗೆ ಮೂರನೇ ಸ್ಥಾನ ಹಾಗೂ ಮೊದಲು 601ಅಂಕ ಗಳಿಸಿದ್ದ ಕುಮಾರಿ ಅನುಜ್ಞ ಎನ್.ಗಾಂವ್ಕರ್ 609 ಅಂಕಗಳಿಸುವುದರೊಂದಿಗೆ ತಾಲೂಕಿನ ರ‌್ಯಾಂಕ್ ನಲ್ಲಿ ಏಳನೇ ಸ್ಥಾನಕ್ಕೆ ಭಡ್ತಿ ಹೊಂದಿದ್ದು ಶಾಲೆಗೆ ನಾಲ್ಕನೇ ಸ್ಥಾನ ಪಡೆದಿರುತ್ತಾಳೆ. ವಿದ್ಯಾರ್ಥಿಗಳ ಸಾಧನೆಗೆ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷರು,ಕಾರ್ಯದರ್ಶಿಗಳು,ವ್ಯವಸ್ಥಾಪಕರು,ಮುಖ್ಯ ಶಿಕ್ಷಕರು,ಶಿಕ್ಷಕವೃಂದ ಸಂತಸ ವ್ಯಕ್ತಪಡಿಸಿ ಶುಭಕೋರಿದ್ದಾರೆ.