Slide
Slide
Slide
previous arrow
next arrow

ನೋವಿಲ್ಲದ ಕ್ಷಣಕ್ಕೆ ಕಾಯುತ್ತಿದ್ದರೆ, ಬದುಕು ಅಂತ್ಯ: ನೇಮಿಚಂದ್ರ 

300x250 AD

 ಶಿರಸಿ: ನೋವಿಲ್ಲದ ಕ್ಷಣಕ್ಕೆ ಕಾಯುತ್ತಾ ಕುಳಿತರೆ ಬದುಕು ಮುಗಿದು ಹೋಗುತ್ತದೆ ಪ್ರತಿಭಾವಂತ, ಜನಪ್ರಿಯ ಲೇಖಕಿ ನೇಮಚಂದ್ರ ಹೇಳಿದರು.

 ಅವರು  ಬೆಂಗಳೂರಿನ ವಿ.ಪ್ರ.ನಿ.ನಿ, ಲೆಕ್ಕಾಧಿಕಾರಿಗಳ ಸಂಘದ ಆಯೋಜನೆಯಲ್ಲಿ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್‌ನಲ್ಲಿ ಬಂಗಾರದ ಪದಕ , ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದ ಉಕ ಜಿಲ್ಲೆಯ ಸಿದ್ದಾಪುರ ಮೂಲದ ದೀಪಾ ಅಜಯ್ ಅವರನ್ನು ಸನ್ಮಾನಿಸಿದ ಪ್ರತಿಭಾವಂತ, ಜನಪ್ರಿಯ ಲೇಖಕಿ ನೇಮಿಚಂದ್ರ ಬದುಕು ಹೋರಾಟವಾದಾಗ ಹೋರಾಡಿ ಬದುಕಿದ ಅಮ್ಮಂದಿರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ನೋವಿನೊಡನೆ ಬದುಕಿ ಸಾಧನೆ ಮಾಡಿದ  ದೀಪಾ ಮಲ್ಲಿಕ್, ಹರಪ್ರೀತ್ ಅಹ್ಲುವಾಲಿಯಾ ಅವರ ಕುರಿತು ವಿಸ್ತಾರವಾಗಿ ಮಾತನಾಡಿ, ಅವರಂತೆ ದೀಪಾ ಅಜಯ್, ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು, ಉದ್ಯೋಗ ಮಾಡುತ್ತ, ಇಬ್ಬರು ವಿಶೇಷ ಚೇತನದ  ಮಕ್ಕಳನ್ನು ಸಲಹಿ ಸಂಸಾರ ನಡೆಸಿ ನಂತರ ಧೃತಿಗೆಡದೆ ಪವರ್ ಲಿಫ್ಟಿಂಗ್‌ನಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡು, ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಹಲವು ಬಂಗಾರದ ಪದಕ ಪಡೆದುದಲ್ಲದೇ, ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿರುವುದು ಅಸಾಮಾನ್ಯ ಸಂಗತಿ ಎಂದು ಹೇಳಿ, ಕೊಂಡಾಡಿ ಅವರನ್ನು ಸನ್ಮಾನಿಸುವಂತಹ ಅವಕಾಶ ನನಗೆ ದೊರೆತಿರುವದು ಸುದೈವ ಎಂದು ಹೇಳಿದರು. 

ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಲೇಖಕಿ, ಕಲಾವಿದೆ, ವೈದ್ಯೆ ಡಾ.ಕೆ. ಎಸ್. ಪವಿತ್ರ ಮನಸ್ಸನ್ನು ಮಗು ಎಂದು ಭಾವಿಸಿ, ಅದಕ್ಕೆ ಸೃಜನಶೀಲ ಬುದ್ಧಿ ಹೇಳಲು ಸಾಧ್ಯವಿದೆ ಎಂದು ಹೇಳಿ, ಹೋರಾಡಿ ಬದುಕಿದ ಸಾರ್ಥಕ ಅಮ್ಮಂದಿರ ಸಾಹಸಕ್ಕೆ ಪೂರಕವಾದ ‘ಅಮ್ಮನಾಗುವುದೆಂದರೆ’ ವಿಶೇಷ ಪರಿಕಲ್ಪನೆಯ ಹಾಗೂ ಇತರ ನೃತ್ಯ ಪ್ರದರ್ಶನ  ನೀಡಿದರು. 

ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಪತ್ರಕರ್ತ,  ಅಂಕಣಕಾರ, ಲೇಖಕ ನಾಗೇಶ ಹೆಗಡೆ ಮಾತನಾಡಿ,ಇಲ್ಲಿ ಸೇರಿರುವ ಎಲ್ಲರೂ ಸತತ ಪರಿಶ್ರಮ, ಸಾಧನೆಯಿಂದ ಪ್ರಸಿದ್ಧರೇ ಎಂದು ಹೇಳಿ, ಇಂತಹ ಕಾರ್ಯಕ್ರಮ ಆಯೋಸುತ್ತಿರುವ ಸಂಘದ ಕಾರ್ಯವನ್ನು ಶ್ಲಾಘಿಸಿದರು.

300x250 AD

 ಸನ್ಮಾನ ಸ್ವೀಕರಿಸಿದ ದೀಪಾ ಅಜಯ್ ಮಾತನಾಡಿ, ನನ್ನ ಸಾಧನೆ ನನ್ನ ಕುಟುಂಬ, ನಿಮ್ಮೆಲ್ಲರ ಹಾರೈಕೆಯ ಫಲ ಎಂದು ನುಡಿದು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. 

ಲೆಕ್ಕಾಧಿಕಾರಿ ಭಾಗ್ಯ ಎ. ಅತಿಥಿಗಳನ್ನು ಪರಿಚಯಿಸಿದರೆ, ಬಸವಂತಿ ಕೋಟೂರ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. 

ಈ ಸಂದರ್ಭದಲ್ಲಿ  ಅಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ರಾಜಾರಾಮ, ಭೂಮಿ ಪಬ್ಲಿಕೇಶನ್‌ನ ವಿಶಾಲಾಕ್ಷಿ ಹೆಗಡೆ, ಸಂಘದ ಸದಸ್ಯರಾದ ಉಲಿಗೇ ಸ್ವಾಮಿ, ಗೋಪಾಲ, ನಿತ್ಯಾನಂದಪ್ಪ, ರಾಘವೇಂದ್ರ ರಾವ್, ಗೌರಿ ಪಂಡಿತ, ಗೀತಾ ಸಭಾಹಿತ,ಶ್ರೀವಾಣಿ,ಡಾ.ಕಲ್ಪನಾ, ಅಂಬುಜಾಕ್ಷಿ, ಶ್ರೀದೇವಿ ಸಾಲಿಮಠ,ಬಸವರಾಜ ಹಂದ್ರಾಳ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top