ಶಿರಸಿ: ಸಂಪ್ರದಾಯ ಶಿರಸಿ, ಪಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ ಹಾಗೂ ನಾದಾವಧಾನ ಕುಂದಾಪುರ ಅವರ ಸಹಯೋಗದಲ್ಲಿ “ಹಳೆಬೇರು ಹೊಸ ಚಿಗುರು, ಮಟ್ಟು ತಿಟ್ಟಿನ ಮರುಹುಟ್ಟು” ಎಂಬ ಕಲಾ ಕಾರ್ಯಕ್ರಮವನ್ನು ಜೂ.9ರಂದು ಸಂಜೆ 4 ಗಂಟೆಗೆ ನಗರದ ನೆಮ್ಮದಿ ಆವರಣದ ರಂಗಧಾಮದಲ್ಲಿ ಆಯೋಜಿಸಲಾಗಿದೆ.
ಯಕ್ಷ ಚಿಂತಕ ಅಜಿತ ಕಾರಂತ, ವಿಶ್ರಾಂತ ಪ್ರಾಚಾರ್ಯ ಡಾ. ಜಿ. ಎ.ಹೆಗಡೆ ಸೋಂದಾ, ನಿತ್ಯಾನಂದ ಹೆಗಡೆ ಮೂರೂರು, ಚಿಂತಕ ವಿ.ಪಿ. ಹೆಗಡೆ ವೈಶಾಲಿ ಪಾಲ್ಗೊಳ್ಳುತ್ತಿದ್ದು, ಇದೇ ವೇಳೆ ಯಕ್ಷಗಾನ ಹಿರಿಯ ಭಾಗವತರಾದ ಕಪ್ಪೆಕೆರೆ ಸುಬ್ರಾಯ ಭಾಗವತರು, ಗೋಡೆ ನಾರಾಯಣ ಹೆಗಡೆ ಅವರನ್ನು ಸನ್ಮಾನಿಸಲಾಗುತ್ತಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ವಹಿಸಲಿದ್ದಾರೆ. ಬಳಿಕ ಶ್ರೀ ಕೃಷ್ಣ ಸಂಧಾನ ಯಕ್ಷಗಾನ ನಡೆಯಲಿದೆ.