Slide
Slide
Slide
previous arrow
next arrow

ಶಟಲ್ ಬ್ಯಾಡ್ಮಿಂಟನ್: ಅಗ್ರಗಣ್ಯರಾದ ಲಯನ್ಸ್ ಶಾಲಾ ವಿದ್ಯಾರ್ಥಿಗಳು

300x250 AD

ಶಿರಸಿ: ಇತ್ತೀಚೆಗೆ ಅರಣ್ಯ ಭವನದಲ್ಲಿ ಇನ್ಸ್‌ಪೈರ್ ಬ್ಯಾಡ್ಮಿಂಟನ್ ಅರೇನಾ ಶಿರಸಿ ವತಿಯಿಂದ ನಡೆಸಿದ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಲಯನ್ಸ್ ಶಾಲಾ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.

ಎಂಟನೇ ತರಗತಿಯ ವಿದ್ಯಾರ್ಥಿನಿ ತ್ವಿಷಾ ಹೆಗಡೆ 15 ವರ್ಷ ವಯೋಮಿತಿ ಒಳಗಿನ ಹೆಣ್ಣು ಮಕ್ಕಳ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಹಾಗೂ 17 ವರುಷ ವಯೋಮಿತಿಯೊಳಗಿನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಉತ್ತಮ ಆಟಗಾರ್ತಿ ಎಂದೆನಿಸಿಕೊಂಡಿದ್ದಾಳೆ. 5ನೇ ತರಗತಿಯ ವಿದ್ಯಾರ್ಥಿ ದತ್ತಾತ್ರೇಯ ಪೋತದಾರ 11ವರ್ಷ ವಯೋಮಿತಿಯೊಳಗಿನ ಗಂಡು ಮಕ್ಕಳ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಗುರು ಹಿರಿಯರ ಹಾಗೂ ಲಯನ್ಸ್ ಶಾಲೆಯ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಶುಭ ಹಾರೈಸಿದೆ.

300x250 AD
Share This
300x250 AD
300x250 AD
300x250 AD
Back to top