Slide
Slide
Slide
previous arrow
next arrow

ಉತ್ತರ ಕನ್ನಡ ಜಿಲ್ಲೆ ಬಿಜೆಪಿಯ ಗಟ್ಟಿನೆಲ: ಹರಿಪ್ರಕಾಶ ಕೋಣೆಮನೆ

300x250 AD

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆ ಬಿಜೆಪಿಯ ಗಟ್ಟಿನೆಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಮತದಾರರು ಅತ್ಯಂತ ಗರಿಷ್ಠ ಪ್ರಮಾಣದ ಅಂತರದಲ್ಲಿ ಗೆಲ್ಲಿಸಿರುವುದು ಗಮನಾರ್ಹ ಸಂಗತಿ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್‌ ಕೋಣೆಮನೆ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ, ಯಲ್ಲಾಪುರ-ಮುಂಡಗೋಡದಲ್ಲಿ ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ಮೊದಲು ಬಹಳ ಚರ್ಚೆಗೆ ಗ್ರಾಸವಾಗಿತ್ತು. ಕಾರ್ಯಕರ್ತರ ಪರಿಶ್ರಮ ಮತ್ತು ಪಕ್ಷದ ನೇತೃತ್ವ, ಸಂಘಟನೆಗಳಿಂದ ಬಿಜೆಪಿಯ ವೈಚಾರಿಕತೆ ಮತದಾರರನ್ನು ತಲುಪಿದೆ. ಉತ್ತರ ಕನ್ನಡ ಜಿಲ್ಲೆಯ ಮತದಾರರು ಪ್ರಬುದ್ಧರಾಗಿ ಮತ ಚಲಾವಣೆ ಮಾಡಿದ್ದಾರೆ ಎಂದು ಹೇಳಿದರು.

ದೇಶದಲ್ಲಿ 63 ಕೋಟಿ ಜನ ಮತದಾರರಿಂದ ಮತ ಚಲಾವಣೆಯಾಗಿದೆ. 76 ದಿನ ಪ್ರಚಾರ ಮಾಡಲಾಗಿದೆ. ವಿಶ್ವವೇ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಚುನಾವಣೆ ಮುಕ್ತಾಯವಾಗಿ ಫಲಿತಾಂಶ ಬಂದಿದೆ. ದೇಶ ಮತ್ತು ಜಗತ್ತು ಗಮನ ಸೆಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಆಗುವ ಕಡೆಗೆ ಹೆಜ್ಜೆ ಇಡುತ್ತಿರುವುದು ಹೆಮ್ಮೆಯ ಸಂಗತಿ. ಈ ಬಾರಿ ಚುನಾವಣೆಯಲ್ಲಿ ಇವಿಎಂ ಮೇಲೆ ಆರೋಪ ಮಾಡಿಲ್ಲ, ಮೋದಿಯವರು ಗೆದ್ದರು, ಇವಿಎಂ ಕೂಡ ಗೆದ್ದಿತು. ಒಟ್ಟಾರೆ ಪ್ರಜಾಪ್ರಭುತ್ವ ವ್ಯವಸ್ಥೆ ಗೆದ್ದಿದೆ. ಮೋದಿ ಮತ್ತೆ ಪ್ರಧಾನಮಂತ್ರಿ ಆಗುತ್ತಾರೆ, ಸ್ಥಿರ ಸರ್ಕಾರ ಕೊಡಲಿದ್ದಾರೆ ಎಂದು ಕೋಣೆಮನೆ ಹೇಳಿದರು.

ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಯಲ್ಲಾಪುರ ಹಾಗೂ ಪ್ರತಿ ಗ್ರಾಮ ಪಂಚಾಯಿತಿ ಸೇರಿದಂತೆ ಶೇಕಡಾ 90% ಬೂತ್‌ಗಳಲ್ಲಿ ಲೀಡ್‌ ಗಳಿಸಿದ್ದೇವೆ. ಪಕ್ಷ ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ಸದೃಢವಾಗಿ ವಿಶ್ವಾಸದೊಂದಿಗೆ ಚುನಾವಣಾ ಎದುರಿಸಿದ್ದೇವೆ ಎಂದು ಹೇಳಿದರು.

300x250 AD

ಚುನಾವಣಾ ಸಂದರ್ಭದಲ್ಲಿ ನಮ್ಮ ಶಾಸಕರು ಬಿಜೆಪಿ ಪರವಾಗಿ ನಿಲ್ಲದೇ ಇರುವಂತಹ ಸಂದರ್ಭದಲ್ಲಿ ಕಾರ್ಯಕರ್ತರ ನೇತೃತ್ವವೇ ನಮ್ಮ ನಾಯಕತ್ವವೆಂದು ನಂಬಿ, ಚುನಾವಣೆ ಎದುರಿಸಿ, ಯಲ್ಲಾಪುರ ತಾಲೂಕಿನಲ್ಲಿ 14,708 ಮತಗಳನ್ನು ಪಡೆದಿದ್ದೇವೆ. ವಿಶ್ವಾಸದೊಂದಿಗೆ ಪಕ್ಷವನ್ನು ಸಂಘಟಿಸಿದ್ದೇವೆ ಮತ್ತು ಮುಂದೆಯೂ ಸಂಘಟಿಸುತ್ತೇವೆ. ಈ ಗೆಲುವಿಗೆ ಕಾರಣೀಕರ್ತರಾದ ಪಕ್ಷದ ಕಾರ್ಯಕರ್ತರಿಗೆ, ಮತದಾರರಿಗೆ ಹಾಗೂ ನಮಗೆ ಸಹಕಾರ ನೀಡಿದ ಮಾಧ್ಯಮಕ್ಕೆ ಕೃತಜ್ಞತೆಗಳು ಎಂದರು.

ಬಿಜೆಪಿ ಪಕ್ಷದಲ್ಲಿದ್ದೂ, ಸೋತ ಸಂಸದರಾದ ಡಿ.ಕೆ ಸುರೇಶ್‌ ಅವರನ್ನು ಸಮಾಧಾನ ಮಾಡಲು ಹೋದ ನಮ್ಮ ಶಾಸಕರ ನಡೆಯನ್ನು ಯಲ್ಲಾಪುರ ಮಂಡಲದಿಂದ ಖಂಡಿಸುತ್ತೇವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ವಿವಿಧ ಘಟಕಗಳ ಪ್ರಮುಖರಾದ ಗಣಪತಿ ಮಾನಿಗದ್ದೆ, ಗಣಪತಿ ಬೋಳುಗುಡ್ಡೆ, ಸೋಮೇಶ್ವರ ನಾಯ್ಕ, ಪ್ರದೀಪ ಯಲ್ಲಾಪುರಕರ, ವಿಘ್ನೇಶ ಭಟ್ಟ ಮಾಳಕೊಪ್ಪ, ರವಿ ದೇವಡಿಗ, ಬಜ್ಜು ಪಿಂಗಳೆ ಇದ್ದರು

Share This
300x250 AD
300x250 AD
300x250 AD
Back to top