Slide
Slide
Slide
previous arrow
next arrow

ಬ್ಯಾಂಕ್ ಆಫ್ ಇಂಡಿಯಾ ಹೊಸ ಠೇವಣಿ ಪ್ರಾರಂಭ

300x250 AD

ಶಿರಸಿ: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್‌ ಇಂಡಿಯಾ ತನ್ನ ಗ್ರಾಹಕರಿಗೆ ಅತ್ಯುನ್ನತ ಠೇವಣಿ ದರಗಳನ್ಮು ಪರಿಚಯಿಸುತ್ತಿದ್ದು, 666 ದಿನಗಳ ಫಿಕ್ಸೆಡ್ ಡೆಪಾಸಿಟ್ ಅನ್ನು ಪ್ರಾರಂಭಿಸಿದೆ. ಈ ಯೋಜನೆ (80 ವರ್ಷ ಮೇಲ್ಪಟ್ಟು) ಸೂಪರ್ ಹಿರಿಯ ನಾಗರೀಕರಿಗೆ ಶೇ. 7.95ರ ವರೆಗೆ ಬಡ್ಡಿ ದರವಿದ್ದು, 666 ದಿನಗಳವರೆಗೆ 2 ಕೋಟಿ ರೂ. ಗಿಂತ ಕಡಿಮೆ ಠೇವಣಿ ಮೊತ್ತಕ್ಕೆ ಈ ಬಡ್ಡಿ ದೊರೆಯುತ್ತದೆ. ಗ್ರಾಹಕರು ಮತ್ತು ಸಾರ್ವಜನಿಕರು 666 ದಿನಗಳ ಫಿಕ್ಸೆಡ್ ಡೆಪಾಸಿಟ್ ಅನ್ನು ತೆರೆಯುವ ಮೂಲಕ ಈ ಹೂಡಿಕೆ ಅವಕಾಶದ ಲಾಭ ಪಡೆಯಬಹುದು. ಇದು ಸ್ಥಿರ ಠೇವಣಿಗಳ ಮೇಲೆ ಅತ್ಯಧಿಕ ಲಾಭ ನೀಡುತ್ತದೆ. ಈ ಯೋಜನೆ ಹಿರಿಯ ನಾಗರಿಕರಿಗೆ (60 ರಿಂದ 79 ವರ್ಷದೊಳಗೆ) ಶೇ. 7.80 ಬಡ್ಡಿ ಇದೆ.

ಈ ಯೋಜನೆ ಜೂನ್ 1ರಿಂದ ಜಾರಿಗೆ ಬಂದಿದ್ದು, ಶಿರಸಿಯ ಬ್ಯಾಂಕ್ ಆಫ್ ಇಂಡಿಯಾ ಟಿ.ಎಸ್.ಎಸ್ ರೋಡ್ ಶಾಖೆಗೆ ಭೇಟಿ ನೀಡಬಹುದು ಎಂದು ಶಿರಸಿ ಶಾಖೆಯ ವ್ಯವಸ್ಥಾಪಕರಾದ ಸಂಪತ್ ಕುಮಾರ ಗಾಣಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top