ಶಿರಸಿ: ಶ್ರೀನಿಕೇತನ ಶಾಲೆಯ ಪ್ರಸಕ್ತ ಶೈಕ್ಷಣಿಕ ವರ್ಷ 2024-25ರ ಪ್ರಾರಂಭದಲ್ಲಿ ಭಾರತ ಸ್ಕೌಟ್-ಗೈಡ್ಸ್ ಘಟಕದ ಆಶ್ರಯದಲ್ಲಿ ಬೇಸಿಗೆ ಶಿಬಿರವನ್ನು ಜೂ.3ರಂದು ಏರ್ಪಡಿಸಲಾಗಿತ್ತು. ದೀಪ ಪ್ರಜ್ವಲನ ಹಾಗೂ ಮಕ್ಕಳ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಸಭಾ ಕಾರ್ಯಕ್ರಮಕ್ಕೆ ಭಾರತ ಸ್ಕೌಟ್-ಗೈಡ್ಸ್, ಶಿರಸಿಯ ಜಿಲ್ಲಾ ಮುಖ್ಯ ಆಯುಕ್ತರಾದ ವಿ.ಎಚ್.ಭಟ್ಕಳ ಹಾಗೂ ಸಹಾಯಕ ರಾಜ್ಯ ಸಂಘಟನಾ ಆಯುಕ್ತರಾದ ವೀರೇಶ ಮಾದರ್ ಅತಿಥಿಗಳಾಗಿ ಆಗಮಿಸಿದ್ದರು. ಶಾಲೆಯ ಉಪಪ್ರಾಂಶುಪಾಲರಾದ ಶ್ರೀಮತಿ ವಸುಧಾ ಹೆಗಡೆ ಉಪಸ್ಥಿತರಿದ್ದರು.
ಗಣ್ಯರು ಮಕ್ಕಳನ್ನುದ್ದೇಶಿಸಿ ಮಾತನಾಡಿ ಶಿಸ್ತು, ದೇಶಪ್ರೇಮ, ಸಹಾಯ ಮನೋಭಾವ ಇನ್ನಿತರ ಗುಣಗಳನ್ನು ತಮ್ಮಲ್ಲಿ ಬೆಳೆಸಿಕೊಂಡು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕಾಗಿ ಮಕ್ಕಳಲ್ಲಿ ಅರಿವು ಮೂಡಿಸಿದರು. ಅನಂತರ ವಿದ್ಯಾರ್ಥಿಗಳಿಗೆ ಬಿಸ್ಕೆಟ್ ಮತ್ತು ಜ್ಯೂಸ್ ವಿತರಿಸಲಾಯಿತು. ಕಾರ್ಯಕ್ರಮವನ್ನು ಗೈಡ್ಸ್ ನಾಯಕಿ/ಸಹಶಿಕ್ಷಕಿ ಶ್ರೀಮತಿ ದೀಪಾ ಮಡಗಾಂವಕರ್ ನಿರೂಪಿಸಿದರು. ಸ್ಕೌಟ್ ಮಾಸ್ಟರ್ ಆಗಿ ನೂತನವಾಗಿ ನಿಯುಕ್ತರಾದ ಶಾಲೆಯ ದೈಹಿಕ ಶಿಕ್ಷಕರು ಬಸವರಾಜ ಹೊಸಮನಿ ಉಪಸ್ಥಿತರಿದ್ದರು.