Slide
Slide
Slide
previous arrow
next arrow

ಚಂದನ ಶಾಲೆಯಲ್ಲಿ ಸಂಭ್ರಮದ ಪ್ರಾರಂಭೋತ್ಸವ 

300x250 AD

ಶಿರಸಿ; ಇಲ್ಲಿನ ನರೇಬೈಲ್ ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-2025ನೇ ಶೈಕ್ಷಣಿಕ ವರ್ಷ ಆರಂಭಗೊಂಡಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳು ವಿದ್ಯಾಧಿದೇವತೆಯಾದ ಶಾರದಾ ದೇವಿಯನ್ನು  ಪೂಜಿಸಿ 2024-2025 ನೇ ಶೈಕ್ಷಣಿಕ ವರ್ಷ ಯಶಸ್ವಿಯಾಗಲಿ ಪ್ರಾರ್ಥಿಸಿಕೊಂಡರು.
ಶಾಲೆಯನ್ನು ಮತ್ತು ವರ್ಗ ಕೋಣೆಗಳನ್ನು ವಿವಿಧ ತಳಿರು ತೋರಣಗಳಿಂದ ಸಿಂಗರಿಸಿ, ಸಿಹಿ ಹಂಚುವುದರ ಮೂಲಕ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಶಿಕ್ಷಕರುಗಳು ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾದ ಸಿಂಧೂರ್ ಭಟ್ ವಿದ್ಯೆಯ ಮಹತ್ವವನ್ನು ವಿವರಿಸುತ್ತಾ ವಿದ್ಯಾರ್ಥಿ ಜೀವನದ ಪ್ರಾಮುಖ್ಯತೆಯನ್ನು ಮುಂದಿನ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರವನ್ನು ಮಕ್ಕಳಿಗೆ ತಿಳಿ ಹೇಳಿದರು.

300x250 AD
Share This
300x250 AD
300x250 AD
300x250 AD
Back to top