Slide
Slide
Slide
previous arrow
next arrow

ಕೃಷಿಯಲ್ಲಿ ಯಶಕಂಡ ಚಿನ್ಮಯ ಹೆಗಡೆಗೆ ಉದ್ಯಾನ ರತ್ನ ಪ್ರಶಸ್ತಿ

300x250 AD

ಗುಜರಾತಿನ ಕೃಷಿ ಯುನಿವರ್ಸಿಟಿಯಲ್ಲಿ ಪ್ರಶಸ್ತಿ ಪ್ರದಾನ | ಜಿಲ್ಲೆಯ ಕೃಷಿ ಹಿರಿಮೆಗೆ ಪ್ರಶಸ್ತಿಯ ಗರಿ

ಶಿರಸಿ: ಕೃಷಿಯಲ್ಲಿ ವಿವಿಧ ತಂತ್ರಜ್ಞಾನ ಬಳಸುವುದರ ಮೂಲಕ ಬಹುವಿಧದ ಬೆಳೆಗಳನ್ನು ಬೆಳೆಯುವುದು, ಜಮೀನಿನಲ್ಲಿ ಆಧುನಿಕ ಮತ್ತು ಸುಧಾರಿತ ನೀರಾವರಿ ವ್ಯವಸ್ಥೆ ಮಾಡಿ ಕೃಷಿಯಲ್ಲಿ ಯಶಸ್ಸು ಗಳಿಸಿರುವ ದೇಶದ 12 ಜನರಿಗೆ ದೆಹಲಿಯ ಲೇಟ್ ಅಮಿತ್ ಸಿಂಗ್ ಮೆಮೊರಿಯಲ್ ಫೌಂಡೇಶನ್ ಉದ್ಯಾನ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು, ಶಿರಸಿ ತಾಲೂಕಿನ ಅಗಸಾಲ ಬೊಮ್ನಳ್ಳಿಯ ಯುವ ಕೃಷಿಕ ಚಿನ್ಮಯ ದಿವಾಕರ ಹೆಗಡೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಗುಜರಾತ್ ನ ಜುನಾಗಡದಲ್ಲಿರುವ ಅಗ್ರಿಕಲ್ಚರ್ ಯೂನಿವರ್ಸಿಟಿಯಲ್ಲಿ ಇತ್ತಿಚೆಗೆ ನಡೆದ ಕಾರ್ಯಕ್ರಮದಲ್ಲಿ ಜುನಾಗಡ ಯುನಿವರ್ಸಿಟಿಯ ಉಪ ಕುಲಪತಿ, ಆಂದ್ರ ಪ್ರದೇಶದ ವೈಎಸ್ಆರ್ ಯುನಿವರ್ಸಿಟಿಯ ಉಪಕುಲಪತಿ, ಅಹಮದಾಬಾದ್ ಇಸ್ರೋ ನಿರ್ದೇಶಕರು, ಐಸಿಎಆರ್ ನಿರ್ದೇಶಕರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಆಯ್ದ 12 ಜನ ಕೃಷಿಕರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದೆ. ದೆಹಲಿಯ ಸಂಸ್ಥೆಗೆ ಶಿರಸಿಯ ಖ್ಯಾತ ಕೃಷಿ ಸಹಕಾರಿ ಸಂಸ್ಥೆಯಾದ ದಿ ಅಗ್ರಿಕಲ್ಚರಲ್ ಸರ್ವಿಸ್ & ಡೆವಲಪ್‌ಮೆಂಟ್‌ ಸೊಸೈಟಿಯು ಮುತುವರ್ಜಿ ವಹಿಸಿ, ಯುವ ಕೃಷಿಕ ಚಿನ್ಮಯ ಹೆಗಡೆ ಇವರ ಸುಧಾರಿತ ನೀರಾವರಿ ವ್ಯವಸ್ಥೆ ಮತ್ತು ಕೃಷಿ ಕುರಿತು ಮಾಹಿತಿ ಒದಗಿಸಿತ್ತು.

ಚಿನ್ಮಯ ಹೆಗಡೆ ಅವರ ಕೃಷಿ ಕೆಲಸದ ಕುರಿತು ಅನೇಕ ಹಿರಿಯ ಕೃಷಿಕರು, ಕೃಷಿ ವಿಜ್ಞಾನಿಗಳು, ಹಿರಿಯ ತೋಟಗಾರಿಕಾ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದು, ಕೃಷಿಯಲ್ಲಿ ಇವರ ಸಾಧನೆಯನ್ನು ಶ್ಲಾಘಿಸಿದ್ದಾರೆ. ಇವರ ತೋಟದಲ್ಲಿ ಅಡಿಕೆ, ಕಾಳುಮೆಣಸು, ಗಿಡ್ಡ ತೆಂಗು (ಎಳನೀರು), ನೇಂದ್ರ ಬಾಳೆ, ಏಲಕ್ಕಿ ಬಾಳೆ, ಪಪ್ಪಾಯಿ, ಬೆಣ್ಣೆ ಹಣ್ಣು, ಭತ್ತ ಹೀಗೆ ಮಿಶ್ರ ಕೃಷಿಗೆ ಆದ್ಯತೆ ನೀಡಿದ್ದಾರೆ.

300x250 AD

ಕೃಷಿಯೆಡೆಗಿನ ಸೆಳೆತ, ಮನೆಯವರ ಸಹಕಾರ ಸಾಧನೆಗೆ ಪ್ರೇರಣೆ

ಮೂಲತಃ ಕೃಷಿ ಕುಟುಂಬದಿಂದ ಬಂದಿರುವ ಚಿನ್ಮಯ ಹೆಗಡೆ ವಿದ್ಯಾಭ್ಯಾಸದ ನಂತರ ಉದ್ಯೋಗಕ್ಕಾಗಿ ಬೆಂಗಳೂರು ಸೇರಿದ್ದರು. ಆದರೆ ಸ್ವತಃ ಏನಾದರೂ ಮಾಡಬೇಕೆಂಬ ಹಂಬಲ, ಹಠ ಅವರನ್ನು ಮತ್ತೆ ಊರಿನೆಡೆಗೆ ಕರೆಸಿತ್ತು. ಹಿಂತಿರುಗಿ ಬಂದವರು ಸುತ್ತಮುತ್ತಲಿನ ಅನೇಕ ಕೃಷಿಕರ ತೋಟಗಳಿಗೆ ಭೇಟಿ ನೀಡಿ, ಇಲಾಖೆಗಳಿಂದ ಮಾಹಿತಿ ಪಡೆದು ನೇರವಾಗಿ ಕೃಷಿ ಸಮುದ್ರಕ್ಕೆ ಧುಮುಕಿಯೇ ಬಿಟ್ಟರು. ಆಮೇಲೆ ಹಿಂತಿರುಗಿ ನೋಡಿದ ಮಾತೇ ಇಲ್ಲ. ಕೃಷಿಯಲ್ಲಿ ಪ್ರಯೋಗ ಮಾಡುವ ಮೂಲಕ ಹೊಸತುಗಳಿಗೆ ನಾಂದಿಯಾದರು. ಆ ಮೂಲಕ ಕೃಷಿಯೆಂದರೆ ಮೂಗು ಮುರಿಯುವ ಜನರ ಮಧ್ಯ ವಿಭಿನ್ನರಾಗಿ, ಸಾಧಕ ವ್ಯಕ್ತಿಯಾಗಿ ಚಿನ್ಮಯ ಹೆಗಡೆ ನಿಲ್ಲುತ್ತಾರೆ. ಇವರ ಕೃಷಿಕೆ ಮನೆ ಮಂದಿನ ಸಹಕಾರವೇ ಪ್ರೇರಣೆ ಎನ್ನುತ್ತಾರೆ. ದಿವಾಕರ ಹೆಗಡೆ ಮತ್ತು ಮಮತಾ ದಂಪತಿಯ ಪುತ್ರನಾಗಿರುವ ಇವರಿಗೆ, ಓರ್ವ ಸಹೋದರನಿದ್ದಾನೆ. ಸಹೋದರ ಪವನ್ ಹೆಗಡೆ ವೃತ್ತಿಯಲ್ಲಿ ಸಿಎ ಆಗಿದ್ದರೂ, ಪ್ರವೃತ್ತಿಯಿಂದ ಕೃಷಿಕನಾಗಿ ಅಣ್ಣ ಚಿನ್ಮಯನ ಕೃಷಿ ಸಾಧನೆಗೆ ಸಹಕಾರಿಯಾಗಿದ್ದಾನೆ.

Share This
300x250 AD
300x250 AD
300x250 AD
Back to top