Slide
Slide
Slide
previous arrow
next arrow

ಯಾರಿಂದಲೂ ಕದಿಯಲು ಸಾಧ್ಯವಿಲ್ಲದ ‘ವಿದ್ಯೆ’ ಅತ್ಯಂತ ಶಕ್ತಿಯುತವಾದ್ದು: ಪ್ರವೀಣಕುಮಾರ್

300x250 AD

ಸಿದ್ದಾಪುರ: ವಿದ್ಯೆ ಎನ್ನುವುದು ಅತ್ಯಂತ ಶಕ್ತಿಯುತವಾದದ್ದು. ವಿದ್ಯೆ, ಜ್ಞಾನ,ಬುದ್ಧಿಗಿಂತ ಮಿಗಿಲಾದದ್ದೂ ಯಾವುದೂ ಇಲ್ಲ. ಅಂಥ ಉನ್ನತ ಆದರ್ಶವನ್ನು ವಿದ್ಯಾರ್ಥಿಗಳಿಗೆ ಒದಗಿಸುವಲ್ಲಿ ವಿದ್ಯಾಪೋಷಕ ಸಂಸ್ಥೆ ಕಾರ್ಯಚಟುವಟಿಕೆ ನಡೆಸುತ್ತಿರುವದು ಮಾದರಿ ಕಾರ್ಯ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣಕುಮಾರ ಬಸ್ರೂರು ಹೇಳಿದರು.

ಅವರು ಸ್ಥಳೀಯ ಶಂಕರಮಠದಲ್ಲಿ ವಿದ್ಯಾಪೋಷಕ ಸಂಸ್ಥೆ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಸತಿಸಹಿತ ಸೇತುಬಂಧ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ವೈಯುಕ್ತಿಕ ಮತ್ತು ವೃತ್ತಿಯಲ್ಲಿ ಶಿಸ್ತು ಅತಿ ಮುಖ್ಯ. ಯಾವುದೇ ಕ್ಷೇತ್ರದಲ್ಲಿ ಉನ್ನತಿ ಸಾಧಿಸುವದಕ್ಕೆ ಶಿಸ್ತು ಕಾಪಾಡಿಕೊಳ್ಳಬೇಕಿದೆ. ಜೀವನದ ಗುರಿಸಾಧಿಸಲು ತುಂಬಾ ಕಷ್ಟಪಡಬೇಕು. ದಿಢೀರ್ ಆಗಿ ಹಣ ಗಳಿಸುವ ಹುಚ್ಚು ಇಂದಿನ ಯುವಕರಲ್ಲಿ ಕಂಡುಬರುತ್ತಿದೆ.ನಮ್ಮ ಮಾದರಿ ವ್ಯಕ್ತಿಗಳು ಜೀವನದಲ್ಲಿ ಅರ್ಥಪೂರ್ಣ ಸಾಧನೆ ಮಾಡಿದವರು ಆಗಬೇಕು ಎಂದ ಅವರು ಸೋಲಿನಿಂದ ವಿಚಲಿತರಾಗಬೇಡಿ. ನಿಮಗೆ ಉತ್ತಮ ಅವಕಾಶ ಒದಗಿಸಿಕೊಟ್ಟ ವಿದ್ಯಾಪೋಷಕದ ಸಹಕಾರವನ್ನು ಪಡೆದು ಸಾಧನೆ ಮಾಡಿ ಮುಂದಿನ ದಿನದಲ್ಲಿ ಸಮಾಜಕ್ಕೆ ಒಳಿತು ಮಾಡಿ ಎಂದರು.
ಇನ್ನೊರ್ವ ಅತಿಥಿ ಸಂಪನ್ಮೂಲ ವ್ಯಕ್ತಿ ಶ್ರಿಶೈಲ ಯಡಹಳ್ಳಿ ಮಾತನಾಡಿ ಆದರ್ಶಗಳಿಲ್ಲದಿದ್ದರೆ ಸಮಾಜವೂ ಸೇರಿದಂತೆ ಯಾವುದೂ ಇರೋದಿಲ್ಲ. ಆದರ್ಶ ಮತ್ತು ಸೇವೆ ಅತ್ಯುತ್ತಮ ಮೌಲ್ಯಗಳು. ಅದನ್ನು ವಿದ್ಯಾಪೋಷಕ ಸಂಸ್ಥೆ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ,ಸಹಕಾರ ಒದಗಿಸುತ್ತಿದೆ ಎಂದರು.

300x250 AD

ಇನ್ನೊರ್ವ ಮುಖ್ಯ ಅತಿಥಿ ಪತ್ರಕರ್ತ ಗಂಗಾಧರ ಕೊಳಗಿ ಮಾತನಾಡಿ ತತ್ಪರತೆ,ಗ್ರಹಿಕೆ ಪ್ರತಿಯೊಬ್ಬರಿಗೂ ಮುಖ್ಯ. ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಶಂಕರಮಠದ ಧರ್ಮಾಧಿಕಾರಿ ದೊಡ್ಮನೆ ವಿಜಯ ಹೆಗಡೆ ಮಾತನಾಡಿ ಪ್ರತಿಷ್ಠೆ ಮತ್ತು ಪ್ರಚಾರಕ್ಕೆ ವಿದ್ಯಾಪೋಷಕ ಸಂಸ್ಥೆ ಕೆಲಸ ಮಾಡುತ್ತಿಲ್ಲ.ಸಮಾಜಕ್ಕೆ ಒಳ್ಳೆಯದಾಗಲಿ ಎನ್ನುವ ಉದ್ದೇಶ ವಿದ್ಯಾಪೋಷಕದ್ದು ಎಂದರು.ಶಿಬಿರಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.
ಸರಸ್ವತಿ ಸಂಗಡಿಗರು ಪ್ರಾರ್ಥಿಸಿದರು. ಅಶ್ವಿನಿ, ಭಾಗ್ಯಶ್ರೀ ಸ್ವಾಗತಿಸಿದರು. ಶಿಬಿರದ ಯೋಜನಾ ವ್ಯವಸ್ಥಾಪಕ ಎ.ಎಮ್.ನಾಯ್ಕ ಪ್ರಾಸ್ತಾವಿಕ ಮಾತನಾಡಿ ವಿದ್ಯಾಪೋಷಕದ ಉದ್ದೇಶ,ಕಾರ್ಯಚಟುವಟಿಕೆ ವಿವರಿಸಿದರು.ಕಾರ್ತಿಕ, ಸೌಮ್ಯಾ ವಂದಿಸಿದರು. ವಿನಾಯಕ ಬಿ.ಮತ್ತು ಅಕ್ಷತಾ ಗಾಬಡೆ ನಿರೂಪಿಸಿದರು.

Share This
300x250 AD
300x250 AD
300x250 AD
Back to top