Slide
Slide
Slide
previous arrow
next arrow

ವಿಶ್ವದರ್ಶನದಲ್ಲಿ ನೂತನ ಶೈಕ್ಷಣಿಕ ವರ್ಷದ ಕಲಿಕಾ ಪ್ರಾರಂಭೋತ್ಸವ ಆಚರಣೆ

300x250 AD

ಯಲ್ಲಾಪುರ: ಇಲ್ಲಿನ ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ 2024- 25ರ ಶೈಕ್ಷಣಿಕ ವರ್ಷದ ತರಗತಿಗಳು ಮೇ.29ರಂದು ಆರಂಭಗೊಂಡಿದ್ದು ಸಂಸ್ಥೆಯ ‘ಶ್ರೀ ಶ್ರೀಮದ್ ಗಂಗಾಧರೇಂದ್ರ’ ಸಭಾ ಭವನದಲ್ಲಿ ಸುಂದರ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಭಾರತೀಯ ಅರಣ್ಯ ಸೇವಾ ಅಧಿಕಾರಿ (IFS) ಯಲ್ಲಾಪುರ ಡಿ.ಸಿ.ಎಫ್. ಹರ್ಷ ಭಾನು ದೀಪ ಪ್ರಜ್ವಲಿಸಿ, ಶ್ರೀ ಶಾರದಾದೇವಿ ಮತ್ತು ಭಾರತಾಂಬೆಯ ಭಾವಚಿತ್ರಗಳಿಗೆ ಪುಷ್ಪ ನಮನಗಳನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಇವರು ಮಕ್ಕಳಿಗೆ ‘ವಿದ್ಯಾ ದದಾತಿ ವಿನಯಂ’ ವಿದ್ಯೆಯು ವಿನಯವನ್ನು ಕೊಡುತ್ತದೆ, ಎಂದು ವಿದ್ಯಾಭ್ಯಾಸದ ಬಗ್ಗೆ ಮಾತನಾಡುತ್ತಾ, ನಮ್ಮ ಭೂಮಿಯ ತಾಪಮಾನ ಹೆಚ್ಚಾಗುವಿಕೆಗೆ ಕಾರಣವನ್ನೂ, ಪ್ಲಾಸ್ಟಿಕ್‌ನಿಂದ ಆಗುವ ಅನಾಹುತಗಳನ್ನೂ ವಿವರಿಸಿ, ಸುಂದರ ಸ್ವಚ್ಛ ಪರಿಸರವು ನಿರ್ಮಾಣವಾಗಬೇಕು. ಆ ಕುರಿತು ಮಕ್ಕಳಲ್ಲಿ ಜ್ಞಾನ ಮತ್ತು ಜಾಗೃತಿ ಇರಬೇಕು ಎಂದು ತಿಳುವಳಿಕೆ ನೀಡಿದರು. ಪಶ್ಚಿಮ ಘಟ್ಟಗಳ ಸಂಪನ್ಮೂಲ ಮತ್ತು ವೈವಿಧ್ಯತೆ ಉಳಿಯಬೇಕು ಅದಕ್ಕಾಗಿ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಹೇಳಿ. ಮಕ್ಕಳಿಗೆ ಶುಭ ಕೋರಿದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಮೂಹದ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ, ವಿಧ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಲು ಸೂಚಿಸುತ್ತಾ, ಯಾರೆಲ್ಲ ಮೊಬೈಲ್ ಬಳಕೆಯಿಂದ ದೂರವಿರುತ್ತಾರೋ ಅಂತವರಿಗೆ ಬಹುಮಾನಗಳನ್ನು ನೀಡುವ ಆಶಯವನ್ನು ವ್ಯಕ್ತಪಡಿಸಿದರು.
ವಿಶ್ವ ದರ್ಶನ ಕೇಂದ್ರೀಯ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಮಹಾದೇವಿ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುಷ್ಪಾ ಭಟ್ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಿ.ಇ.ಓ.ಆಗಿರುವ ಅಜಯ ಭಾರತೀಯ ಮತ್ತು ಪಿ.ಯು. ವಿಭಾಗದ ಪ್ರಾಂಶುಪಾಲರಾದ ಡಿ.ಕೆ. ಗಾಂವ್ಕಾರ್ ಉಪಸ್ಥಿತರಿದ್ದರು. ಕೇಂದ್ರೀಯ ಶಾಲೆಯ ಉಪ ಪ್ರಾಂಶುಪಾಲರಾದ ಶ್ರೀಮತಿ ಆಸ್ಮಾ ಶೇಕ್ ಕಾರ್ಯಕ್ರಮವನ್ನು ನಿರ್ವಹಿಸಿದರು.

Share This
300x250 AD
300x250 AD
300x250 AD
Back to top